ಹುಲಿಗೆಮ್ಮ ದೇಗುಲ ಹುಂಡಿಗೆ ಸಿದ್ದು ಅಭಿಮಾನಿ ವಿಶೇಷ ಕಾಣಿಕೆ; : 35 ದಿನದಲ್ಲಿ ಒಂದು ಕೋಟಿ ರೂ ಸಂಗ್ರಹ!

By Ravi Janekal  |  First Published May 26, 2023, 10:17 AM IST

ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರವಾಗಿದೆ. 


ಕೊಪ್ಪಳ (ಮೇ.26) ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರವಾಗಿದೆ. 

ಕೇವಲ ಮೂವತ್ತೈದು ದಿನಗಳಲ್ಲಿ 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾಗಿರುವ ಒಟ್ಟು ಹಣ 1,02,52,900 ರೂಪಾಯಿ ಸಂಗ್ರಹವಾಗಿದೆ. ಇದರ ಜತೆಗೆ 350 ಗ್ರಾಂ ಬಂಗಾರ, 15 ಕೆಜಿ ಬೆಳ್ಳಿ ಸಂಗ್ರಹವಾಗಿದೆ.

Tap to resize

Latest Videos

undefined

ಮುಜರಾಯಿ ಇಲಾಖೆ‌(Mujurayi depertment) ವ್ಯಾಪ್ತಿಗೆ ಒಳಪಡುವ ಹುಲಿಗೇಮ್ಮ ದೇವಸ್ಥಾನ(Huligemma temple koppal). ಪ್ರತಿವರ್ಷ ನಡೆಯುವ ಜಾತ್ರೆಗೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾದಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಇದೀಗ ಜಾತ್ರೆ ಹಿನ್ನೆಲೆ ಇಷ್ಟೊಂದು ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ. ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯನಡೆಯಿತು.

 

ಹುಲಿಗೆಮ್ಮ ಜಾತ್ರೆಗೆ ಬರುತ್ತಿದೆ ಭಕ್ತಸಾಗರ: ಸಹಸ್ರಾರು ಪ್ರಾಣಿಬಲಿ ಅವ್ಯಾಹತ

ಹುಂಡಿಯಲ್ಲಿ ಬೆಳ್ಳಿ ಟಗರಿನ ಬಿಲ್ಲೆ ಪತ್ತೆ

ಮತ್ತೊಮ್ಮೆ ಸಿದ್ದರಾಮಯ್ಯ(Siddaramaiah) ಸಿಎಂ ಆಗಲು ಹುಂಡಿಯಲ್ಲಿ ಬೆಳ್ಳಿ ಟಗರಿನ ಬಿಲ್ಲೆ ಹಾಕಿರುಗುವುದು ಹುಂಡಿ ಹಣ ಎಣಿಕೆ ವೇಳೆ ಬೆಳಕಿಗೆ ಬಂದಿದೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯರ ಗೆಲುವಿಗೆ ರಾಜ್ಯಾದ್ಯಂತ ಅಭಿಮಾನಿಗಳು ಹೋಮ ಹವನ, ಹರಕೆ ವಿಶೇಷ ಪೂಜೆಗಳು ಮಾಡಿದ್ದರು. ಅಂತೆಯೇ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಸಿಎಂ ಆಗಲೆಂದು ಬೆಳ್ಳಿ ಟಗರಿನ ಬಿಲ್ಲೆ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಹಾಕಿರುವ ಅಭಿಮಾನಿ. 

click me!