* ಕೊಪ್ಪಳ ಜಿಲ್ಲಾಧಿಕಾರಿ ಮೌಖಿಕ ಅದೇಶದಂತೆ ಜಾತ್ರೆ ಅಚರಣೆ
* ಜಾತ್ರೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ
* ಕೊಪ್ಪಳ ಜಿಲ್ಲೆಯಲ್ಲಿರುವ ಐತಿಹಾಸಿಕನ ಹುಲಿಗೆಮ್ಮ ದೇವಸ್ಥಾನ
ಮುನಿರಾಬಾದ್(ಜೂ.07): ಶ್ರೀ ದೇವಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಸಾಂಕೇತಿಕವಾಗಿ ಆಚರಿಸಲಾಯಿತು ಎಂದು ಗ್ರಾಮದ ಹಿರಿಯರು, ದೈವದವರಾದ ಪ್ರಭುರಾಜ ಪಾಟೀಲ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಮೌಖಿಕ ಅದೇಶದಂತೆ ಜಾತ್ರೆ ಅಚರಿಸಲಾಯಿತು. ಜಾತ್ರೆಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಪ್ರಭುರಾಜ ಪಾಟೀಲ್ ತಿಳಿಸಿದ್ದಾರೆ.
ಹುಲಿಗೆಮ್ಮ ದೇವಿ ಜಾತ್ರೆ: ಕೊಪ್ಪಳ ಜಿಲ್ಲಾಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ?
ಜೂ. 3ರಿಂದ 4 ದಿನಗಳ ವರೆಗೆ ಜಾತ್ರೆ ನಿಮಿತ್ತ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಗ್ರಾಮದ ದೈವದವರು (ಬಾಬುದಾರರು), ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು.
ಕಳೆದ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ಹುಲಿಗೆಮ್ಮದೇವಿ ರಥೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಈ ಬಾರಿಯು ಅದೇ ಪ್ರಕ್ರಿಯೆಯನ್ನು ಮಾಡಲಾಯಿತು. ಒಂದು ವರ್ಷ ಅಮ್ಮನವರ ತೇರು ಎಳೆಯದಿದ್ದರೆ 3 ವರ್ಷ ರಥೋತ್ಸವವನ್ನು ಅಚರಿಸುವಂತಿಲ್ಲ. ಇದಲ್ಲದೇ ಗ್ರಾಮದಲ್ಲೂ ಯಾವುದೇ ಶುಭಕಾರ್ಯಗಳು ಮಾಡುವಂತಿಲ್ಲ. ಗ್ರಾಮದ ಹಾಗೂ ನಾಡಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮದ ದೈವದವರಾದ ದೇವಸ್ಥಾನದ ಅರ್ಚಕರು, ದೇಸಾಯಿ ಮನೆತನದವರು ಮಾಲೀಗೌಡ, ಪೊಲೀಸ್ ಗೌಡ, ಮೇಟಿ ಗೌಡ, ಜಂಗಮರು, ಶೆಟ್ಟರು, ಪಟ್ಟಣಶೆಟ್ಟಿ ಇವರು ದೇವಸ್ಥಾನದ ಸಿಬ್ಬಂದಿ ಸೇರಿ 4 ದಿನಗಳ ಕಾಲ ಹುಲಿಗೆಮ್ಮ ದೇವಿ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳನ್ನು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡದೇ ಆಚರಿಸಲಾಯಿತು ಎಂದು ದೈವದವರಾದ ಪ್ರಭರಾಜ ಪಾಟೀಲ್ ತಿಳಿಸಿದ್ದಾರೆ.