ಹುಬ್ಬಳ್ಳಿಯ ನಂದಿನಿ ಮಿಸಸ್‌ ಗ್ಲಾಮರಸ್‌ ದಿವಾ-2019

Published : Sep 19, 2019, 09:37 AM IST
ಹುಬ್ಬಳ್ಳಿಯ ನಂದಿನಿ ಮಿಸಸ್‌ ಗ್ಲಾಮರಸ್‌ ದಿವಾ-2019

ಸಾರಾಂಶ

ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಹುಬ್ಬಳ್ಳಿ (ಸೆ.19): ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ  ಚೆನ್ನೈ ನಗರದಲ್ಲಿ ನಡೆದ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಮಿಸಸ್‌ ಇಂಡಿಯಾ ಪೇಜೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ದೀಪಾಲಿ ಫಡ್ನೀಸ್‌ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂದಿನಿ ಎಂಬಿಎ ಪದವೀಧರೆ ಆಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಪ್ರತಿಷ್ಠಿತ ಎನ್‌ಜಿಒ ಕಂಪನಿಗಳ ರಾಯಭಾರಿ ಆಗಿಯೂ ಸಮಾಜ ಸೇವೆ ಗೈಯುತ್ತಿದ್ದಾರೆ. ಇವರ ಎಲ್ಲ ಕಾರ್ಯ ಕೆಲಸಗಳಿಗೆ ಇವರ ಪತಿ ಚಂದ್ರಶೇಖರಗೌಡ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಮಿಸಸ್‌ ಕರ್ನಾಟಕ-2019ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಿಯೇಟಿವ್‌ ಕ್ವೀನ್‌ ಆಗಿ ಹೊರಹೊಮ್ಮಿದ್ದರು. ಇವರಿಗೆ ಮೆಂಟರ್‌ ಆಗಿ ಪ್ರತಿಭಾ ಸಂಶಿಮಠ ಕಾರ್ಯ ನಿರ್ವಹಿಸಿದ್ದರು.
 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ