ಈಶ್ವರಪ್ಪ ಅವರನ್ನ ಸಂಪುಟದಿಂದ ಕೈಬಿಡಿ: ಮಾಜಿ ಸಂಸದ ಧ್ರುವನಾರಾಯಣ್‌

By Web DeskFirst Published Sep 19, 2019, 9:07 AM IST
Highlights

ದಸರಾದಲ್ಲಿ ಈಶ್ವರಪ್ಪಗೆ ಭೋವಿ ಸಮಾಜದಿಂದ ಘೇರಾವ್‌ ಎಚ್ಚರಿಕೆ| ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ‘ವಡ್ಡ- ದಡ್ಡ’ ಎನ್ನುವ ಮೂಲಕ ಭೋವಿ ಸಮಾಜವನ್ನು ಅವಮಾನಿಸಿದ್ದಾರೆ:ಮಾಜಿ ಸಂಸದ ಆರ್‌. ಧ್ರುವನಾರಾಯಣ್‌| ಈಶ್ವರಪ್ಪರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು| ಮಾಜಿ ಸಿಎಂ ಅವರನ್ನು ಟೀಕಿಸಲು ಒಂದು ಸಮಾಜದ ಹೆಸರನ್ನು ಬಳಕೆ ಮಾಡಿದ್ದು ಸರಿಯಲ್ಲ| 

ಮಂಡ್ಯ:(ಸೆ .19) ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ವಡ್ಡ- ದಡ್ಡ’ ಎನ್ನುವ ಮೂಲಕ ಭೋವಿ ಸಮಾಜವನ್ನು ಅಮಾನಿಸಿದ್ದು, ಇದೊಂದು ಜಾತಿನಿಂದನಾ ಪ್ರಕರಣವಾಗಿದೆ. ಈ ಕೂಡಲೇ ಸಮಾಜದ ಕ್ಷಮೆಯಾಚಿಸಬೇಕು. ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಈಶ್ವರಪ್ಪರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಆಗ್ರಹಿಸಿದ್ದಾರೆ. 

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಒಬ್ಬ ಹಿರಿಯ ರಾಜಕಾರಣಿಯಾಗಿದ್ದು, ಕೆಲವು ಶಬ್ದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಮಾಜಿ ಸಿಎಂ ಅವರನ್ನು ಟೀಕಿಸಲು ಒಂದು ಸಮಾಜದ ಹೆಸರನ್ನು ಬಳಕೆ ಮಾಡಿದ್ದು ಸರಿಯಲ್ಲ. ಇದು ಎಸ್ಸಿ, ಎಸ್ಟಿಕಾಯ್ದೆಯಡಿ ದಾಖಲು ಪ್ರಕರಣವಾಗಿದೆ. ಅವರು ಬಳಸಿರುವ ಪದವನ್ನು ಕೂಡಲೇ ವಾಪಸ್‌ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಇದೆ ವೇಳೆ ಎಚ್ಚರಿಕೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕದಲ್ಲಿ ಬಸವಣ್ಣ, ಕನಕದಾಸರು ಹುಟ್ಟಿದ್ದಾರೆ. ಇದೊಂದು ಪ್ರಗತಿಪರ ರಾಜ್ಯವಾಗಿದೆ. ಈಶ್ವರಪ್ಪನವರು ಕನಕದಾಸರ ಕೀರ್ತನೆಗಳನ್ನಾದರೂ ಓದಲಿ. ಹಿಂದೆಯೇ ಅನೇಕ ಬಾರಿ ಇದೇ ರೀತಿ ಮಾತನಾಡಿದ್ದಾರೆ. ಈಗ ತಾವೊಬ್ಬರು ಮಂತ್ರಿ ಎಂಬುದನ್ನು ಮರೆಯದ ಘನತೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಭೋವಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್‌ ಅವರು, ಈಶ್ವರಪ್ಪ ಕೂಡಲೇ ಭೋವಿ ಸಮಾಜದ ಕ್ಷಮೆಯಾಚಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ. ಘೇರಾವ್‌ ಹಾಕುತ್ತೆವೆ. ಯಡಿಯೂರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಉಪಸ್ಥಿತರಿದ್ದರು. 

click me!