ಜನೆವರಿ 10ಕ್ಕೆ ಹುಬ್ಬಳ್ಳಿ Janta Bazar ಲೋಕಾರ್ಪಣೆ

By Kannadaprabha NewsFirst Published Dec 7, 2022, 10:11 AM IST
Highlights

ಸ್ಮಾರ್ಟ್‌ಸಿಟಿ ಯೋಜನೆಯಡಿ ಬರೋಬ್ಬರಿ . 18.35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಜನತಾ ಬಜಾರ್‌ ಮಾರುಕಟ್ಟೆಡಿ. 10ರಂದು ಉದ್ಘಾಟನಾ ಭಾಗ್ಯ ಕಾಣಲಿದೆ. ಮಾರುಕಟ್ಟೆಯ ಜತೆಗೆ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ ರಸ್ತೆ ಹಾಗೂ ಇತರ ಕಟ್ಟಡಗಳ ಲೋಕಾರ್ಪಣೆಗೂ ಕಾಲ ಕೂಡಿ ಬಂದಂತಾಗಿದೆ.

ಬಾಲಕೃಷ್ಣ ಜಾಡಬಂಡಿ

 ಹುಬ್ಬಳ್ಳಿ (ಡಿ.7) : ಸ್ಮಾರ್ಟ್‌ಸಿಟಿ ಯೋಜನೆಯಡಿ ಬರೋಬ್ಬರಿ . 18.35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಜನತಾ ಬಜಾರ್‌ ಮಾರುಕಟ್ಟೆಡಿ. 10ರಂದು ಉದ್ಘಾಟನಾ ಭಾಗ್ಯ ಕಾಣಲಿದೆ. ಮಾರುಕಟ್ಟೆಯ ಜತೆಗೆ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿರುವ ರಸ್ತೆ ಹಾಗೂ ಇತರ ಕಟ್ಟಡಗಳ ಲೋಕಾರ್ಪಣೆಗೂ ಕಾಲ ಕೂಡಿ ಬಂದಂತಾಗಿದೆ.

2019ರ ಆಗಸ್ಟ್‌ನಲ್ಲಿ ಪ್ರಾರಂಭವಾಗಿದ್ದ ಕಾಮಗಾರಿ 2021ರ ಫೆಬ್ರವರಿಯಲ್ಲಿ ಮುಗಿಯಬೇಕಿತ್ತು. ಕೋವಿಡ್‌ ಕಾರಣದಿಂದ ವಿಳಂಬಗೊಂಡಿತ್ತು. ಕೆಲವು ತಿಂಗಳ ಹಿಂದೆಯೇ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಹೀಗಾಗಿ ಎರಡ್ಮೂರು ಬಾರಿ ಜನತಾ ಬಜಾರ್‌ನ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಶೀಘ್ರ ಮಾರುಕಟ್ಟೆಲೋಕಾರ್ಪಣೆಗೊಳಿಸುವಂತೆ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಒತ್ತಡ ಹೇರಿದ್ದರು. ಅದರಂತೆ ಉದ್ಘಾಟನೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಮಾರುಕಟ್ಟೆಉದ್ಘಾಟನೆಯಾದರೆ ನೂರಾರು ವ್ಯಾಪಾಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ವ್ಯಾಪಾರಸ್ಥರಿಂದ ರಸ್ತೆ ಅತಿಕ್ರಮಣ, ಪಾರ್ಕಿಂಗ್‌ನಂತಹ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಹುಬ್ಬಳ್ಳಿ ಸ್ಮಾರ್ಟಿ ಸಿಟಿ ಅಧಿಕಾರಿಗಳ ಸ್ಮಾರ್ಟ್ ಲೂಟಿ, ಲೋಕಾಯುಕ್ತಕ್ಕೆ ದೂರು..!

ಮಾರುಕಟ್ಟೆಯ ನೂತನ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಗ್ರೌಂಡ್‌ ಫೆä್ಲೕರ್‌ನಲ್ಲಿ 50, ಮೊದಲ ಮಹಡಿಯಲ್ಲಿ 71 ಕಟ್ಟಾ(ಕಟ್ಟೆ) ನಿರ್ಮಿಸಲಾಗಿದೆ. ಗ್ರೌಂಡ್‌ ಫೆä್ಲೕರ್‌ನಲ್ಲಿ 31, ಮೊದಲ ಮಹಡಿಯಲ್ಲಿ 22 ಮಳಿಗೆ ನಿರ್ಮಿಸಲಾಗಿದೆ. ಜತೆಗೆ 2ನೇ ಮಹಡಿಯಲ್ಲಿ 20 ಕಚೇರಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ. 2ನೇ ಮಹಡಿಯಲ್ಲಿ 6500 ಚದರ ಅಡಿ, ಮೂರನೇ ಮಹಡಿಯಲ್ಲಿ 14000 ಚದರ ಅಡಿ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಮೀಸಲೀಡಲಾಗಿದೆ. ಕುಡಿಯುವ ನೀರು, ಶೌಚಾಲಯ, ಲಿಫ್‌್ಟ, ಸೂಕ್ತ ಗಾಳಿ, ಬೆಳಕನ್ನು ಈ ಕಟ್ಟಡ ಹೊಂದಿದೆ.

ಮಾರುಕಟ್ಟೆಯ ಹೊಸ ಕಟ್ಟಡದಲ್ಲಿದ್ದ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ವ್ಯಾಪಾರಸ್ಥರ ಸಲಹೆ ಕೇಳದೆ ಮಳಿಗೆ ನಿರ್ಮಿಸಲಾಗಿದೆ. ವ್ಯಾಪಾರ ಮಾಡುವ ಕಟ್ಟಾದಲ್ಲಿ ಭದ್ರತೆಯಿಲ್ಲ. ಹೂ-ಹಣ್ಣು, ತರಕಾರಿ ಇಡಲು ಸೂಕ್ತ ಜಾಗವಿಲ್ಲ. ಈ ಹಿಂದೆ 177 ವ್ಯಾಪಾರಿಗಳಿದ್ದೇವು. ಈಗ 121 ಮಂದಿಗೆ ಮಾತ್ರ ಕಟ್ಟಾನಿರ್ಮಿಸಲಾಗಿದೆ. ಉಳಿದವರ ಗತಿಯೇನು ಎಂದು ಪ್ರಶ್ನಿಸುತ್ತಾರೆ ತರಕಾರಿ ವ್ಯಾಪಾರಸ್ಥ ಮಂಜುನಾಥ ಬನ್ನಿದಿನ್ನಿ.

ಜನತಾ ಬಜಾರ್‌ ಮಾರುಕಟ್ಟೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಇದ್ದ 177 ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಮಳಿಗೆ ನೀಡುವುದಾಗಿ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಅದರಂತೆ ನಡೆದುಕೊಳ್ಳಬೇಕು. ಉದ್ಘಾಟನೆಯಾದರೂ ಪರವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಉಳಿದ 56 ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಜನತಾ ಬಜಾರ್‌ನ ವ್ಯಾಪಾರಸ್ಥರ ಆಗ್ರಹ.

ಅದೇ ದಿನ ಸ್ಮಾರ್ಚ್‌ಸಿಟಿ ಯೋಜನೆಯಡಿ ಗಣೇಶ ಪೇಟೆಯಲ್ಲಿ . 5.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್‌ ಮೀನು ಮಾರುಕಟ್ಟೆಸೇರಿ ಹಲವು ಕಾಮಗಾರಿ ಉದ್ಘಾಟನೆ ನೆರವೇರಿಸಲು ಸ್ಮಾರ್ಚ್‌ಸಿಟಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಹಾಗಾಗಿ ಕಳೆದ 5ರಿಂದ 6 ತಿಂಗಳ ಹಿಂದೆ ಪೂರ್ಣಗೊಂಡಿದ್ದ ಮೀನು ಮಾರುಕಟ್ಟೆಕೊನೆಗೂ ಉದ್ಘಾಟನಾ ಭಾಗ್ಯ ಕಾಣಲಿದೆ.

Hubballi Smart City ಸಭೆ ಅರ್ಧಕ್ಕೆ ಮೊಟಕು, ಅಧಿಕಾರಿಗಳನ್ನು ಬೆಂಡೆತ್ತಿದ ಸದಸ್ಯರು

ಜನತಾ ಬಜಾರ್‌ ಮಾರುಕಟ್ಟೆಹಾಗೂ ಮೀನು ಮಾರುಕಟ್ಟೆಉದ್ಘಾಟನೆಗೆ ಡಿ. 10ರಂದು ದಿನಾಂಕ ಅಂತಿಮಗೊಳಿಸಲಾಗಿದೆ. ಅವಕಾಶ ಸಿಕ್ಕರೆ ಪೂರ್ಣಗೊಂಡಿರುವ ಇತರ ಕಾಮಗಾರಿಗಳನ್ನು ಅದೇ ದಿನ ಉದ್ಘಾಟಿಸಲಾಗುವುದು.

ಶಕೀಲ್‌ ಅಹ್ಮದ್‌, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

ಪಾಲಿಕೆ ಈ ಹಿಂದೆ ಭರವಸೆ ನೀಡಿದಂತೆ 177 ಕಟ್ಟಾಗಳನ್ನು ನಿರ್ಮಿಸಿಕೊಡಬೇಕು. ಈಗ 121 ಮಾತ್ರ ನಿರ್ಮಾಣವಾಗಿವೆ. 56 ವ್ಯಾಪಾರಸ್ಥರಿಗೆ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಸ್ಮಾರ್ಚ್‌ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಬೇಕು.

ಪ್ರೇಮನಾಥ ಚಿಕ್ಕತುಂಬಳ, ಜನತಾ ಬಜಾರ್‌ ಸೂಪರ್‌ ಮಾರ್ಕೆಟ್‌ನ ಚಿಕ್ಕ ವರ್ತಕರ ಸಂಘದ ಗೌರವಾಧ್ಯಕ್ಷ

click me!