ಮಹಿಳಾ ಜನಾಕ್ರೋಶ ಸಭೆಗೆ ಕರೆ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ

Published : Apr 27, 2026, 05:24 PM IST
prahlad joshi

ಸಾರಾಂಶ

ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್‌ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ (ಏ.27): ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್‌ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹಿಳಾ ಜನಾಕ್ರೋಶ ಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 40 ವರುಷಗಳಿಂದ ಮಹಿಳಾ ಮೀಸಲಾತಿ ನೀಡಬೇಕು. ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿಯಾಗಬೇಕು. ಈ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬುದು ಚರ್ಚೆ ನಡೆಯುತ್ತಲೇ ಇದೆ. ಮೊದಲಿಗೆ ಈ ಕಾಯ್ದೆಯನ್ನು ದೇವೇಗೌಡರು ಜಾರಿಗೆ ತರಲು ಪ್ರಯತ್ನಿಸಿದರು, ಆಗ ದೇವೇಗೌಡರಿಗೆ ಪ್ರಧಾನಿಯಾಗಲು ಕಾಂಗ್ರೆಸ್ ಬೆಂಬಲವಿತ್ತು. ಆದರೆ ಈ ಕಾಯ್ದೆ ಜಾರಿಗೆ ತರಲು ಬೆಂಬಲಿಸಲಿಲ್ಲ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ ನಮಗೆ ಸಪೋರ್ಟ್ ಮಾಡಲಿಲ್ಲ.

2009ರಲ್ಲಿ ಚುನಾವಣೆಯಾದ ನಂತರ ಯುಪಿಎ ಸರ್ಕಾರವಿತ್ತು ರಾಜ್ಯ ಸಭೆಯಲ್ಲಿ ಅವರಿಗೆ ಬಹುಮತ ವಿರಲಿಲ್ಲ. 2010ರಲ್ಲಿ ಆ ಬಿಲ್ ಬಿಜೆಪಿ ಬೆಂಬಲದಿಂದ ಪಾಸಾಯಿತು. ಅದನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಜಾರಿಗೆ ತರಲಿಲ್ಲ. ಸುಷ್ಮಾ ಸ್ವರಾಜ ಅವರು ಇದ್ದಾಗ ಅದನ್ನು ಲೋಕಸಭೆಯಲ್ಲಿ ತನ್ನಿ ಅದನ್ನು ನಾವು ಬೆಂಬಲಿಸುತ್ತೇವೆ ಎಂದು ಸೋನಿಯಾ ಗಾಂಧಿ ಅವರಿಗೆ ಹೇಳಿದರೂ ಲೋಕಸಭೆಗೆ ತರಲಿಲ್ಲ ಎಂದರು

ಮಹಿಳೆಯರಿಗೆ ಅವಶ್ಯಕತೆ ಇದೆ

2023ರಲ್ಲಿ ನಾವು ಈ ಕಾಯ್ದೆ ಮಂಡಿಸಿದಾಗ ಮುಂದೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ನವರು ಒಪ್ಪಿದರು. ಈಗ ಮತ್ತೆ ವಿರೋಧಿಸಿದ್ದಾರೆ. ಅವರ ವಿರೋಧದಿಂದಾಗಿ ಲೋಕಸಭೆಯಲ್ಲಿ ವಿಫಲವಾಯಿತು ಎಂದರು. ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಮಸೂದೆ ದೇಶಕ್ಕೆ ಮತ್ತು ಮಹಿಳೆಯರಿಗೆ ಅವಶ್ಯಕತೆ ಇದೆ. 1984ರಲ್ಲಿ 2/3 ಮೆಜಾರಿಟಿ ಇತ್ತು. ಅವರಿಗೆ ಒಳ್ಳೆ ಅವಕಾಶ ಇತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಆದರೆ ಈಗ 2/3 ಇಲ್ಲದ ಪಕ್ಷ ನಮಗೆ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು. ನಾವು ಜಾರಿಗೆ ತರಲು ಹೊರಟಿರುವ ಕಾನೂನನ್ನು ಕಾಂಗ್ರೆಸ್ ನವರು ಸೋಲಿಸಿದರು ಎಂದರು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ಮಹಿಳಾ ಮಿಸಲಾಯಿತಿಯನ್ನು ಸಹಿಸದ ಮತ್ತು ಮಹಿಳೆಯರು ರಾಜಕೀಯವಾಗಿ ಮುಂದೆ ಬರಬಾರದಂತೆ ಕಾಂಗ್ರೆಸ್ ದೊಡ್ಡ ಷಡ್ಯಂತ್ರದಿಂದ ಇದನ್ನು ಸೋಲಿಸಿದೆ. ಇದಕ್ಕೆ ತಕ್ಕ ಪಾಠ ಕಲಿಸಲು ಮಹಿಳೆಯರು ಮೇ.1 ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.

PREV
Read more Articles on
click me!

Recommended Stories

'ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ' ಕೋಡಿ ಶ್ರೀಗಳ ಎಚ್ಚರಿಕೆ: ದೇಶಕ್ಕೆ ಕಾದಿದೆಯೇ ಮಹಾ ಸಂಕಷ್ಟ?
ಮೇ ತಿಂಗಳಲ್ಲಿ ಬ್ಯಾಂಕ್ ಕೆಲ್ಸ ಇದ್ದರೆ ಇದನ್ನು ಗಮನಿಸಿ: 13 ದಿನಗಳು ಕೆಲಸಕ್ಕೆ ರಜೆ- ಡಿಟೇಲ್ಸ್​ ಇಲ್ಲಿದೆ