ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಯುವತಿಯ ಹಳೇ ವೀಡಿಯೋ ವೈರಲ್

Kannadaprabha News   | Kannada Prabha
Published : Apr 07, 2026, 06:21 AM IST
Hubballi love jihad big twist hindu girl youturned assault case

ಸಾರಾಂಶ

ಅನ್ಯ ಕೋಮಿನ ಯುವಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಹುಬ್ಬಳ್ಳಿಯ ಯುವತಿಯೊಬ್ಬಳ ಹಳೇ ವೀಡಿಯೋ ಇದೀಗ ವೈರಲ್ ಆಗಿದ್ದು ಈಗಿನ ಪ್ರಕರಣದೊಂದಿಗೆ ಥಳಕು ಹಾಕಲಾಗುತ್ತಿದೆ. 

ಹುಬ್ಬಳ್ಳಿ (ಏ.7): ಬೆಳಗ್ಗೆಯಷ್ಟೇ ಅನ್ಯ ಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದ ಯುವತಿ ಸಂಜೆ ಉಲ್ಟಾ ಹೊಡೆದಿದ್ದಾಳೆ. ಯುವಕನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ನನಗೆ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆನ್ನಲಾಗುತ್ತಿದೆ. 

ಪ್ರಕರಣ ದಾಖಲಿಸಿದ ವೇಳೆ ಸ್ವತಃ ಸಂತ್ರಸ್ತೆ ಮಾತನಾಡಿದ ಹಳೇ ವಿಡಿಯೋ ಹೊರಬಿದ್ದಿತ್ತು. ಅದರಲ್ಲಿ ಸಂತ್ರಸ್ತೆ ಮಾತನಾಡಿ, ಮುಫೀಜ್‌ ಮತ್ತು ನಾನು ಪ್ರೀತಿಸಿದೆವು. ತಂದೆ-ತಾಯಿ ತಿಳಿ ಹೇಳಿದ್ದಕ್ಕೆ ಬ್ರೇಕ್ ಮಾಡಿಕೊಂಡೆ. ಮದುವೆ ರಿಜಿಸ್ಟ್ರೇಷನ್ ರದ್ದುಗೊಳಿಸಲು ಅಫೀಲು ಮಾಡಿದ್ದೇನೆ. ಆದರೆ, ಆತನ ಬಳಿ ಇರುವ ಮೊಬೈಲ್, ಪೆನ್‌ಡ್ರೈವ್, ಲ್ಯಾಪ್‌ಟಾಪ್‌ನಲ್ಲಿ ಜತೆಗಿರುವ ಫೋಟೋ, ವಿಡಿಯೋ ಇದೆ. ಪೊಲೀಸರು ಅವುಗಳನ್ನು ನನಗೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಳು.

ಏತನ್ಮಧ್ಯೆ, ಸ್ವತಃ ಯುವತಿಯೇ ಮಾತನಾಡಿರುವ ಬೇರೆ ವಿಡಿಯೋಗಳು ಭಾನುವಾರ ಸಂಜೆ ಬಹಿರಂಗೊಂಡಿವೆ. ಸಂತ್ರಸ್ತೆಯ ಮತ್ತೊಂದು ವಿಡಿಯೋದಲ್ಲಿ, ಮುಫೀಜ್ ವಿರುದ್ಧ ಪ್ರಕಣ ದಾಖಲಿಸಲು ನನ್ನ ಒಪ್ಪಿಗೆ ಇರಲಿಲ್ಲ. ಕೆಲವರು ಬಲವಂತವಾಗಿ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಮುಫೀಜ್ ಜತೆಗೆ ಸ್ವಯಂ ಪ್ರೇರಣೆಯಿಂದ ಮದುವೆಗೆ ಮುಂದಾಗಿದ್ದಾಗ ಆತನ ಕುಟುಂಬಸ್ಥರು ನಿರಾಕರಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದೆವು. ರಿಜಿಸ್ಟರ್‌ ಮದುವೆ ಆಗಲು ಅವರು ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ನಾನು ಕೂಡ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿ ಸಹಿ ಕೂಡ ಮಾಡಿದ್ದೇನೆ. ಇದರಲ್ಲಿ ಅವರ ಕುಟುಂಬದ ಪಾತ್ರವೇನೂ ಇಲ್ಲ ಎಂದು ಹೇಳಿಕೊಂಡಿದ್ದಾಳೆ.

PREV
Read more Articles on
click me!

Recommended Stories

PUC Results 2026: ಮಗನ ಜೊತೆಗೆ ಪರೀಕ್ಷೆ ಬರೆದ 57ರ ತಂದೆ ಸಹ ಪಿಯುಸಿ ಪಾಸ್!
ಬೆಂಗಳೂರು-ನೆಲಮಂಗಲ ಸಂಪರ್ಕಿಸುವ ಪೀಣ್ಯ ಫ್ಲೈಓವರ್ 4 ದಿನಗಳ ಕಾಲ ಬಂದ್: ಇಲ್ಲಿದೆ ಪರ್ಯಾಯ ಮಾರ್ಗಗಳ ಪಟ್ಟಿ!