ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ವಿರೋಧ: ಕನಕ ಜಯಂತಿಗೆ ಶ್ರೀರಾಮ ಸೇನೆ ಮನವಿ

By Suvarna NewsFirst Published Nov 7, 2022, 4:06 PM IST
Highlights

Hubballi Idgah Row: ಹುಬ್ಬಳ್ಳಿ ಈದ್ಗಾ ಮೈದಾನ ಅರ್ಥಾತ್ ರಾಣಿ ಚನ್ನಮ್ಮ ಮೈದಾನ ಮತ್ತೊಮ್ಮೆ ವಿವಾದದ ಕೇಂದ್ರವಾಗಿದೆ 

ಹುಬ್ಬಳ್ಳಿ (ನ. 07): ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಎಐಎಮ್‌ಐಎಮ್‌ (AIMIM) ನವೆಂಬರ್ 10ರಂದು ಟಿಪ್ಪು ಜಯಂತಿ (Tippu Jyanti) ಆಚರಣೆಗೆ ಅನುಮತಿ ಕೋರಿ ಬೆನ್ನಲ್ಲೇ ಶ್ರೀರಾಮ ಸೇನೆ (Sri Ram Sene) ಇದಕ್ಕೆ ವಿರೋಧಿ ವ್ಯಕ್ತಪಡಿಸಿದ್ದು ಜೊತೆಗೆ  ನವೆಂಬರ್ 11ಕ್ಕೆ  ಕನಕದಾಸ ಜಯಂತಿ (Kanakadasa Jayanti) ಆಚರಣೆಗೆ ಅನುಮತಿ ನೀಡುವಂತೆ ಪ್ರತಿಭಟನೆ ಆರಂಭಿಸಿದೆ. ಇದರಿಂದಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಅರ್ಥಾತ್ ರಾಣಿ ಚನ್ನಮ್ಮ ಮೈದಾನ ಮತ್ತೊಮ್ಮೆ ವಿವಾದ ಕೇಂದ್ರವಾಗಿದೆ.  ಈಗಾಗಲೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಕಾನೂನು ಹೋರಾಟ ಹೋರಾಟದ ನಡೆಸಿ ಮೂರು ದಿನಗಳ ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆದಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ.  

ಇದೀಗ ಎಐಎಮ್‌ಐಎಮ್‌ ನವೆಂಬರ್11 ರಂದು ತಮಗೂ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿದೆ. ಸಂವಿಧಾನ ಎಲ್ಲರಿಗೂ ಸಮಾನ ಈ ದಿಸೆಯಲ್ಲಿ ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಿಸಲು ಸಹಕಾರ ನೀಡುವಂತೆ AIMIM ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಶ್ರೀರಾಮ ಸೇನಾ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳು ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. 

ಹೋರಾಟದ ಎಚ್ಚರಿಕೆ: ಅದರಲ್ಲೂ ಪ್ರಮೋದ್ ಮುತಾಲಿಕ್ (Pramod Muthalik) ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದ್ದೆ ಆದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಶ್ರೀರಾಮ ಸೇನಾ ಕಾರ್ಯಕರ್ತರು ನವೆಂಬರ್.11 ರಂದು ರಾಣಿ ಚೆನ್ನಮ್ಮ ಮೈದಾನದಲ್ಲಿಯೇ ಕನಕದಾಸ ಜಯಂತಿ ಆಚರಣೆಗೆ ಅನುಮತಿ ನೀಡವಂತೆ ಮನವಿ ಸಲ್ಲಿಸಿದ್ದು. ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ಮೇಯರ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

ಸಮಾಜ ಸುಧಾರಕರು, ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ಶ್ರೀರಾಮ ಸೇನಾ ಸಂಘಟನೆಯ ವತಿಯಿಂದ ರಾಣಿ ಚೆನ್ನಮ್ಮ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲು ಯೋಚಿಸಿದ್ದೇವೆ‌. ಅಂದು ಸಂಗೀತ, ನೃತ್ಯ, ದೇಶ ಭಕ್ತಿಯ ಕಾರ್ಯಕ್ರಮ, ಸಾಂಸ್ಕೃತಿಕ ಡೊಳ್ಳಿನ ಕುಣಿತ ಸೇರಿದಂತೆ ಮುಂತಾದ ಕಾರ್ಯಕ್ರಮ ಆಯೋಜಿಸಲಾಗಿದೆ, ಹಾಗಾಗಿ ನಮಗೂ ಚೆನ್ನಮ್ಮ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಅನುಮತಿ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. 

ಈ ಮೂಲಕ ಹುಬ್ಬಳ್ಳಿಯ ಈದ್ಗಾ ಮೈದಾನ ಮತ್ತೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಮಹಾನಗರ ಪಾಲಿಕೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೊದು ಕುತೂಹಲ ಮೂಡಿಸಿದೆ. ಕನಕದಾಸ ಜಯಂತಿ ಆಚರಣೆಗೆ ಅನುಮತಿ ಕೋರಿ ಮನವಿ ಸಲ್ಲಿಸುವ ವೇಳೆಯಲ್ಲಿ ಶ್ರೀರಾಮ ಸೇನಾದ ಅಪ್ಪಣ್ಣ ದಿವಟಗಿ, ಮಂಜು ಕಾಟಕರ್, ಬಸು ದುರ್ಗದ, ಪ್ರವೀಣ ಮಾಳದಕರ ಸೇರಿದಂತೆ ಇತರರು ಭಾಗಿಯಾಗಿದ್ದರು. 

click me!