'ಕುಡುಕರನ್ನ ಮನೆಗೆ ತಲುಪಿಸುವ ಜವಾಬ್ದಾರಿ ಬಾರ್‌ ಮಾಲೀಕರದ್ದು'

By Suvarna News  |  First Published Dec 30, 2019, 2:28 PM IST

ಹೊಸ ವರ್ಷ ಸ್ವಾಗತಕ್ಕೆ ಹುಬ್ಬಳ್ಳಿ ಧಾರವಾಡ ಸಜ್ಜು| ಅವಳಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ| ಬಾರ್‌ನಲ್ಲಿ ಕುಡಿದ ಪಾನಮತ್ತರಾಗುವವರನ್ನ ಸರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ಬಾರ್ ಮಾಲೀಕರದ್ದು ಎಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್| ಕ್ಯಾಬ್, ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಬಾರ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ|


ಹುಬ್ಬಳ್ಳಿ(ಡಿ.30): ಹೊಸ ವರ್ಷಾಚರಣೆಗೆ ಹುಬ್ಬಳ್ಳಿ ಧಾರವಾಡ ಅವಳಿ‌ನಗರ ಸಕಲ ಸಜ್ಜುಗೊಂಡಿದೆ. ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಅವಳಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ಹೇಳಿದ್ದಾರೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬಾರ್‌ನಲ್ಲಿ ಕುಡಿದ ಪಾನಮತ್ತರಾಗುವವರನ್ನ ಸರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ಬಾರ್ ಮಾಲೀಕರದ್ದಾಗಿದೆ. ಕ್ಯಾಬ್, ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಬಾರ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಾವುದೇ ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವುದು ಕಡ್ಡಾಯವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಾರ್ ಮಾಲೀಕರು ಎಚ್ಚರ ವಹಿಸಬೇಕು. ಬಾರ್‌ಗಳಲ್ಲಿ ಬೌನ್ಸರ್, ಸೆಕ್ಯೂರಿಟಿ, ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. 

ಪೊಲೀಸ್ ಇಲಾಖೆಯಿಂದ ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಅವಳಿ ನಗರದಲ್ಲಿ  20 ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಕಡಿದು ವಾಹನ ಚಾಲನೆ ಮಾಡಿದ್ರೆ ಕಾನೂನು ಕ್ರಮದ ತೆಗೆದುಕೊಳ್ಳಲಾಗುವುದು. ಬೈಕ್ ರೇಸಿಂಗ್, ವ್ಹೀಲಿಂಗ್, ತ್ರಿಬಲ್ ರೈಡ್,  ಕರ್ಕಶ ಶದ್ಧ ಮಾಡುವ ವಾಹನಗಳ‌ ಮೇಲೆ‌ ಹದ್ದಿನ ಕಣ್ಣು ಇಡಲಾಗಿದೆ ಎಂದು ತಿಳಿಸಿದ್ದಾರೆ. 
ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!