ಅಮೆಜಾನ್‌ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ್ರೆ ಬಂದಿದ್ದು ಮಾತ್ರ ಖಾಲಿ ಬಾಕ್ಸ್| ಯಾದಗಿರಿ ನಗರದಲ್ಲಿ ನಡೆದ ಘಟನೆ| ಗ್ರಾಹಕನಿಗೆ ಮಹಾ ಮೋಸ ಮಾಡಿದ ಅಮೆಜಾನ್ ಕಂಪನಿ| ಅಮೆಜಾನ್ ವಿರುದ್ಧ ದೂರು ದಾಖಲಿಸಿದ ಗ್ರಾಹಕ|
ಯಾದಗಿರಿ(ಡಿ.30): ಈಗೇನಿದ್ದರೂ ಆನ್‌ಲೈನ್ ಜಮಾನ, ದಿನಸಿ ಸಾಮಾನು ಸೇರಿದಂತೆ ಎಲ್ಲ ತರಹದ ವಸ್ತುಗಳನ್ನು ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿಯೇ ತರಿಸಿಕೊಳ್ಳಬಹುದಾಗಿದೆ. ಆದರೆ, ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿಯೂ ಕೂಡ ವಂಚನೆಗಳು ಆಗುತ್ತಿವೆ.
undefined
ಇಲ್ಲೊಬ್ಬ ಯುವಕ ಅಮೆಜಾನ್‌ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ್ರೆ ಬಂದಿದ್ದು ಮಾತ್ರ ಖಾಲಿ ಬಾಕ್ಸ್. ಹೌದು, ಈ ಘಟನೆ ನಡೆದಿರೋದು ಯಾದಗಿರಿ ನಗರದಲ್ಲಿ. ನಗರದ ಶರಣಗೌಡ ಎಂಬುವರು ಅಮೆಜಾನ್‌ನಲ್ಲಿ ವ್ಯಾಕ್ಯೂಮ್ ಕ್ಲೀನರ್‌ವೊಂದನ್ನು ಆರ್ಡರ್ ಮಾಡಿದ್ದರು. ಆದರೆ, ಬಂದಿದ್ದು ಖಾಲಿ ಡಬ್ಬ. ಇದನ್ನ ನೋಡಿದ ಶರಣಗೌಡ ಅವರು ಬೆಚ್ಚಿಬಿದ್ದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಸೆಂಬರ್ 22 ರಂದು ಶರಣಗೌಡ ಅವರು ಅಮೆಜಾನ್‌ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ್ದರು. ಭಾನುವಾರ ಈ ಆರ್ಡರ್ ಬಂದಿದೆ. ಆರ್ಡರ್ ಬಂದಿದೆ ಅನ್ನೋ ಖುಷಿಯಲ್ಲಿ ಡಬ್ಬ ತೆಗೆದು ನೋಡಿದಾಗ ಶರಣಗೌಡ ಅವರಿಗೆ ಅಚ್ಚರಿ ಕಾದಿತ್ತು, ಡಬ್ಬದಲ್ಲಿ ಕೇವಲ ಖಾಗದ ಹಾಗೂ ರಟ್ಟುಗಳನ್ನು ತುಂಬಿಡಲಾಗಿತ್ತು. ಈ ಮೂಲಕ ಅಮೆಜಾನ್ ಎಂಬ ಆನ್‌ಲೈನ್ ಶಾಪಿಂಗ್ ತಾಣ ಶರಣಗೌಡ ಅವರಿಗೆ ಮಹಾ ಮೋಸ ಮಾಡಿದೆ.
ಈ ಬಗ್ಗೆ ಶರಣಗೌಡ ಅಮೆಜಾನ್ ಸೈಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಇಂದು [ಸೋಮವಾರ] ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿಯೂ ಅಮೆಜಾನ್ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ.