ಊಟ ಕೊಡುವ ನೆಪದಲ್ಲಿ ರೇ* ವಿಡಿಯೋ ವೈರಲ್ : ಅತ್ಯಾ*ಚಾರಿಗಳಿಗೆ ಮೀಸೆ, ತಲೆ ಬೋಳಿಸಿ ಥಳಿಸಿದ ಗ್ರಾಮಸ್ಥರು

Published : Jan 12, 2026, 09:42 AM IST
Crime News

ಸಾರಾಂಶ

ಮಹಿಳೆಗೆ ಮದ್ಯ ಕುಡಿಸಿ ಅತ್ಯಾ*ಚಾರ ಎಸಗಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದ ಮೂವರಲ್ಲಿ ಇಬ್ಬರನ್ನು ಗ್ರಾಮಸ್ಥರು ಹಿಡಿದು ತಲೆ ಬೋಳಿಸಿ ಥಳಿಸಿದ್ದಾರೆ. ಈ ಘಟನೆಯು ಶಿವಶಂಕರ ಕಾಲನಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಅತ್ಯಾ*ಚಾರ ಎಸಗಿದ್ದ ಇಬ್ಬರನ್ನು ಗ್ರಾಮಸ್ಥರೆ ಹಿಡಿದು ತಲೆ ಬೋಳಿಸಿ, ಥಳಿಸಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಅತ್ಯಾ*ಚಾರ ಎಸಗಿದ್ದಲ್ಲದೇ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಲ್ಲಿನ ಶಿವಶಂಕರ ಕಾಲನಿಯ ಶಿವಾನಂದ ಕಾನಾನ, ಗಣೇಶ ಗಿಡ್ಡನ್ನವರ, ಪ್ರದೀಪ ಎಂಬುವರನ್ನು ಹಿಡಿದ ಸ್ಥಳೀಯರು ತಲೆಬೋಳಿಸಿ, ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?

ಜ. 9ರಂದು ಆರೋಪಿಗಳು ಆಟೋದಲ್ಲಿ ಮಹಿಳೆಯನ್ನು ಹೆಗ್ಗೇರಿ ಮೈದಾನ ಬಳಿ ಕರೆದ್ಯೊಯ್ದು ಆಕೆಗೆ ಮದ್ಯಪಾನ ಮಾಡಿಸಿ ಅತ್ಯಾ*ಚಾರ ಎಸಗಿ ಆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಚಿತ್ರೀಕರಿಸಿದ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಗ್ರುಪ್‌ನಲ್ಲಿ ಪ್ರದೀಪ ಎಂಬಾತ ಶೇರ್ ಮಾಡಿದ್ದಾನೆ. ಈ ವಿಚಾರ ಶಿವಶಂಕರ ಕಾಲನಿಯ ಮುಖಂಡರು ಹಾಗೂ ನಿವಾಸಿಗಳಿಗೆ ತಿಳಿದಿದೆ. ತಕ್ಷಣವೇ ಅತ್ಯಾ*ಚಾರ ಆರೋಪಿಗಳಿಬ್ಬರನ್ನು ಕರೆಯಿಸಿ ಅವರ ತಲೆ, ಮೀಸೆ ಬೋಳಿಸಿ ಥಳಿಸಿದ್ದಾರೆ.

ಈ ಘಟನೆ ನಡೆದ ಬಳಿಕ ಆರೋಪಿಗಳು ಠಾಣೆಗೆ ಹೋಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಶಿವಶಂಕರ ಕಾಲನಿಯ ಪ್ರಮುಖರು ಸೇರಿದಂತೆ 40 ಜನರ ವಿರುದ್ಧ ದೂರು ನೀಡಿದ್ದಾರೆ. ಆಗ ಪೊಲೀಸರು ಪ್ರಮುಖರನ್ನು ಕರೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಮಹಿಳೆ ಮೇಲೆ ಅತ್ಯಾ*ಚಾರ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಮಹಿಳೆ ಮೇಲೆ ಅತ್ಯಾ*ಚಾರ ಎಸಗಿರುವ ವಿಡಿಯೋ, ಫೋಟೋ ವೈರಲ್ ಆದ ಬೆನ್ನಲ್ಲೆ ಸಂತ್ರಸ್ತ ಮಹಿಳೆಯ ಹುಡಕಾಟ ನಡೆಸಿ ಠಾಣೆಗೆ ಕರೆತರಲಾಗಿದೆ. ಇದಕ್ಕೂ ಪೂರ್ವದಲ್ಲಿ ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಅಷ್ಟರಲ್ಲಿ ಮಹಿಳೆ ಸಿಕ್ಕ ಹಿನ್ನೆಲೆಯಲ್ಲಿ ಅವರಿಂದ ದೂರು ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಪೂರ್ವದಲ್ಲಿ ವಿಷಯ ತಿಳಿದಿದ್ದ ಶಿವಶಂಕರ ಕಾಲನಿಯ ಮುಖಂಡರು ಹಾಗೂ ಸ್ಥಳೀಯರು ಆರೋಪಿಗಳನ್ನು ಕರೆಯಿಸಿ ಥಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾನಂದ ಹಲ್ಲೆ ನಡೆಸಿದ ಸಮುದಾಯದ ಮುಖಂಡರು ಸೇರಿದಂತೆ 40 ಜನರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕ್ರಮವಹಿಸಲಾಗಿದೆ ಎಂದು ಕಮಿಷನರ್ ಎನ್‌. ಶಶಿಕುಮಾರ ತಿಳಿಸಿದರು.

ಅತ್ಯಾ*ಚಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ

ಆರೋಪಿಗಳು ನೀಡಿದ ದೂರಿನ ಮೇಲೆ ಹಲ್ಲೆ ಮಾಡಿದ್ದ 40 ಜನರ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳಿಯರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಬುದ್ಧಿ ಹೇಳಿದವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಠಾಣೆ ಎದುರು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಆನಂತರ ಕೆಲವರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಘಟನೆಯೂ ನಡೆಯಿತು.

ಊಟ ಕೊಡುವ ನೆಪದಲ್ಲಿ ಅತ್ಯಾ*ಚಾರ

ಅತ್ಯಾ*ಚಾರಕ್ಕೆ ಒಳಗಾದ ಮಹಿಳೆ ಹಾವೇರಿ ಮೂಲದವಳು. ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಬಂದು ಹುಬ್ಬಳ್ಳಿಯ ಮಠ, ದೇವಸ್ಥಾನ, ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ಜೀವನ ಸಾಗಿಸುತ್ತಿದ್ದಳು. ಆಕೆಯ ಪತಿಯು ಒಂದು ಪ್ರಕರಣದಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿದ್ದಾನೆ. ಈ ಮಹಿಳೆಯು ನಿತ್ಯ ಮಠದಲ್ಲಿಯೇ ಊಟ, ತಿಂಡಿ ಮಾಡಿಕೊಂಡು ಮಠದ ಸುತ್ತಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದಳು. ಇದನ್ನು ಗಮನಿಸಿದ ಆರೋಪಿಗಳು ಆಕೆಗೆ ಊಟ ಕೊಡುವ ನೆಪದಲ್ಲಿ ಪುಸಲಾಯಿಸಿ ಆಟೋದಲ್ಲಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಅತ್ಯಾ*ಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ
ಸೋಮೇಶ್ವರ ಬೀಚ್‌ ಈಗ ಇನ್ನಷ್ಟು ಸ್ವಚ್ಛ- ಸುಂದರ!