ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ

Published : Jan 12, 2026, 09:10 AM IST
Lake

ಸಾರಾಂಶ

ಚಾಮರಾಜನಗರದ ಹನೂರು ತಾಲೂಕಿನಲ್ಲಿ 40 ವರ್ಷಗಳಿಂದ ಬತ್ತಿ ಹೋಗಿದ್ದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯು 900 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದ್ದು, ರೈತರ ಬಾಳಿಗೆ ಹೊಸ ಬೆಳಕಾಗಲಿದೆ.

ಚಾಮರಾಜನಗರ: ಹನೂರು ತಾಲೂಕಿನ ರಾಮನಗುಡ್ಡ ಕೆರೆ ಕಳೆದ 40 ವರ್ಷಗಳ ಹಿಂದೆ ನಿರ್ಮಾಣವಾಗಿ ನೀರಿಲ್ಲದೆ ಬರಿದಾಗಿತ್ತು. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಯೋಜನೆ ಕಲ್ಪಿಸುವ ಸದುದ್ದೇಶದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಜ.16 ರಂದು ಚಾಲನೆ ನೀಡುವುದಾಗಿ ಶಾಸಕ ಎಂ. ಆರ್‌. ಮಂಜುನಾಥ್‌ ಹೇಳಿದ್ದಾರೆ.

900 ಎಕರೆ ಜಮೀನಿಗೆ ನೀರಾವರಿಗೆ ಅನುಕೂಲ

ಎರಡುವರೆ ಕೋಟಿ ವೆಚ್ಚದಲ್ಲಿ 1.45 ಕಿ.ಮೀ ಪೈಪ್ ಲೈನ್ ಕಾಮಗಾರಿ ಮುಗಿದ ಹಿನ್ನೆಲೆ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಆರಂಭವಾಗಿದೆ. ಕೆರೆಗೆ ನೀರು ತುಂಬಿಸುವ ಸಲುವಾಗಿ ಬೂದುಬಾಳು ಪೈಪ್ ಲೈನ್ ಡೆಲಿವರಿ ಚೇಂಬರ್ ನಿಂದ 1.45 ಕಿಲೋ ಮೀಟರ್ ಪೈಪ್ಲೈನ್ ಕಾಮಗಾರಿ ಮುಗಿದು, ಚೇಂಬರ್ ನಿರ್ಮಾಣವಾಗಿದೆ. ಈ ಕೆರೆಗೆ 40 ವರ್ಷಗಳ ಇತಿಹಾಸ ಇದೆ. ಚಿಂಚೋಳಿ, ರಾಯರ ದೊಡ್ಡಿ, ಎಡರಳ್ಳಿ ದೊಡ್ಡಿ ಭಾಗದ 900 ಎಕರೆ ಜಮೀನಿಗೆ ನೀರಾವರಿಗೆ ಅನುಕೂಲವಾಗಲಿದೆ.

ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ರೈತರಿಗೆ ಅನುಕಟ್ವಾಗಲಿದೆ. ಬರಡು ಭೂಮಿಗೆ ನೀರಾವರಿ ಯೋಜನೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ರಾಯರ ದೊಡ್ಡಿಯ ರೈತ ಮುಖಂಡ ವಿನೇಶ್ ಹೇಳಿದ್ದಾರೆ. ಹಲವಾರು ವರ್ಷಗಳಿಂದ ಕೆರೆಗೆ ನೀರು ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ಉಳಿದ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ರೈತ ಮುಖಂಡ ಅಮೋಘ ಆಗ್ರಹಿಸಿದ್ದಾರೆ.

ಜ. 16ರಂದು ಕೆರೆಗೆ ನೀರು ತುಂಬಿಸುವ

ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಅನುಕೂಲಕ್ಕಾಗಿ ಕಾವೇರಿ ನದಿಯಿಂದ ಪೈಪ್‌ಲೈನ್‌ ಮೂಲಕ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಜ. 16ರಂದು ಕೆರೆಗೆ ನೀರು ತುಂಬಿಸುವ ಬಗ್ಗೆ ದಿನಾಂಕ ನಿಗದಿಯಾಗಿದೆ. ಕೆರೆಗೆ ನೀರು ತುಂಬಿಸುವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿರುವ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಲು ನೀಲ ನಕ್ಷೆ ತಯಾರು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್‌. ಮಂಜುನಾಥ್ ಹೇಳಿದ್ದಾರೆ

PREV
Read more Articles on
click me!

Recommended Stories

ಸೋಮೇಶ್ವರ ಬೀಚ್‌ ಈಗ ಇನ್ನಷ್ಟು ಸ್ವಚ್ಛ- ಸುಂದರ!
ವರದಾ-ಬೇಡ್ತಿ ನದಿ ಜೋಡಣೆ: ಭುಗಿಲೆದ್ದ ಜಲ ಸಂಘರ್ಷ, ಪರವಾಗಿ ನಿಂತ ಬಸವರಾಜ್ ಬೊಮ್ಮಾಯಿ