ಯಾರಿಗೆ ಟಿಕೆಟ್..ಯಾರು ಔಟ್.. ರಾಜ್ಯದ ಸಂಸದರಿಗೆ ಬಿಜೆಪಿ ಶಾಕ್!

By Web DeskFirst Published Jul 23, 2018, 4:21 PM IST
Highlights

ವಿಧಾನಸಭೆ ಚುನಾವಣೆ ಮುಗಿದಿದ್ದು ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ರಾಜ್ಯದ ಬಿಜೆಪಿ ಸಂಸದರಿಗೂ ಟಿಕೆಟ್ ಸಿಗುವುದು ಅವರಿಗೆ ಖಾತ್ರಿ ಇಲ್ಲ. ಕೇಂದ್ರ ಸಚಿವರಾದಿಯಾಗಿ ಸಂಸದರು ಹೇಳುತ್ತಿರುವ ಮಾತುಗಳು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿವೆ.

ಬೆಳಗಾವಿ/ಹುಬ್ಬಳ್ಳಿ[ಜು.23]  ಬಿಜೆಪಿಯ ಹಾಲಿ ಸಂಸದರಿಗೆ ಲೋಕಸಭಾ ಟಿಕೆಟ್ ಸಿಗುತ್ತೆಯೋ ಇಲ್ಲವೋ ಎಂಬ ಭಯ ಶುರುವಾಗಿದೆ.  ಟಿಕೆಟ್ ಸಿಗುವ ಬಗ್ಗೆ ಯಾವ ಸಂಸದರಿಗೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಯಾರನ್ನು ಅಭ್ಯರ್ಥಿ ಮಾಡುತ್ತೇನೆ ಎಂದು ಬಿಜೆಪಿ ಹೇಳಿಲ್ಲ. ಹೈಕಮಾಂಡ್ ಮೌನದಿಂದಾಗಿ ಬಿಜೆಪಿ ಸಂಸದರು ಆತಂಕಕ್ಕೆ ಒಳಗಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತಲ್ಲೂ ಅನಿಶ್ಚಿತತೆಯ ಭಾವ ಇತ್ತು. 5 ಬಾರಿ ಸಂಸದನಾಗಿದ್ದೇನೆ - ಮುಂದೆ ಯಾರು ಸ್ಪರ್ಧಿಸಲಿದ್ದಾರೋ ಗೊತ್ತಿಲ್ಲ. ಮುಂದೆ ಯಾರೇ ಸ್ಪರ್ಧೆ ಮಾಡಿದ್ರೂ ಬಿಜೆಪಿ ಗೆಲ್ಲಬೇಕು.5 ಬಾರಿ ಸಂಸದನಾಗಲು ನೀವು ಪ್ರೀತಿಯಿಂದ ವೋಟ್ ಕೊಟ್ಟಿದ್ದೀರಿ. ನಿಮ್ಮ ಗೌರವ ಕಡಿಮೆಯಾಗದಂತೆ ನೋಡಿಕೊಂಡಿದ್ದೇನೆ.

ಉತ್ತರಕನ್ನಡ ಕ್ಷೇತ್ರದಿಂದ ಮತ್ತೇ ಟಿಕೆಟ್ ಸಿಗುವ ಬಗ್ಗೆ ತಮಗೆ ಅನುಮಾನ ಇದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಹ ತಮಗೆ ಮುಂದಿನ ಸಾರಿ ಟಿಕೆಟ್ ದೊರೆಯುವುದು ಅನುಮಾನ ಎಂಬ ದಾಟಿಯಲ್ಲೂ ಮಾತನಾಡಿದ್ದರು. ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಕೆಲ ಹಾಲಿ ಶಾಸಕರಿಗೆ ಟಿಕೆಟ್  ನೀಡಿರಲಿಲ್ಲ. ಲೋಕಸಭೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುತ್ತದೆಯೋ? ಅಥವಾ ಪ್ರಮುಖ ನಾಯಕರ ಸ್ಥಾನ ಅದಲು ಬದಲಾಗ್ತುದೆಯೋ ಕಾದು ನೋಡಬೇಕಿದೆ.

click me!