
ಬೆಂಗಳೂರು(ಜು.10): ಕೊರೋನಾ ಸಂಕಷ್ಟಎದುರಿಸಲು ಪೊಲೀಸರನ್ನು ಹೆಚ್ಚುವರಿ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಹುರಿದುಂಬಿಸಲು ಮಾಡಿದ ‘ಹೌಸ್ ಇಸ್ ದ ಜೋಶ್’ ಟ್ವೀಟ್ ವೈರಲ್ ಆಗಿದ್ದು, ಸಾಕಷ್ಟುಮೆಚ್ಚುಗೆ ವ್ಯಕ್ತವಾಗಿದೆ.
‘ಕೊರೋನಾ ವಿರುದ್ಧ ನಾವು (ಪೊಲೀಸರು) ಧೈರ್ಯವಾಗಿ ಹೋರಾಟ ನಡೆಸಿದ್ದೇವೆ. ಇದುವರೆಗೆ ಐವರು ಜೀವ ತ್ಯಾಗ ಮಾಡಿದ್ದಾರೆ. 395 ಮಂದಿ ಸೋಂಕಿತರಾಗಿದ್ದು, 190 ಪೊಲೀಸರು ಗುಣಮುಖರಾಗಿದ್ದಾರೆ.
SSLC ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಿಟ್ ನೀಡಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
ಉಳಿದ 200 ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಠಾಣೆಗಳು ಸೀಲ್‌ಡೌನ್ ಆಗಿವೆ. ಆದರೆ ನಮ್ಮ ಕುಟುಂಬ (ಪೊಲೀಸರು) ಧೃತಿಗೆಟ್ಟಿಲ್ಲ, ಎಂದೆಗುಂದಿಲ್ಲ. ಈಗಲೂ ಅದೇ ಉತ್ಸಾಹವಿದೆ. ‘ಹೌಸ್ ಇಸ್ ದ ಜೋಶ್’ ಅಂದರೆ ‘ಹೈ ಸರ್’ ಎನ್ನುತ್ತಾರೆ ಎಂದು ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.
ನಿಂಬ್ಳಾಕರ್ ಅವರ ಟ್ವೀಟ್‌ಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 889 ಬಾರಿ ರೀ ಟ್ವೀಟ್ ಆಗಿದೆ. 5,600 ಜನರು ಲೈಕ್ ಮಾಡಿದರೆ, 250 ಜನರು ಕಾಮೆಂಟ್ ಮಾಡಿದ್ದಾರೆ.