ದೇವೇಗೌಡ ಆಪ್ತನ ಪುತ್ರ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ..!

Published : Nov 20, 2018, 02:09 PM IST
ದೇವೇಗೌಡ ಆಪ್ತನ ಪುತ್ರ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ..!

ಸಾರಾಂಶ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅವರ ಆಪ್ತನ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರು, [ನ.20]: ಜೆಡಿಎಸ್ ಮುಖಂಡನ ಪುತ್ರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ  ನಡೆದಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅವರ ಆಪ್ತ ಎನ್ನಲಾದ ಜೆಡಿಎಸ್ ಮುಖಂಡ ಕೆಂಪನಾಯಕ ಪುತ್ರ ಶ್ರೇಯಸ್ (17) ಆತ್ಮಹತ್ಯೆ ಮಾಡಿಕೊಂಡ ಯುವಕ. 

ಮೈಸೂರಿನ ವಿಜನಯಗರ 3ನೇ ಹಂತದ ಬಸವರಾಜ ವೃತ್ತದ ಬಳಿ ಇರುವ ತಮ್ಮ ನಿವಾಸದಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. 

ಶ್ರೇಯಸ್ ಮೈಸೂರಿನ ಖಾಸಗಿ ಕಾಲೇಜಿವೊಂದರಲ್ಲಿ ದ್ವಿತೀಯ ಪಿ.ಯುಸಿ ವ್ಯಾಸಾಂಗ ಮಾಡುತ್ತಿದ್ದ. ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಇನ್ನು ಈ ಬಗ್ಗೆ ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ.

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!