ಕೊರೋನಾ ಅಟ್ಟಹಾಸ: ಹೋಟೆಲ್‌ ಬಂದ್‌ ಮಾಡಲು ನಿರ್ಧಾರ

By Kannadaprabha News  |  First Published Jul 2, 2020, 8:32 AM IST

ಒಂದು ವಾರ ಹೋಟೆಲ್‌ ಬಂದ್‌ ಮಾಡಲು ನಿರ್ಧಾರ| ಇಂದಿ​ನಿಂದ ಒಂದು ವಾರ ಕಾಲ ಹಾನ​ಗಲ್ಲ ಹೋಟೆ​ಲ್‌​ಗಳು ಬಂದ್‌| ಸೇರಿ ಜು. 2 ರಿಂದ 9ರ ವರೆಗೆ ಒಂದು ವಾರಗಳ ಕಾಲ ಹೋಟೆಲ್‌ಗಳನ್ನು ಸಂಪೂರ್ಣ ಬಂದ್‌|


ಹಾನಗಲ್ಲ(ಜು.02): ಪಟ್ಟಣದಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಹೋಟೆಲ್‌ ಮಾಲೀಕರ ಸಂಘ ದೇವಿಪ್ರಸಾದ ಹೋಟೆಲ್‌ನಲ್ಲಿ ಗುರುವಾರ ತುರ್ತು ಸಭೆ ಸೇರಿ ಜು. 2 ರಿಂದ 9ರ ವರೆಗೆ ಒಂದು ವಾರಗಳ ಕಾಲ ಹೋಟೆಲ್‌ಗಳನ್ನು ಸಂಪೂರ್ಣ ಬಂದ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ಹೋಟೆಲ್‌ ಮಾಲೀಕರ ಸಂಘದ ಸಂಚಾಲಕ ಆದರ್ಶ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ವಿವರ ನೀಡಿರುವ ಅವರು, ಪಟ್ಟಣದಲ್ಲಿರುವ ಎಲ್ಲ ಹೋಟೆಲ್‌ಗಳು, ಸಾವಜಿ ಖಾನಾವಳಿಗಳು, ಲಿಂಗಾಯತ ಖಾನಾವಳಿಗಳು, ದಾಬಾಗಳು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ಬಂದ್‌ ಮಾಡಲು ಸ್ವಯಂ ಸ್ಫೂರ್ತಿಯಿಂದ ನಿರ್ಧರಿಸಲಾಗಿದ್ದು, ಜು. 2ರಿಂದ ಎಲ್ಲ ಹೋಟೆಲ್‌ ಉದ್ಯಮ ಬಂದ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Tap to resize

Latest Videos

ಹಾವೇರಿ: 'ಕೊರೋನಾ ತಡೆಗಟ್ಟಲು ಮಾರ್ಗಸೂಚಿ ಕಡ್ಡಾಯ ಪಾಲಿಸಿ'

ಸಭೆಯಲ್ಲಿ ಹಿರಿಯ ಹೋಟೆಲ್‌ ಉದ್ಯಮಿ ಕೃಷ್ಣಾ ಮರವಂತೆ, ಚಂದ್ರಶೇಖರ ಖಳಂಜಿ, ರಜನೀಶ ಶೆಟ್ಟಿ, ಉದಯ ಶಂಕರ ಭಟ್, ಮಂಜಯ್ಯ ಶೆಟ್ಟಿ, ಶಂಭು ಚಿಕ್ಕಣ್ಣನವರ, ವಿನೋದ ಕಲಾಲ, ಗೋಪಾಲ ಮೆಹರವಾಡೆ, ರವಿ ಮೆಹರವಾಡೆ, ಸಂತೋಷ ಮೆಹರವಾಡೆ, ಲಕ್ಷ್ಮೀಕಾಂತ ಪೂಜಾರ ಇದ್ದರು.
 

click me!