ಕಾಫಿ, ಚಹಾ ಪ್ರಿಯರಿಗೆ ಬಿಗ್ ಶಾಕ್: ದೀಪಾವಳಿ ಬಳಿಕ ₹2 ಹೆಚ್ಚಳ

By Kannadaprabha News  |  First Published Oct 21, 2024, 8:59 AM IST

ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳವಾಗಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿಗೆ ₹100 ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 


ಬೆಂಗಳೂರು (ಅ.21): ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳವಾಗಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿಗೆ ₹100 ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ವರ್ಷದಲ್ಲಿ ಇಲ್ಲಿವರೆಗೆ ಎರಡು ಬಾರಿ ಚಹಾ-ಕಾಫಿ ಬೆಲೆ ಹೆಚ್ಚಳವಾಗಿದೆ. ಸಿಲಿಂಡರ್‌ ದರ, ಹಾಲಿನ ದರ ಹೆಚ್ಚಳ ಇದಕ್ಕೆ ಕಾರಣವಾಗಿತ್ತು. ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಕಾಫಿ ಬೆಲೆ ಹೆಚ್ಚಳ ಆಗುವುದು ಬಹುತೇಕ ಖಚಿತ. ಆದರೆ, ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಿದ್ದೇವೆ. 

ಸದ್ಯಕ್ಕೆ ದರ ಎಷ್ಟು ಹೆಚ್ಚಿಸಬೇಕು ಎಂಬುದರ ಬಗ್ಗೆ ನಿರ್ಧರಿಸಿಲ್ಲ ಎಂದು ಬೃಹತ್‌ ಬೆಂಗಳೂರು ಹೊಟೇಲ್‌ ಮಾಲೀಕರ ಸಂಘ ತಿಳಿಸಿದೆ. ಸದ್ಯ ನಗರದಲ್ಲಿ ಕಾಫಿ-ಚಹಾಕ್ಕೆ ₹15- ₹35 (ಸಾಮಾನ್ಯ ಹೊಟೆಲ್‌) ಇದ್ದು, ಐಷಾರಾಮಿ ಹೊಟೆಲ್‌, ಕೆಫೆಗಳಲ್ಲಿ ದರ ₹100 ಮೇಲಿದೆ. ಸಾಮಾನ್ಯ ಹೊಟೆಲ್‌ಗಳಲ್ಲಿ ₹2ವರೆಗೆ ಬೆಲೆ ಹೆಚ್ಚಿಸಲು ಚಿಂತನೆ ನಡೆದಿದೆ. ಹವಾಮಾನ ವೈಪರೀತ್ಯ ಕಾರಣದಿಂದ ಕಾಫಿ ಬೆಳೆ ಕುಸಿತವಾಗಿದೆ. ಮಾರುಕಟ್ಟೆಗೆ ಅಗತ್ಯದಷ್ಟು ಕಾಫಿ ಪುಡಿ ಸಿಗದಿರುವುದು ಬೆಲೆ ಹೆಚ್ಚಲು ಪ್ರಮುಖ ಕಾರಣ. ಜನವರಿಯಲ್ಲಿ ಚಿಕೋರಿ ಮಿಶ್ರಿತ ಕಾಫಿ ಪುಡಿಗೆ ಕೇಜಿಗೆ ₹200- ₹250 ಇತ್ತು. 

Latest Videos

undefined

ಆದರೆ, ಬಳಿಕ ಕಾಫಿ ಪುಡಿ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ರೊಬುಸ್ಟಾ ಕಾಫಿ ಪುಡಿ ಬೆಲೆ ಒಂದು ಕೇಜಿಗೆ ₹200ರಿಂದ ₹420ರವರೆಗೆ ಹಾಗೂ ಅರೇಬಿಕಾ ಕಾಫಿ ಪುಡಿಯಲ್ಲಿ ಕೇಜಿಗೆ ₹290ರಿಂದ ₹465 ವರೆಗೆ ಹೆಚ್ಚಾಗಿದೆ. ಚಿಕೋರಿ ರಹಿತ ಕಾಫಿಪುಡಿ ಕೇಜಿಗೆ ₹750 ವರೆಗೆ ಇದೆ. ಇದೀಗ ಐಸಿಟಿಎ ಪುನಃ ಕೇಜಿಗೆ ₹100 ವರಗೆ ಹೆಚ್ಚಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ಚಹಾ ಪುಡಿ ದರವೂ ಕೇಜಿಗೆ ₹40- ₹50 ರಷ್ಟು ಹೆಚ್ಚಿದೆ. ಇದರ ಜೊತೆಗೆ ಹಾಲಿನ ದರವೂ ಏರಿಕೆಯಾಗಿದೆ. ಹೀಗಾಗಿ ಕಾಫಿ ಬೆನ್ನಲ್ಲಿ ಕಪ್‌ ಚಹಾ ಬೆಲೆಯೂ ಏರಿಕೆ ಆಗಲಿದೆ ಎಂದು ವರ್ತಕರು ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಬಿಸಿ: ಹಿಂದು/ಮುಸ್ಲಿಂ ಪೈಕಿ ಯಾರಿಗೆ ಮಣೆ

ದೀಪಾವಳಿ ಬಳಿಕ ಕಾಫಿ-ಚಹಾ ಬೆಲೆ ಹೆಚ್ಚಳ ಆಗಬಹುದು. ಗ್ರಾಹಕರಿಗೆ ಹೊರೆ ಆಗದಂತೆ ನಿರ್ಣಯ ಕೈಗೊಳ್ಳಲಿದ್ದೇವೆ. ಕಾಫಿ ಪುಡಿ ದರ ಹೆಚ್ಚಾಗುವುದು ಇದಕ್ಕೆ ಕಾರಣ.
-ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೊಟೆಲ್‌ ಮಾಲೀಕರ ಸಂಘ.

click me!