ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!

By Sathish Kumar KHFirst Published Dec 2, 2023, 5:05 PM IST
Highlights

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಬೆಂಬಲಿಗರು ಹೂವಿನ ಜೊತೆಯಲ್ಲಿ ನೋಟುಗಳನ್ನು ಸೇರಿಸಿ ಹಣದ ಮಳೆಯನ್ನೇ ಸುರಿಸಿದ್ದಾರೆ.

ಬೆಂಗಳೂರು/ ಹೊಸಕೋಟೆ (ಡಿ.02): ರಾಜ್ಯ ರಾಜಧಾನಿಯ ಹೊರಭಾಗದಲ್ಲಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಜೆಸಿಬಿ ಮೂಲಕ ಬೃಹತ್ ಸೇಬು ಹಣ್ಣಿನ ಹಾರ ಹಾಕಿದ ಬೆಂಬಲಿಗರು, ಈ ವೇಳೆ ಹೂವಿನ ಜೊತೆಯಲ್ಲಿ ಗರಿ, ಗರಿ ನೋಟುಗಳನ್ನು ಸೇರಿಸಿ ಹಣದ ಮಳೆಯನ್ನೇ ಸುರಿಸಿದರು. ಈ ವೇಳೆ ಅಲ್ಲಿದ್ದ ಬೆಂಬಲಿಗರು ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದರು.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು ರೈತರು ಬರ ಪರಿಹಾರದ ಹಣವನ್ನು ಕೊಡಿ ಎಂದರೆ ರಾಜ್ಯ ಸರ್ಕಾರ ಕೇಂದ್ರದತ್ತು ಬೊಟ್ಟು ಮಾಡಿ ತೋರಿಸುತ್ತಿದೆ. ಇನ್ನು ದೇಶದ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಶತ್ರುಗಳ ಗುಂಟೇಟಿಗೆ ಬಲಿಯಾಗಿ ದೇಶಕ್ಕಾಗಿ ಪ್ರಾಣಕೊಟ್ಟ ವೀರ ಯೋಧ ಪ್ರಾಂಜಲ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಕೊಡುವುದಾಗಿ ಭರವಸೆ ಕೊಟ್ಟಿದ್ದ ರಾಜ್ಯ ಸರ್ಕಾರ ಈವರೆಗೂ ಹಣವನ್ನು ಕೊಟ್ಟಿಲ್ಲ. ಆದರೆ, ಇದೇ ಸರ್ಕಾರದ ಶಾಸಕರ ಜನ್ಮ ದಿನಾಚರನೆ ವೇಳೆ ನೋಟುಗಳ ಮಳೆಯನ್ನು ಸುರಿಸುತ್ತಿರುವುದು ಕಂಡುಬಂದಿದೆ. ಈ ಹಣವನ್ನು ರೈತರಿಗೆ ಕೊಟ್ಟರೆ ಆಗುವುದಿಲ್ಲವೇ ಎಂದು ವಿಪಕ್ಷಗಳಿಂದ ಟೀಕೆ ಎದುರಾಗಿದೆ.

ಕಾಡು ಮಲ್ಲೇಶ್ವರ ಕಡಲೆಕಾಯಿ ಪರಿಷೆ ಅದ್ಧೂರಿ ಆರಂಭ: ಬಸವಣ್ಣಗೆ 800 ಕೆಜಿ ಕಡಲೆ ಶೃಂಗಾರ

ಹೊಸಕೋಟೆಯಲ್ಲಿ ಶನಿವಾರ ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಜನ್ಮ ದಿನಾಚರಣೆ ಮಾಡಿಕೊಂಡ ಶಾಸಕ ಶರತ್ ಬಚ್ಚೇಗೌಡ ಅವರ ಕಾರ್ಯಕ್ರಮದಲ್ಲಿ ಜಣ ಜಣ ಕಾಂಚಾಣ ಕುಣಿದಿದೆ. ಶಾಸಕರ ಮೇಲೆ ಅಭಿಮಾನಿಗಳು ಹೂವಿನ ಜೊತೆ ನೋಟುಗಳ ಸುರಿಮಳೆ ಸುರಿಸಿದ್ದಾರೆ. ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಹುಟ್ಟು ಹಬ್ಬದಲ್ಲಿ ಅಭಿಮಾನಿಗಳಿಂದ ಶಾಸಕರ ಮೇಲೆ‌ ಹೂ ಮಳೆ ಸುರಿಸಿ‌ ಜೈಕಾರ ಹಾಕಲಾಗಿದೆ.

ಹಣದ ಮಳೆ ಸುರಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಶರತ್ ಬಚ್ಚೇಗೌಡ ಅವರು ಕೆಳಕ್ಕೆ‌ ಬಿದ್ದ ಹಣವನ್ನ ಸ್ವತಃಹ ಬಗ್ಗಿ ಕೈಗೆತ್ತಿಕೊಂಡು ಅಲ್ಲಿದ್ದ ಬಡ ಜನರಿಗೆ ನೀಡಿದ್ದಾರೆ. ಜೊತೆಗೆ, ಹಣ ಹಾಕದಂತೆ ಅಭಿಮಾನಿಗಳಿಗೆ ತಾಕಿತು ಮಾಡಿದ್ದಾರೆ. ಯಾರೊಬ್ಬರೂ ಇಂತಹ ಘಟನೆ ಮರುಕಳಿದಂತೆ ಎಚ್ಚರಿಕೆ ವಹಿಸಬೇಕು. ಹಣವನ್ನು ತೂರುವುದು ಒಳ್ಳೆಯ ಕ್ರಮವಲ್ಲ. ಹಣವನ್ನು ಸೇರಿಸಿ ಹೂವು ಹಾಕುವುದಾದರೆ ಹೂವನ್ನೇ ಹಾಕಬೇಡಿ ಎಂದು ಹೇಳಿದ್ದಾರೆ. ನಂತರ, ಅಭಿಮಾನಿಗಳು ಹಣವನ್ನು ಹಾಕುವುದನ್ನು ನಿಲ್ಲಿಸಿ ಜೆಸಿಬಿಯಲ್ಲಿ ತಂದಿದ್ದ ಬೃಹತ್‌ ಸೇಬು ಹಣ್ಣಿನ ಹಾರವನ್ನು ಹಾಕಿ ಜೈಕಾರ ಕೂಗಿದ್ದಾರೆ.

ಶಾಲೆಗಳಿಗೆ ಬಾಂಬ್‌ ಬೆದರಿಕೆ - ವೀಕ್‌ ಲೀಡರ್‌ ಶಿಪ್‌ ಕಾರಣ: ಗೋವಿಂದ ಕಾರಜೋಳ

ಹುಟ್ಟು ಹಬ್ಬಕ್ಕೆ ಆಂಬುಲೆನ್ಸ್ ಗಿಫ್ಟ್ ಕೊಟ್ಟ ಬಚ್ಚೇಗೌಡ: ತಮ್ಮ ಹುಟ್ಟು ಹಬ್ಬವನ್ನು ಬೆಂಬಲಿಗರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡ ಶರತ್ ಬಚ್ಚೇಗೌಡ ಅವರು ಮುತ್ಸಂದ್ರ ಮತ್ತು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 2 ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದರು. ಇನ್ನು ರೋಗಿಗಳ ಜೀವ ಉಳಿಸಲಿಕ್ಕೆ ಈ ಆಂಬುಲೆನ್ಸ್ ಸದ್ಬಳಕೆ ಆಗಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹಾರೈಸಿದರು. ಒಟ್ಟು 30 ಲಕ್ಷ ರೂ. ಮೌಲ್ಯದ ಎರಡು ಮಿನಿ ಆ್ಯಂಬುಲೆನ್ಸ್‌ಗಳನ್ನು ವಿತರಣೆ ಮಾಡಿದ ನಂತರ, ಆಯಾ ಗ್ರಾಮ ಪಂಚಾಯತಿ ವತಿಯಿಂದ ಆ್ಯಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

click me!