ಭಾರತಿ ವಿಷ್ಣುವರ್ಧನ್‌, ರುದ್ರೇಶ್‌ ಸೇರಿ ಆರು ಮಂದಿಗೆ ಗೌರವ ಡಾಕ್ಟರೇಟ್‌

Kannadaprabha News   | Kannada Prabha
Published : Sep 30, 2025, 04:23 AM IST
Bharathi Vishnuvardhan

ಸಾರಾಂಶ

ನಗರದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ಅ.3 ರಂದು ನಡೆಯಲಿದ್ದು, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌ ಸೇರಿ ಅನೇಕರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.

ಬೆಂಗಳೂರು : ನಗರದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ಅ.3 ರಂದು ನಡೆಯಲಿದ್ದು, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌, ಹೋಮಿಯೋಪಥಿ ವೈದ್ಯ ಡಾ.ಬಿ.ಟಿ.ರುದ್ರೇಶ್‌, ಶಿಕ್ಷಣ ತಜ್ಞೆ ಡಾ.ಎಚ್‌.ಎನ್‌.ಉಷಾ, ಬಯೋಕಾನ್‌ನ ಡಾ.ಕಿರಣ್‌ ಮಜುಂದಾರ್‌ ಷಾ, ಮಾನವ ಹಕ್ಕುಗಳ ಹೋರಾಟಗಾರ್ತಿ ದು.ಸರಸ್ವತಿ, ಕ್ರಿಕೆಟ್‌ ತಾರೆ ವೇದಾ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿಯ ಕುಲಪತಿ ಡಾ.ಟಿ.ಎಂ.ಮಂಜುನಾಥ್‌, ಜ್ಞಾನಜ್ಯೋತಿ ಸಭಾಂಗಣದಲ್ಲಿ 2023-24 ಮತ್ತು 2024-25ನೇ ಸಾಲಿನ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಮಾಜಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

3573 ವಿದ್ಯಾರ್ಥಿಗಳಿಗೆ ಪದವಿ:

ಎರಡು ವರ್ಷದಿಂದ ಒಟ್ಟಾರೆ, ಪದವಿ ಹಾಗೂ ಸ್ನಾಕೋತ್ತರ ವಿಭಾಗದಲ್ಲಿ 107 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದಿದ್ದು, 52 ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ. 3573 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ನಮ್ಮ ಕುಟುಂಬದ ಬಗ್ಗೆ ಯಾರಾದ್ರು ಏನಾದ್ರು ಹೇಳಿದ್ರೆ ನಂಬಬೇಡಿ: ಭಾರತಿ ವಿಷ್ಣುವರ್ಧನ್ ಎಚ್ಚರಿಕೆ

 ಮೈಸೂರು  : ನಮ್ಮ ಕುಟುಂಬದ ಬಗ್ಗೆ ಯಾರಾದ್ರು ಏನಾದ್ರು ಇಲ್ಲದಿರುವುದನ್ನ ಹೇಳಿದ್ರೆ ನಂಬಬೇಡಿ. ಏನಾದ್ರು ಮಾತನಾಡಿದ್ರೆ ನಮ್ಮ ಮನಸ್ಸಿಗೆ ಕಷ್ಟ ಆಗುತ್ತೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು. ನಟ ಡಾ. ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಅಂಗವಾಗಿ ಉದ್ಭೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕಕ್ಕೆ ಆಗಮಿಸಿದ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ನಮ್ಮ ಕುಟುಂಬದ ಮೇಲೆ ಯಾರು ಏನೇ ಮಾತನಾಡಿದರು ಅವರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದ್ರು ಅಂಥ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದರು.

ನಮ್ಮ ಮನೆಗೆ ಬಂದು ಏನೇ ಇದ್ರು ಮಾತಮಾಡಿ ಸರಿಪಡಿಸಿಕೊಳ್ಳಿ. ನಿಮ್ಮ ಸಂತೋಷದಿಂದ ನನಗೆ ಬಹಳಷ್ಟು ಖುಷಿಯಾಗಿದೆ. ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಳ್ಳೆಯ ಕೆಲಸಗಳನ್ನ ಮಾಡಿ. ನಮ್ಮ ಅಭಿಮಾನಿಗಳು ಬುದ್ದಿವಂತರು ಹಾಗೂ ವಿದ್ಯಾವಂತರು. ನಿಮ್ಮ ಪ್ರೀತಿ ಹೀಗೆ ಇರಲಿ. ನಮ್ಮ ಯಜಮಾನರ ಮೊಮ್ಮಗ ಜೇಷ್ಟವರ್ಧನ್ ಬಂದಿದ್ದಾನೆ. ಅವನಿಗೆ ನಿಮ್ಮ ಪ್ರೀತಿ ಇರಲಿ ಎಂದರಲ್ಲದೇ. ಕರ್ನಾಟಕ ಸರ್ಕಾರ ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಟ್ಟಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಸಂತೋಷವೇ ನಮ್ಮ ಸಂತೋಷ. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದು ತಿಳಿಸಿದರು.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?