ಕೊರೋನಾ ವಿರುದ್ಧ ಹೋರಾಟ: ಜನರೊಂದಿಗೆ ಗೃಹ ಸಚಿವ ಬೊಮ್ಮಾಯಿ ವಿಡಿಯೋ ಸಂವಾದ

By Kannadaprabha NewsFirst Published May 4, 2020, 9:14 AM IST
Highlights

ಬೊಮ್ಮಾಯಿ ಅವರನ್ನು ಅಭಿನಂದಿಸಿದ ಸ್ಥಳೀಯ ಜನಪ್ರತಿನಿಧಿಗಳು| ಗೃಹಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು, ಕೈಗೊಂಡ ಕ್ರಮಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಜನಪ್ರತಿನಿಧಿಗಳು|
 

ಶಿಗ್ಗಾಂವಿ(ಮೇ.04): ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಸಾರ್ವಜನಿಕರೊಂದಿಗೆ, ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಮುಖ ಪ್ರತಿನಿಧಿಗಳೊಂದಿಗೆ ಕೊರೋನಾ ಜಾಗೃತಿ ಹಾಗೂ ಜನರ ಸಮಸ್ಯೆ ಕುರಿತು ವಿಡಿಯೋ ಸಂವಾದದ ಮುಖಾಂತರ ಮಾತನಾಡಿದ್ದಾರೆ. 

ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಬೊಮ್ಮಾಯಿ ಅವರನ್ನು ಅಭಿನಂದಿಸಿದ್ದಾರೆ. ಗೃಹಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು, ಕೈಗೊಂಡ ಕ್ರಮಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
ಜನರು ಕುಡಿಯುವ ನೀರು, ರಸ್ತೆ, ಕೆರೆ, ವಿದ್ಯುತ್‌, ವ್ಯಾಪಾರ, ಕೃಷಿ, ಬೀಜ, ಗೊಬ್ಬರ, ಸರಕು, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಹಂಚಿಕೊಂಡ ಜನತೆಗೆ ವಿಡಿಯೋ ಸಂವಾದ ಖುಷಿ ತಂದಿತು. ಇಡೀ ರಾಜ್ಯದಲ್ಲಿಯೇ ಕ್ಷೇತ್ರದ ಹೆಸರನ್ನು ತರುವಂತಾಗಿದೆ ಅಭಿನಂದಿಸಿದರು.

ವ್ಯಾಪಾರ ವಹಿವಾಟು ಪುನಾರಂಭ: ಸಹಜ ಸ್ಥಿತಿಯತ್ತ ಹಾವೇರಿ

ಆರೋಗ್ಯ, ಪೊಲೀಸ್‌ ಇಲಾಖೆ, ಆಶಾ ಕಾರ್ಯಕರ್ತರು, ಕಾರ್ಮಿಕರು, ವೈದ್ಯರು ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಜನಪ್ರತಿನಿಧಿಗಳು ಮಾಹಿತಿ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಒಳಗೊಂಡು ಕಾರ್ಯಕರ್ತರು ಪ್ರತಿಯೊಂದು ಹಳ್ಳಿಯಲ್ಲಿ ಮನೆಮನೆಗೆ ಕೊರೋನಾ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಎಂದರು.

ಜನರ ಸಮಸ್ಯೆ ಆಲಿಸಿದ ಸಚಿವ ಬೊಮ್ಮಾಯಿ ಅವರು ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ತಾವು ಹೇಳಿದ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಸ್ಕ್‌ ಧರಿಸಿಯೇ ಮನೆಯಿಂದ ಹೊರಬರಬೇಕು. ಮನೆಯಲ್ಲಿರುವ ಹಿರಿಯರು ಸಣ್ಣ ಮಕ್ಕಳು ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
 

click me!