ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ರೂಪಾಲಿ ನಾಯ್ಕ| ಗೋಹತ್ಯೆ ನಿಷೇಧದ ಬಗ್ಗೆ ಸಚಿವರ ಗಮನ ಸೆಳೆದ ಶಾಸಕರು| ಗೋವುಗಳ ಹತ್ಯೆ, ಹಿಂಸಾತ್ಮಕ ಸಾಗಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಡಲೇ ಬಲಿಷ್ಠವಾದ ಕಾನೂನಿನ ಮೂಲಕ ಇವುಗಳನ್ನು ತಡೆಗಟ್ಟುವ ಅನಿವಾರ್ಯತೆ|
ಕಾರವಾರ(ಡಿ.05): ಗೋಹತ್ಯೆ ನಿಷೇಧ ಕಾಯಿದೆಯನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರಿಗೆ ಭರವಸೆ ನೀಡಿದ್ದಾರೆ.
undefined
ಕಾರವಾರಕ್ಕೆ ಶುಕ್ರವಾರ ಆಗಮಿಸಿದ್ದ ಗೃಹ ಸಚಿವರಿಗೆ ರೂಪಾಲಿ ಎಸ್. ನಾಯ್ಕ ಈ ಕುರಿತು ಮನವಿ ನೀಡಿದಾಗ, ಸರ್ಕಾರ ಗೋಹತ್ಯೆ ನಿಷೇಧಕ್ಕೆ ಬದ್ಧವಾಗಿದ್ದು, ಗೋಹತ್ಯೆ ನಿಷೇಧಿಸಿ ಸದ್ಯದಲ್ಲೇ ಕಠಿಣ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ನಳಿನ ಕುಮಾರ್ ಕಟೀಲ್
ಗೋಹತ್ಯೆ ನಿಷೇಧದ ಬಗ್ಗೆ ಸಚಿವರ ಗಮನ ಸೆಳೆದ ಶಾಸಕರು, ಗೋವುಗಳ ಹತ್ಯೆ, ಹಿಂಸಾತ್ಮಕ ಸಾಗಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಡಲೇ ಬಲಿಷ್ಠವಾದ ಕಾನೂನಿನ ಮೂಲಕ ಇವುಗಳನ್ನು ತಡೆಗಟ್ಟುವ ಅನಿವಾರ್ಯತೆ ಎದುರಾಗಿದೆ ಎಂದು ವಿನಂತಿಸಿದ್ದರು. ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸುವ ಮೂಲಕ ಗೋ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಹಿಂದುಗಳಿಗೆ ಗೋವು ಪೂಜನೀಯ. ದೇವರ ಸ್ಥಾನಮಾನವನ್ನು ನೀಡಲಾಗಿದೆ. ಗೋ ಹತ್ಯೆ, ಹಿಂಸೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಗೋಹತ್ಯೆ ನಿಷೇಧ ಬಿಜೆಪಿಯ ಪ್ರಮುಖ ಚುನಾವಣಾ ಪ್ರಣಾಳಿಕೆಯಾಗಿತ್ತು. ಬಿಜೆಪಿ ಚುನಾವಣೆ ಗೆಲ್ಲಲು ಪ್ರಣಾಳಿಕೆಯಲ್ಲಿನ ಈ ಅಂಶವೂ ಕಾರಣಗಳಲ್ಲೊಂದು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡುವುದಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಜನತೆಯದ್ದಾಗಿದೆ. ಅದು ವಾಸ್ತವವೂ ಹೌದು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚೆಯೂ ನಡೆಯುತ್ತಿದೆ. ಸಾರ್ವಜನಿಕವಾಗಿಯೂ ಗೋ ಹತ್ಯೆ ನಿಷೇಧದ ಬಗ್ಗೆ ಬಲವಾದ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರದ ಮೇಲೆ ಭಾರಿ ನಿರೀಕ್ಷೆಯನ್ನು ಸಹ ಜನತೆ ಹೊಂದಿದ್ದಾರೆ.
ಮಲೆನಾಡು ಗಿಡ್ಡ ಸೇರಿದಂತೆ ಕೆಲವು ದೇಶಿ ಗೋ ತಳಿಗಳು ಇಂದು ಅಪಾಯವನ್ನು ಎದುರಿಸುತ್ತಿವೆ. ಕಸಾಯಿಖಾನೆಗಳಿಗೆ ಗೋವುಗಳನ್ನು ಕದ್ದು ಸಾಗಿಸಲಾಗುತ್ತದೆ. ನಮ್ಮ ದೇಸಿ ತಳಿಗಳ ಸಂರಕ್ಷಣೆಯೂ ಮುಖ್ಯವಾದ ಸಂಗತಿಯಾಗಿದೆ. ಜನತೆಯ ಧಾರ್ಮಿಕ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಪ್ಪಿಸಲು ಹಾಗೂ ಗೋ ಸಂರಕ್ಷಣೆಯನ್ನು ಮಾಡುವ ಉದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಆದಷ್ಟುಶೀಘ್ರದಲ್ಲಿ ಜಾರಿಗೊಳಿಸುವಂತೆ ರೂಪಾಲಿ ನಾಯ್ಕ ಆಗ್ರಹಿಸಿದ್ದರು.