ಬೆಂಗ್ಳೂರಲ್ಲಿ ನೀರಿನ ಕೊರತೆ ನಡುವೆಯೂ ಹೋಟೆಲಲ್ಲಿ ಹೋಳಿ ಪೂಲ್‌ ಪಾರ್ಟಿ..!

By Kannadaprabha NewsFirst Published Mar 21, 2024, 8:45 AM IST
Highlights

ಹಲವು ಹೋಟೆಲ್‌ಗಳು ಪೂಲ್‌ ಪಾರ್ಟಿ, ರೇನ್‌ ಡಿಸ್ಕೋ, ವಾಟರ್‌ ಸ್ಪ್ರೇಗಳನ್ನು ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಿವೆ. ಹೋಟೆಲ್‌ಗಳು ಮಾ.23, 24, 25 ದಿನಗಳಂದು ಹೋಳಿ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಉಚಿತ ಬಣ್ಣ, ಹೋರಾಂಗಣ ಬಣ್ಣದಾಟ, ಬಾಲಿವುಡ್, ಹಾಲಿವುಡ್ ಮ್ಯೂಸಿಕ್‌, ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದಾಗಿ ತಿಳಿಸಿವೆ.

ಬೆಂಗಳೂರು(ಮಾ.21):  ಒಂದು ಕಡೆ ದುಡ್ಡು ಕೊಟ್ಟರೂ ಟ್ಯಾಂಕರ್‌ ನೀರು ಸಿಗದ ಸಂದರ್ಭ ಎದುರಾಗಿದ್ದರೆ ಇನ್ನೊಂದು ಕಡೆ ಹೋಳಿ ಹಬ್ಬಕ್ಕಾಗಿ ಕೆಲ ಹೋಟೆಲ್‌, ರೆಸ್ಟೋರೆಂಟ್‌ಗಳು ಪೂಲ್‌ ಪಾರ್ಟಿ, ರೇನ್‌ ಡಿಸ್ಕೋಗಳನ್ನು ತಮ್ಮ ಪ್ಯಾಕೇಜ್‌ನಲ್ಲಿ ಘೋಷಿಸಿವೆ.

ಈಗಾಗಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಹೋಳಿಗಾಗಿ ನೀರು ವ್ಯರ್ಥ ಮಾಡದಂತೆ ಸೂಚಿಸಿವೆ. ಇದರ ನಡುವೆಯೂ ನಗರದೊಳಗಿನ ಹಾಗೂ ಹೊರವಲಯದ ಕೆಲ ಹೋಟೆಲ್‌ಗಳು ಹಲವು ಕಾರ್ಯಕ್ರಮ ರೂಪಿಸಿವೆ. ಹಲವು ಹೋಟೆಲ್‌ಗಳು ಡ್ರೈ ಹೋಳಿ ಎಂದು ಖಚಿತವಾಗಿ ಉಲ್ಲೇಖಿಸಿವೆ.

BREAKING: ಬೆಂಗಳೂರು ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಕೆ ನಿಷೇಧ; ನಿಯಮ ಉಲ್ಲಂಘಿಸಿದರೆ ದಂಡ

ಆದರೆ, ಇನ್ನು ಹಲವು ಹೋಟೆಲ್‌ಗಳು ಪೂಲ್‌ ಪಾರ್ಟಿ, ರೇನ್‌ ಡಿಸ್ಕೋ, ವಾಟರ್‌ ಸ್ಪ್ರೇಗಳನ್ನು ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಿವೆ. ಹೋಟೆಲ್‌ಗಳು ಮಾ.23, 24, 25 ದಿನಗಳಂದು ಹೋಳಿ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಉಚಿತ ಬಣ್ಣ, ಹೋರಾಂಗಣ ಬಣ್ಣದಾಟ, ಬಾಲಿವುಡ್, ಹಾಲಿವುಡ್ ಮ್ಯೂಸಿಕ್‌, ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದಾಗಿ ತಿಳಿಸಿವೆ.

ಇದರ ಜೊತೆಗೆ ಬರದ ನಡುವೆಯೂ ಹೆಚ್ಚು ನೀರು ಬಳಕೆಯಾಗುವ ಮೋಜಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಏಕಕಾಲಕ್ಕೆ 2ರಿಂದ 5 ಸಾವಿರದವರೆಗೆ ಜನ ಸೇರುವ ಕಾರ್ಯಕ್ರಮಗಳು ಕೆಲವೆಡೆ ಸಿದ್ಧತೆಯಾಗಿವೆ. ಕುಟುಂಬ, ಸ್ನೇಹಿತರ ಗುಂಪಿಗಾಗಿ ಪ್ರತ್ಯೇಕ ದರ ಪಟ್ಟಿಯನ್ನು ತಿಳಿಸಿವೆ. ಇದರಿಂದ ವಿಫುಲ ಪ್ರಮಾಣದ ನೀರು ಪೋಲಾಗುವ ಸಾಧ್ಯತೆಯಿದೆ.

ಜಲಮಂಡಳಿ, ಬಿಬಿಎಂಪಿ ಎಚ್ಚರಿಕೆ ಬಳಿಕ ಪ್ಯಾಕೇಜ್‌ನಲ್ಲಿ ಯಾವುದೇ ಬದಲಾವಣೆ ಮಾಡಿರುವುದನ್ನೂ ತಿಳಿಸಲಾಗಿಲ್ಲ. ಇದರಿಂದ ಗ್ರಾಹಕರೂ ಗೊಂದಲಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ನೀರಿನ ಕೊರತೆಯಿದ್ದು, ದೈನಂದಿನ ಬಳಕೆಗೂ ಜನತೆ ಪರದಾಡುತ್ತಿದ್ದಾರೆ. ಈ ನಡುವೆ ಪ್ರತಿಷ್ಠಿತ, ಐಷಾರಾಮಿ ಹೋಟೆಲ್‌ಗಳು ಹೋಳಿ ಇವೆಂಟ್‌ ಆಯೋಜನೆ ಮಾಡಿರುವುದು ನಗರದ ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.

click me!