Mangaluru: ಹಿಂದೂಗಳು ನಮ್ಮ ಏರಿಯಾಗೆ ಬರಬೇಡಿ: ಅಯ್ಯಪ್ಪ ಮಾಲಾಧಾರಿಗೆ ಬೆದರಿಕೆ!

By Sathish Kumar KHFirst Published Dec 28, 2022, 7:49 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದಲ್ಲಿ ಹಿಂದೂಗಳಿಗೆ ಪ್ರವೇಶ ನಿಷೇಧ
ಅಯ್ಯಪ್ಪ ಮಾಲಾಧಾರಿಗೆ ಮುಸ್ಲಿಂ ಯುವಕನಿಂದ ಅವ್ಯಾಚ್ಯ ಶಬ್ದಗಳಿಂದ ನಿಂದನೆ
ಕೋರಿಯರ್‌ ಪಾರ್ಸೆಲ್‌ ಬಂದಿದ್ದನ್ನು ಕೊಡಲು ಹೋದ ಯುವಕನಿಗೆ ಅವಮಾನ

ಮಂಗಳೂರು (ಡಿ.28):  ಪಾರ್ಸೆಲ್ ವಾಹನದಲ್ಲಿ ವಸ್ತುವೊಂದನ್ನು ನೀಡಲು ಬಂದಿದ್ದ ಅಯ್ಯಪ್ಪ ವೃತಧಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಗೂಡಿನ ಬಳಿ ನಿವಾಸಿ, ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನ ಮೇಲೆ ನಗರ ಪೋಲೀಸ್ ‌ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯಶ್ವಿತ್ ಎಂಬಾತ  ಮಾಲಾಧಾರಿಯಾಗಿದ್ದು, ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  

Mangaluru: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಸೂಚಿಸಿದ್ರಂತೆ ಶಿಕ್ಷಕರು!

ಜೀವ ಬೆದರಿಕೆ ಹಾಕಿದ್ದ ಆರೋಪಿ: ಬಿ.ಮೂಡ ಗ್ರಾಮದ ಗೂಡಂಗಡಿಯ ಬಳಿ ಸಮೀಪ ಪಾರ್ಸೆಲ್ ಒಂದನ್ನು ನೀಡಲು ತೆರಳಿದ ವೇಳೆ ಆರೋಪಿ ಇಕ್ಬಾಲ್ 'ಇದು ನಮ್ಮ ಏರಿಯಾ. ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂಬ ಮಾತನ್ನು ಹೇಳಿದ್ದಲ್ಲದೇ, ಅಯ್ಯಪ್ಪ ವ್ರತಧಾರಿಗಳ ಬಗ್ಗೆ ‌ನಿಂದನೆಯ ಮಾತುಗಳನ್ನು ಆಡಿದ್ದಾನೆ. ಜೊತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಾರದ ಹಿಂದೆ ಅಯ್ಯಪ್ಪ ಮಾಲಾಧಾರಿಗೆ ಶಾಲೆ ಪ್ರವೇಶ ನಿಷೇಧ: ಇನ್ನು ಕಳೆದೊಂದು ವಾರದ ಹಿಂದೆ ಮಂಗಳೂರಿನ ಖಾಸಗಿ ಶಾಲೆಗೆ ವಿದ್ಯಾರ್ಥಿಯೊಬ್ಬ ಅಯ್ಯಪ್ಪ ಮಲಾಧಾರಣೆ ಮಾಡಿಕೊಂಡು ಹೋಗಿದ್ದರಿಂದ, ಆ ವಿದ್ಯಾರ್ಥಿಯ ಮೇಲೆ ಅನ್ಯ ಕೋಮಿನ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿತ್ತು. ಇದೀಗ ಹಲ್ಲೆ ಪ್ರಕರಣದ ಬೆನ್ನಲ್ಲೇ ಖಾಸಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಮಾಲೆ ಧರಿಸಿ ಶಾಲೆಗೆ ಬರದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿ ಮತ್ತು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ನಾಲ್ವರು ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ಮಾಡಲಾಗಿತ್ತು.

Mangaluru Crime: ಮಂಗಳೂರಿನ ಕಾಟಿಪಳ್ಳದ ಜಲೀಲ್ ಹತ್ಯೆ: ಮೂವರು ಆರೋಪಿಗಳ ಬಂಧನ

ಹಲವು ಬಾರಿ ಗಲಾಟೆ ನಡೆದಿತ್ತು:  ಮಂಗಳೂರು ನಗರದ ಕಪಿತಾನಿಯೋ ಶಾಲೆಯ ವಿದ್ಯಾರ್ಥಿಗೆ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಅದೇ ಶಾಲೆಯ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಗಲಾಟೆ ನಡೆದಿತ್ತು. ಗಲಾಟೆ ನಡೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ಮತ್ತೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಆರೋಪ ವ್ಯಕ್ತವಾಗಿದೆ. ಗಾಯಾಳು ವಿದ್ಯಾರ್ಥಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾಲೆ ಹಾಕಿ ಶಾಲೆಗೆ ಬರಬೇಡಿ ಎಂದು ಸೂಚನೆ: ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ಅನ್ಯ ಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹಲ್ಲೆಗೊಳಗಾದ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ತರಗತಿಯ ಮಂಜುನಾಥ್ ಎಂಬ ವಿದ್ಯಾರ್ಥಿಗೆ ಹೊಡೆದ ಬಗ್ಗೆ ಶಿಕ್ಷಕರಿಗೆ ದೂರು ಕೊಡಲಾಗಿತ್ತು. ಈ ವೇಳೆ ನಮಗೆ ಕಾಲು ಅಡ್ಡ ಇಟ್ಟು ಹೊಡೆಯಲು ಬಂದಿದ್ದರು. ಮಾಲೆ ಹಾಕಿದ ಮೇಲೆ ‌ಮತ್ತು ನಂತರ ಹಲ್ಲೆಗೆ ಮುಂದಾಗಿದ್ದಾರೆ. ಶಿಕ್ಷಕರ ಮುಂದೆಯೇ ಎದೆಗೆ ಹೊಡೆದು, ಅವರ ಎದುರಲ್ಲೇ ಹಲ್ಲೆ ಮಾಡಿದ್ದಾರೆ. ಆ ಬಳಿಕ ಸಿಸ್ಟರ್ ಕರೆದು ಮಾಲೆ ಹಾಕಿ ಶಾಲೆಗೆ ಬರಬೇಡಿ ಎಂದಿದ್ದರು ಎಂದು ವಿದ್ಯಾರ್ಥಿ ತಿಳಿಸಿದ್ದನು. 

click me!