Satish Jarkiholi: ಹಿಂದು ಪದ ಹೇಳಿಕೆ ವಿಚಾರ: ಸತೀಶ ತೇಜೋವಧೆ ಖಂಡಿಸಿ ಪ್ರತಿಭಟನೆ

By Kannadaprabha News  |  First Published Nov 14, 2022, 11:22 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹಿಂದು ಹೇಳಿಕೆ ಮುಂದಿಟ್ಟುಕೊಂಡು ಅವರ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದವರು ಸೋಮವಾರ ಪ್ರತಿಭಟನೆ ನಡೆಸಿದರು.


ರಾಯಬಾಗ (ನ.14) : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹಿಂದು ಹೇಳಿಕೆ ಮುಂದಿಟ್ಟುಕೊಂಡು ಅವರ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದವರು ಸೋಮವಾರ ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಝೇಂಡಾಕಟ್ಟೆವರೆಗೆ ಬೃಹತ ಪ್ರತಿಭಟನಾ ರಾರ‍ಯಲಿ ನಡೆಸಿದರು.

ಬಳಿಕ ಝೇಂಡಾಕಟ್ಟೆಹತ್ತಿರ ಬಿಜೆಪಿ ವಿರುದ್ಧ ಮತ್ತು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಈರಣ್ಣ ಕಡಾಡಿ, ಬಸವನಗೌಡಪಾಟೀಲ ಯತ್ನಾಳ ಅವರ ವಿರುದ್ಧ ಘೋಷಣೆ ಕೂಗಿ, ಅವರ ಭಾವಚಿತ್ರದ ಪ್ರತಿಕೃತಿ ದಹನ ಮಾಡಿದರು.

Tap to resize

Latest Videos

ನೋವಾಗಿದ್ದರೆ ವಿಷಾದ, ಹೇಳಿಕೆ ವಾಪಸ್ ಪಡೆದು ತನಿಖೆಗೆ ಆಗ್ರಹಿಸಿ ಸತೀಶ್ ಜಾರಕಿಹೊಳಿ!

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸತೀಶ ಜಾರಕಿಹೊಳೆ ಅಭಿಮಾನಿ ಬಳಗದ ಅಧ್ಯಕ್ಷ ರಾಜು ಶಿರಗಾಂವೆ ಅವರು, ಸತೀಶ ಜಾರಕಿಹೊಳಿ ಅವರ ಘನತೆಗೆ ಧಕ್ಕೆ ಉಂಟು ಮಾಡುತ್ತಿರುವ ಕೆಲವೊಂದು ಪಟ್ಟಭದ್ರ ಹಿತಾಸಕ್ತಿವುಳ್ಳ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಜಾತಿವಾದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸತೀಶ ಜಾರಕಿಹೊಳಿ ಅವರ ತೇಜೋವಧೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋದಲ್ಲಿ ರಾಜ್ಯದಲ್ಲಿ ಉಗ್ರ ಹೋರಾಟ ಆಗಬಹುದು ಎಂದು ಎಚ್ಚರಿಸಿದರು.

ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ, ಅವರ ಪರ ಜೈಕಾರ ಹಾಕಿದರು. ನಂತರ ಗ್ರೇಡ್‌-2 ತಹಸೀಲ್ದಾರ್‌ ಪಿ.ಎಮ್‌.ಕಲ್ಲೋಳ್ಳಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸತೀಶ್ ಜಾರಕಿಹೊಳಿ ವಿರುದ್ಧ ಸಿಡಿದೆದ್ದ ಕೇಸರಿ ಪಡೆ: ಬೆಳಗಾವಿಯಲ್ಲಿ ಪ್ರತಿಭಟನೆ

ಪ್ರತಿಭಟನೆ ರಾರ‍ಯಲಿಯಲ್ಲಿ ನ್ಯಾಯವಾದಿ ಆರ್‌.ಎಸ್‌.ಶಿರಗಾಂವೆ, ಕುಡಚಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರೇವಣ್ಣ ಸರವ, ಪಿ.ಎಮ್‌.ಕಾಂಬಳೆ, ಕಿರಣ ಕಾಂಬಳೆ, ವಾಮನ ಹಟ್ಟಿಮನಿ, ರವಿ ನಲವಡೆ, ಸುಭಾಷ ಮಲಾಜುರೆ, ರಮೇಶ ಬೆಳಗಲಿ, ಹನುಮಂತ ಅಸೋದೆ, ದಿಲೀಪ ಪಾಯನ್ನವರ, ಲೋಕೇಶ ಕಾಂಬಳೆ, ಮಿಥುನ ಕಾಂಬಳೆ, ವಿನೋದ ಘಾಟಗೆ, ದೇವಕರ ಅಸೋದೆ ಸೇರಿದಂತೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

click me!