ಈಶ್ವರಪ್ಪನವರೇ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವ ತಾಕತ್ ಇದ್ಯಾ?: ಹಿಂದೂ ಮಹಾಸಭಾ ಸವಾಲ್

By Girish Goudar  |  First Published Apr 16, 2022, 3:22 PM IST

*  ನೀವು ಧರ್ಮಸ್ಥಳದ ದೇವರನ್ನು ಒಪ್ಪುವುದಾದ್ರೆ ಅಲ್ಲಿಗೆ ಬರಲು ರೆಡಿ ಇದ್ದೀರಾ?
*  ನಾವು ಕೂಡಾ ಬರ್ತೀವಿ‌. ಇಡೀ ಮಾಧ್ಯಮದವರನ್ನು ಕರೆಯೋಣ
*  ಅಧಿಕಾರಕ್ಕೆ ಬರುವಾಗ ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆರೋಪಿಸಿದ ನೀವು ಈಗೇನು ಮಾಡ್ತಿದ್ದೀರಾ? 
 


ಮಂಗಳೂರು(ಏ.16):  ಅಖಿಲ ಭಾರತ ಹಿಂದೂ ಮಹಾಸಭಾ ಮಾಜಿ ಸಚಿವ ಈಶ್ವರಪ್ಪ(KS Eshwarappa) ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿ‍ದೆ. ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಪ್ರಕರಣದಲ್ಲಿ ಲಂಚ ಪಡೆದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ ಎಂದು ಹಿಂದೂ ಮಹಾಸಭಾ(Hindu Mahasabha) ಸವಾಲು ಹಾಕಿದೆ.

ಇಂದು(ಶನಿವಾರ) ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ‌ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು, ಭ್ರಷ್ಟಾಚಾರ(Corruption) ನಿರ್ಮೂಲನೆ ಮಾಡ್ತೇವೆ, ಸ್ವಚ್ಚ ಆಡಳಿತ ಕೊಡ್ತೇವೆ ಎಂದು ಭರವಸೆ ‌ನೀಡಿ ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರ(BJP Government) ಈಗ ಏನ್ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ. 

Tap to resize

Latest Videos

ಟೆಂಡರ್ ಆರಂಭದಲ್ಲೇ ಡೀಲ್: ಇದು ಮಾಜಿ ಸಚಿವ ಈಶ್ವರಪ್ಪ ಇಲಾಖೆಯಲ್ಲಿ ನಡೆಯುವ ಅಕ್ರಮ!

ಈಶ್ವರಪ್ಪನವರು ನಾನು ಕಮಿಷನ್(Commission) ಕೇಳಿಲ್ಲ ಎಂದು ಹೇಳ್ತಿದ್ದಾರೆ. ನಾನು ಅವರಿಗೆ ಸವಾಲ್ ಹಾಕ್ತಿದ್ದೀನಿ, ಈಶ್ವರಪ್ಪ ಸಹಿತ ಈಗಿನ ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ(Dharmasthala) ಬಂದು ನಾವು ಲಂಚ(Bribe) ತೆಗೆದಿಲ್ಲ ಎಂದು ಆಣೆ ಮಾಡಲಿ. ನಿಮಗೆ ಪ್ರಮಾಣ ಮಾಡಲು ಆಗುತ್ತಾ..? ಆ ತಾಕತ್ತ್ ಇದ್ಯಾ ಎಂದು ಪ್ರಶ್ನೆ ಮಾಡಿದರು. 

ನೀವು ಧರ್ಮಸ್ಥಳದ ದೇವರನ್ನು ಒಪ್ಪುವುದಾದ್ರೆ ಅಲ್ಲಿಗೆ ಬರಲು ರೆಡಿ ಇದ್ದೀರಾ? ನಾವು ಕೂಡಾ ಬರ್ತೀವಿ‌. ಇಡೀ ಮಾಧ್ಯಮದವರನ್ನು ಕರೆಯೋಣ. ಆಗ ನಾವು ನಿಮ್ಮನ್ನು ಒಳ್ಳೆಯವರು ಎಂದು ಕರೆಯಬಹುದು. ಆದ್ರೆ ಪ್ರಮಾಣ ಮಾಡಿಯೂ ನೀವು ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ನೀವು ಎರಡೆರಡು ಧರ್ಮದ್ರೋಹಿಗಳು ಆಗ್ತೀರಾ ಎಂದರು. ಇನ್ನು ನೀವು ಅಧಿಕಾರಕ್ಕೆ ಬರುವಾಗ ಕಾಂಗ್ರೆಸ್(Congress) ಲೂಟಿ ಮಾಡಿದೆ ಎಂದು ಆರೋಪಿಸಿದ ನೀವು ಈಗೇನು ಮಾಡ್ತಿದ್ದೀರಾ..? 40% ಕಮಿಷನ್ ಕೇಳ್ತಿದ್ದೀರಿ ಅಲ್ವಾ..? ಒಂದು ಕಾಮಗಾರಿಯಲ್ಲಿ 40% ಕಮಿಷನ್ ಪಡೆಯುವುದೆಂದ್ರೆ ಆ ಕಾಮಗಾರಿಯ ಸ್ಥಿತಿ ಹೇಗಿರಬಹುದು..? ನೀವೇ ಹೇಳಿ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikkamagaluru: ಸಂತೋಷ್ ಪಾಟೀಲ್ ಸಾಯುವ ಮುನ್ನ ಕಾಫಿನಾಡಿನಲ್ಲಿ ವಾಸ್ತವ್ಯ!

'ಸಂತೋಷ ಸಾವಿಗೂ ಡಿಕೆಶಿ, ಹೆಬ್ಬಾಳ್ಕರ್‌ಗೂ ಏನು ಸಂಬಂಧ?'

ಕೊಪ್ಪಳ: ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಅವರ ಹೆಸರನ್ನು ಸಂತೋಷ ಪಾಟೀಲ್‌(Santosh Patil) ಅವರು ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿರುವಾಗ ವಿನಾಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ. ಕೇಸ್‌ಗೂ- ಅವರಿಗೂ ಏನು ಸಂಬಂಧ? ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಅವರು ಖಾರವಾಗಿ ಪ್ರಶ್ನಿಸಿದರು.

ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್‌(Congress) ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಮತ್ತು ಆರೋಪ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
 

click me!