ಇಂದು ಹಿಂದೂ ಗಣಪತಿ ಮೆರವಣಿಗೆ: ಕೇಸರಿಮಯವಾದ ಶಿವಮೊಗ್ಗ, ಪೊಲೀಸ್‌ ಸರ್ಪಗಾವಲು..!

By Kannadaprabha News  |  First Published Sep 9, 2022, 4:30 AM IST

ಗಣಪತಿ ಮೆರವಣಿಗೆ ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಬಂಟಿಂಗ್ಸ್‌ ಸೇರಿದಂತೆ ವಿವಿಧ ರೀತಿಯ ಅಲಂಕಾರ ಮಾಡಲಾಗಿದೆ. ಈಗಾಗಲೇ ಮೆರವಣಿಗೆ ಸಾಗುವ ರಸ್ತೆಗಳೆಲ್ಲ ಶೃಂಗಾರ ಮಾಡಲಾಗಿದ್ದು, ಎಲ್ಲೆಡೆ ಕೇಸರಿಮಯವಾಗಿದೆ. 


ಶಿವಮೊಗ್ಗ(ಸೆ.09):  ಹಿಂದೂ ಮಹಾಸಭಾ ಗಣಪನ ವಿಸರ್ಜನೆ ಸೆ.9ರಂದು ವಿಜೃಂಭಣೆಯಿಂದ ನಡೆಸಲು ಹಿಂದೂ ಸಂಘಟನೆಗಳು ಭರದ ಸಿದ್ಧತೆ ನಡೆಸಿದ್ದು, ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ನಗರ ಸಜ್ಜಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರವನ್ನು ಕೇಸರಿಮಯಗೊಳಿಸಲಾಗಿದೆ. ಗಣಪತಿ ಮೆರವಣಿಗೆ ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಬಂಟಿಂಗ್ಸ್‌ ಸೇರಿದಂತೆ ವಿವಿಧ ರೀತಿಯ ಅಲಂಕಾರ ಮಾಡಲಾಗಿದೆ. ಈಗಾಗಲೇ ಮೆರವಣಿಗೆ ಸಾಗುವ ರಸ್ತೆಗಳೆಲ್ಲ ಶೃಂಗಾರ ಮಾಡಲಾಗಿದ್ದು, ಎಲ್ಲೆಡೆ ಕೇಸರಿಮಯವಾಗಿದೆ. ನಗರದ ಗಾಂಧಿ ಬಜಾರ್‌, ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪ ನಾಯಕ ವೃತ್ತ, ಅಮೀರ್‌ ಅಹ್ಮದ್‌ ಸರ್ಕಲ್‌, ನೆಹರು ರಸ್ತೆ ದುರ್ಗಿಗುಡಿ ತುಂಬೆಲ್ಲ ಕೇಸರಿ ಬಂಟಿಂಗ್ಸ್‌ಗಳು ರಾರಾಜಿಸತೊಡಗಿವೆ.

ಅಮೀರ್‌ ಅಹಮದ್‌ (ಎಎ) ವೃತ್ತವನ್ನು ಕೇಸರಿ ವಸ್ತ್ರದಿಂದ ಸಂಪೂರ್ಣ ಶೃಂಗರಿಸಲಾಗಿದೆ. ಗಾಂಧಿ ಬಜಾರ್‌ಗೆ ತೆರಳುವ ಮಾರ್ಗದ ಮುಂಭಾಗ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಗೀತೋಪದೇಶ ಸಾರುವ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಸ್ತಬ್ಧಚಿತ್ರ ಸ್ಥಾಪಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ನೆಹರು ರಸ್ತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಶುಭಾಶಯ ಕೋರುವ ದೊಡ್ಡ ದೊಡ್ಡ ಫ್ಲೆಕ್ಸ್‌ ಕಂಡುಬಂದಿದೆ.

Tap to resize

Latest Videos

Ganesh Visarjan 2022: ಬೆಂಗ್ಳೂರಿನ ಕೆರೆಗಳಲ್ಲಿ ಲಕ್ಷಕ್ಕೂ ಅಧಿಕ ಗಣೇಶ ಮುರ್ತಿ ವಿಸರ್ಜನೆ

ಪೊಲೀಸ್‌ ಸರ್ಪಗಾವಲು:

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಬಂದೋಬಸ್ತ್‌ ಕರ್ತವ್ಯಕ್ಕೆ 2 ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, 19 ಪೊಲೀಸ್‌ ಉಪಾಧೀಕ್ಷಕರು, 46 ಪೋಲಿಸ್‌ ನಿರೀಕ್ಷಕರು, 71 ಪೊಲೀಸ್‌ ಉಪನಿರೀಕ್ಷಕರು, 1970 ಪೊಲೀಸ್‌ ಸಿಬ್ಬಂದಿ, 700 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌.ಎ.ಎಫ್‌. ಕಂಪನಿ(200 ಅಧಿಕಾರಿ ಮತ್ತು ಸಿಬ್ಬಂದಿ), 15 ಕೆ.ಎಸ್‌.ಆರ್‌.ಪಿ. ತುಕಡಿಯ(300 ಅಧಿಕಾರಿ ಮತ್ತು ಸಿಬ್ಬಂದಿ), 15 ಡಿಎಆರ್‌ ತುಕಡಿ(120 ಅಧಿಕಾರಿ ಹಾಗೂ ಸಿಬ್ಬಂದಿ)ಗಳನ್ನು ನಿಯೋಜಿಸಲಾಗಿದೆ.

ನಗರ ವ್ಯಾಪ್ತಿ ಶಾಲೆಗಳಿಗೆ ರಜೆ ನೀಡಲು ಅನುಮತಿ

ಹಳೇ ಶಿವಮೊಗ್ಗ ಭಾಗದಲ್ಲಿ ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ಪರಿಸ್ಥಿತಿ ಅನುಗುಣವಾಗಿ ಅಗತ್ಯವಿದ್ದರೆ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗೆ ರಜೆ ಭಾನುವಾರ ಪೂರ್ಣದಿನ ಶಾಲೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಆದೇಶ ನೀಡಿದ್ದಾರೆ ಎಂದು ಬಿಇಒ ಪಿ.ನಾಗರಾಜ್‌ ತಿಳಿಸಿದ್ದಾರೆ. ಈ ಹಿನ್ನೆಲೆ ನಗರದ ಬಹುತೇಕ ಶಾಲೆಗಳಿಗೆ ಆಯಾ ಶಾಲಾ ಮುಖ್ಯಶಿಕ್ಷಕರು ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
 

click me!