ಅಪ್ಪನ ಮನೆಯಿಂದ ಹಣ ತಂದು ಹೈವೇ ನಿರ್ಮಾಣ ಮಾಡಿಲ್ಲ- ವಿಶ್ವನಾಥ್‌ ಕಿಡಿ

By Kannadaprabha News  |  First Published Mar 15, 2023, 12:14 PM IST

ಮೋದಿ ಅಪ್ಪನ ಮನೆಯಿಂದ ಹಣ ತಂದು ಹೈವೇ ನಿರ್ಮಾಣ ಮಾಡಿಲ್ಲ. ಪ್ರತಾಪ್‌ ಸಿಂಹ ಅಪ್ಪನ ಮನೆಯಿಂದ ಹಣ ತಂದು ಹೈವೇ ಮಾಡಿಲ್ಲ. ಜನರ ತೆರಿಗೆ ಹಣದಿಂದ ಹೈವೇ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್‌ ನಿಗದಿ ಮಾಡಿರೋದು ಸರಿಯಲ್ಲ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಕಿಡಿಕಾರಿದರು.


 ಮೈಸೂರು :  ಮೋದಿ ಅಪ್ಪನ ಮನೆಯಿಂದ ಹಣ ತಂದು ಹೈವೇ ನಿರ್ಮಾಣ ಮಾಡಿಲ್ಲ. ಪ್ರತಾಪ್‌ ಸಿಂಹ ಅಪ್ಪನ ಮನೆಯಿಂದ ಹಣ ತಂದು ಹೈವೇ ಮಾಡಿಲ್ಲ. ಜನರ ತೆರಿಗೆ ಹಣದಿಂದ ಹೈವೇ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್‌ ನಿಗದಿ ಮಾಡಿರೋದು ಸರಿಯಲ್ಲ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಕಿಡಿಕಾರಿದರು.

ಹೆದ್ದಾರಿ ನಿರ್ಮಾಣದ ಕ್ರೆಡಿಟ್‌ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಸಂಸದರು ಹೇಳುತ್ತಿದ್ದಾರೆ. ಆದರೆ, ಬೆಂಗಳೂರು- ಮೈಸೂರು ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೈವೇ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಜನರಿಗೆ ತೀವ್ರ ತೊಂದರೆಯಾಗಿದೆ. ಹೈವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪ್ರಧಾನಿ ನರೇಂದ್ರ ಮೋದಿ ಬಂದು ಉದ್ಘಾಟಿಸಿದ್ದಾರೆ. ಈ ಮೂಲಕ ತಾವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಹೈವೇ ಕಾಮಗಾರಿ ನೆಪದಲ್ಲಿ ಲೂಟಿ ಮಾಡಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Latest Videos

undefined

ಹೈವೇ ನಿರ್ಮಾಣದಿಂದ 200 ಹೋಟೆಲ್‌ಗಳು, 91 ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿವೆ. ನೂರಾರು ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ನಷ್ಟವಾಗಿದೆ. ಬಿಜೆಪಿಯವರು ಬಡ ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದಾರೆ. ಮೋದಿ ದೆಹಲಿಯಲ್ಲಿ ಚನ್ನಪಟ್ಟಣದ ಬೊಂಬೆ ಹಿಡಿದು ಕುಳಿತು ಈ ಬೊಂಬೆಗಳನ್ನು ವಿಶ್ವಕ್ಕೆ ಮುಟ್ಟಿಸುತ್ತೇವೆ ಎಂದಿದ್ದರು. ಆದರೆ, ಹೈವೇ ನಿರ್ಮಾಣದಿಂದ ಚನ್ನಪಟ್ಟಣದ ಬೊಂಬೆ ಕಥೆ ಏನಾಯಿತು? ಬೊಂಬೆ ಹೇಳುತೈತೇ ಎಂದು ಅವರು ಕುಟುಕಿದರು.

ಹೈವೇ ಪೂರ್ಣ ಉದ್ಘಾಟನೆ ಆಗಿಲ್ಲ, ಕೇವಲ ಅರ್ಧ ಪೂರ್ಣಗೊಂಡಿರುವ ಹೈವೇ ಉದ್ಘಾಟಿಸಿದ್ದಾರೆ. ಅರ್ಧ ಶೇವ್‌ ಮಾಡಿದ್ದಾರೆ, ಮತ್ತರ್ಧ ಶೇವ್‌ ಮಾಡಿಲ್ಲ. ಹೈವೇಗೆ ವಿಧಿಸಿರುವ ದುಬಾರಿ ಟೋಲ್‌ ವಿರೋಧಿಸಿ ಮಾಚ್‌ರ್‍ 17 ರಂದು ಮೈಸೂರಿನ ಮಣಿಪಾಲ್‌ ಆಸ್ಪತ್ರೆಯ ಜಂಕ್ಷನ್‌ ಬಳಿ ಶಾಂತಿಯುತ ಪ್ರತಿಭಟನೆ ಮಾಡುತ್ತೇನೆ. ನನ್ನೊಂದಿಗೆ ಯಾರು ಬರದಿದ್ದರೂ ಏಕಾಂಗಿಯಾಗಿಯೇ ಒಂದು ಗಂಟೆ ಕಾಲ ಶಾಂತಿಯುತ ಪ್ರತಿಭಟಿಸುತ್ತೇನೆ ಎಂದು ಅವರು ತಿಳಿಸಿದರು.

ದಶಪಥ ರಸ್ತೆ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲ. ಒಂದು ಕಡೆ ಪ್ರತಾಪ್‌ ಸಿಂಹ ನಾನೇ ಇದರ ರುವಾರಿ ಎನ್ನುತ್ತಾರೆ. 2009ರಿಂದ 14ವರೆಗೆ ನಾನು ಮತ್ತು ಆರ್‌. ಧ್ರುವನಾರಾಯಣ್‌ ಎಂಪಿ ಆಗಿದ್ದವು. ಮೊದಲು ಎರಡು ಪಥದ ರಸ್ತೆಯಾಗಿದ್ದ ಹೆದ್ದಾರಿಯನ್ನು ಎಸ್‌.ಎಂ. ಕೃಷ್ಣ ಅವರ ಕಾಲಾದಲ್ಲಿ 4 ಪಥದ ರಸ್ತೆಯನ್ನಾಗಿ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್‌.ಸಿ ಮಹಾದೇವಪ್ಪ ಅವರು ಏಪ್ರಿಲ್‌ 4 ರಂದು ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಯಿತು. ಎಕ್ಸ್‌ಪ್ರಸ್‌ ಹೈವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಹೀಗಿದ್ದರೂ ಬಿಜೆಪಿ ನಾಯಕರು ಹೆದ್ದಾರಿಯನ್ನು ನಾವು ಮಾಡಿಸಿದ್ದು ಎಂದು ಬೊಗಳೆ ಹೊಡೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಒಂದು ಕಿ.ಮೀ. . 1 ಸಂಗ್ರಹಿಸಿ

ಈ ಹೆದ್ದಾರಿಯಲ್ಲಿ ಪ್ರತಿನಿತ್ಯ 1 ಲಕ್ಷ ವಾಹನ ಅಲ್ಲಿ ಸಂಚರಿಸಲಿವೆ. ಒಂದು ವಾಹನಕ್ಕೆ ಪ್ರತಿ ಕಿ.ಮೀ.ಗೆ . 1 ನಂತೆ ಸಂಗ್ರಹಿಸಿದರೆ ದಿನಕ್ಕೆ . 5 ಕೋಟಿ, ವಾರಕ್ಕೆ . 35 ಕೋಟಿ ಹಾಗೂ ತಿಂಗಳಿಗೆ . 150 ಕೋಟಿ ಆಗಲಿದೆ. ವರ್ಷಕ್ಕೆ . 1800 ಕೋಟಿ ಆಗಲಿದೆ. ಹೀಗಿದ್ದರೂ 10 ವರ್ಷ ಅವಧಿಗೆ ಟೋಲ್‌ ಸಂಗ್ರಹ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಸರ್ಕಾರ ಟೋಲ್‌ನಿಂದ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಅವರು ದೂರಿದರು.

ಪ್ರತಾಪ್‌ ಸಿಂಹ ವಿರುದ್ಧ ಕಿಡಿ

ಮೈಸೂರು- ಬೆಂಗಳೂರು ದಶಪಥ ಕಾಮಗಾರಿಯಲ್ಲಿ ನಿಮಗೆ ಲಾಭವಾಗಿಲ್ಲವೇ ಪ್ರತಾಪ್‌ ಸಿಂಹ? ಮರಳು ಜಲ್ಲಿ ಕಲ್ಲು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೇ ಪ್ರಪಂಚಕ್ಕೆ ಗೊತ್ತಾಗಲ್ವಾ? ಏನಪ್ಪಾ ಪ್ರತಾಪ್‌ ಸಿಂಹ ಎಷ್ಟುಕೋಟಿಗೆ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು- ಮೈಸೂರು ಹೈವೇಯಲ್ಲಿ ಎಷ್ಟುಬಂತು? ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆ ಹೇಗಿದೆ? ನೀನು ನಿನ್ನೆ ಬಂದವನು, ನಿನ್ನ ಮನೆ ಹೇಗಿದೆ? ಎಷ್ಟುಕೋಟಿಗೆ ಮನೆ ಕಟ್ಟುತ್ತಿದ್ದೀಯಾ ಹೇಳಪ್ಪಾ ಪ್ರತಾಪ್‌ ಸಿಂಹ ಎಂದು ವಿಧಾನ ಪರಿಷತ್ತು ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ಇವರಿಗೆ ಮಾನ ಮರ್ಯಾದೆ ಇಲ್ವಾ? ನಾಚಿಕೆ ಆಗಲ್ವಾ? ಉರಿಗೌಡ, ನಂಜೇಗೌಡ ಎಂಬುವರ ಹೆಸರೇಳಿಕೊಂಡು ರಾಜಕೀಯ ಮಾಡ್ತಿದಾರಲ್ಲಾ ಇವರಿಗೆ ಏನೆನ್ನಬೇಕು? ಇವರನ್ನು ತಂದು ಅಧಿಕಾರಕ್ಕೆ ಕೂರಿಸಿದ ನಾನು ಸಹ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ.

- ಎಚ್‌. ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ

click me!