ಹಾರಂಗಿ ಜಲಾಶಯದಲ್ಲಿ ಈ ಬಾರಿ ಕಳೆದ ಸಾಲಿಗಿಂತ 22 ಅಡಿಗಳಷ್ಟುನೀರು ಹೆಚ್ಚುವರಿ ಸಂಗ್ರಹ ಕಂಡುಬಂದಿದೆ. ಈ ಸಾಲಿನಲ್ಲಿ ಜಲಾಶಯದಲ್ಲಿ 3.54 ಟಿಎಂಸಿ ಪ್ರಮಾಣದ ನೀರು ಸಂಗ್ರಹವಿದ್ದು, ಕಳೆದ ವರ್ಷ ಕೇವಲ 1.9 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹವಿತ್ತು.
ಮಡಿಕೇರಿ(ಮಾ.08): ಹಾರಂಗಿ ಜಲಾಶಯದಲ್ಲಿ ಈ ಬಾರಿ ಕಳೆದ ಸಾಲಿಗಿಂತ 22 ಅಡಿಗಳಷ್ಟುನೀರು ಹೆಚ್ಚುವರಿ ಸಂಗ್ರಹ ಕಂಡುಬಂದಿದೆ. ಈ ಸಾಲಿನಲ್ಲಿ ಜಲಾಶಯದಲ್ಲಿ 3.54 ಟಿಎಂಸಿ ಪ್ರಮಾಣದ ನೀರು ಸಂಗ್ರಹವಿದ್ದು, ಕಳೆದ ವರ್ಷ ಕೇವಲ 1.9 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹವಿತ್ತು.
ಜಲಾಶಯಕ್ಕೆ ಪ್ರಸಕ್ತ 45 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ. ಅದರಲ್ಲಿ ನದಿಗೆ 20 ಕ್ಯೂಸೆಕ್, ಕಾಲುವೆ ಮೂಲಕ 10 ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆವಿಭಾಗದ ಸಹಾಯಕ ಅಭಿಯಂತರ ನಾಗರಾಜ್ ಅವರು ತಿಳಿಸಿದ್ದಾರೆ.
ಸಿದ್ದು ಜಾರಿಗೆ ತಂದಿದ್ದ ‘ಶಾದಿ ಭಾಗ್ಯ’ ಸ್ಥಗಿತ!
ಈ ವರ್ಷ ಅಣೆಕಟ್ಟಿಗೆ ಒಟ್ಟು 3.67 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು, ನದಿಗೆ 13.82 ಟಿಎಂಸಿ ಹರಿಸಲಾಗಿದೆ. ಕಾಲುವೆ ಮೂಲಕ 15.86 ಟಿಎಂಸಿ ನೀರು ಹರಿದಿದೆ ಎಂದು ಮಾಹಿತಿ ನೀಡಿದ್ದಾರೆ.