ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್: ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್

By Suvarna News  |  First Published Jan 31, 2020, 3:46 PM IST

ವಕೀಲ ದೇವರಾಜ್ ಗೌಡ ಸಲ್ಲಿಸಿದ್ದ ಅರ್ಜಿ ವಜಾ|  ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್|ಪ್ರಜ್ವಲ್ ರೇವಣ್ಣ ಪರ ವಕೀಲ ಕೇಶವ ರೆಡ್ಡಿ ವಾದ ಮಂಡನೆ|


ಬೆಂಗಲೂರು[ಜ.31]: ವಕೀಲ ದೇವರಾಜ್ ಗೌಡ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅಬಾಧಿತವಾಗಿದೆ. 

ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧುವಾಗಿದೆ ಎಂದು ಕೋರಿದ್ದ ವಕೀಲ ದೇವರಾಜ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯಲ್ಲಿ ಹಲವು ಲೋಪದೋಷಗಳಿಗೆ ಎಂದು ಹೈಕೋರ್ಟ್ ತಿಲಿಸಿತ್ತು. ಆದರೆ ಈ ಲೋಪದೋಷಗಳನ್ನ ಕಾಲಮಿತಿಯಲ್ಲಿಆಕ್ಷೇಪಣೆ ಸರಿಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾ ತಕರಾರು ಅರ್ಜಿಯನ್ನ ನ್ಯಾ.ಜಾನ್ ಮೈಕೆಲ್ ಕುನ್ಹಾ ರವರ ಪೀಠ ಮಹತ್ವದ ಆದೇಶ ನೀಡಿದೆ. ಈ ಹಿಂದೆ ಎ ಮಂಜು ಅವರು ಸಲಸಿದ್ದ ಅರ್ಜಿಯನ್ನ ಕೂಡ ಹೈಕೋರ್ಟ್ ವಜಾಗೊಳಿಸಿತ್ತು. 

Tap to resize

Latest Videos

ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್

ಸಂಸದ ಪ್ರಜ್ವಲ್ ರೇವಣ್ಣ ಅವರ ಪರ ವಕೀಲ ಕೇಶವ ರೆಡ್ಡಿ ವಾದ ಮಂಡಿಸಿದ್ದರು.  ತಕರಾರು ಅರ್ಜಿ ಕ್ರಮಬದ್ದವಾಗಿಲ್ಲವೆಂದು ಕೇಶವ ರೆಡ್ಡಿ ವಾದ ಮಂಡಿಸಿದ್ದರು.

click me!