ಸದ್ಯ ಶರತ್ ಬಚ್ಚೇಗೌಡರ ಅಗತ್ಯವಿಲ್ಲ ಎಂದ್ರು ಈಶ್ವರಪ್ಪ

By Suvarna NewsFirst Published Dec 14, 2019, 12:20 PM IST
Highlights

ನಮ್ಮನ್ನು ನಂಬಿ ಬಂದವರಿಗೆ ನಾವು ನ್ಯಾಯ ಒದಗಿಸಬೇಕಿದೆ. ಅವರ ಋಣ ತೀರಿಸಬೇಕಿದೆ. ಇನ್ನು ಶರತ್ ಬೆಂಬಲ ನಮಗೆ ಸದ್ಯಕ್ಕೆ ಬೇಕಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ [ಡಿ.14]: ರಾಜ್ಯದಲ್ಲಿ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆಯುತ್ತಾ ಬಂದರೂ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿದಿಲ್ಲ. ಬಿಜೆಪಿಗೆ ಮೊದಲೇ ಸಂಪೂರ್ಣ ಬಹುಮತ ಬಂದಿದ್ದರೆ ಬಿಜೆಪಿಗೆ ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ರಾಜ್ಯದಲ್ಲಿ ಸದ್ಯ ಅರ್ಧದಷ್ಟು ಕ್ಯಾಬಿನೆಟ್ ಪೆಂಡಿಂಗ್ ಇದೆ. ಕ್ಯಾಬಿನೆಟ್ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಗ್ಗೆ ಹೈ ಕಮಾಂಡ್ ನಿರ್ಧರಿಸಲಿದೆ ಎಂದರು. 

ನಮ್ಮನ್ನು ನಂಬಿ ನಮ್ಮ 17 ಜನ ಬಂದಿದ್ದಾರೆ, ಅವರ ಋಣ ನಾವು ತೀರಿಸಬೇಕಿದೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕಿದೆ ಎಂದು ಈಶ್ವರಪ್ಪ ಹೇಳಿದರು. 

ಕಾಂಗ್ರೆಸಿಗೆ ಬೆಂಬಲ ಸುಳ್ಳು ಎಂದ ಶರತ್ : ಮುಂದಿನ ನಡೆ ಏನು?...

ಅಲ್ಲದೇ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ನಮ್ಮ ಪಕ್ಷದಲ್ಲಿ ಏಕತೆ ಇದ್ದಿದ್ದರಿಂದ ಎಲ್ಲಾ ನಾಯಕರು ಸಾಮೂಹಿಕವಾಗಿ ಪ್ರಚಾರ ನಡೆಸಿದ್ದರಿಂದ ಗೆಲುವು ಗಳಿಸಿದೆ. ಇನ್ನು ಮೂರುವರೆ ವರ್ಷಗಳ ಕಾಲ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರ್ತಾರೆ ಎಂದರು. 

ಇನ್ನು ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಪರಾಭವಗೊಳಿಸಿ ಗೆಲುವು ಸಾಧಿಸಿದ್ದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವಶ್ಯಕತೆ ನಮಗೆ ಈಗಿಲ್ಲ ಎಂದು ಈಶ್ವರಪ್ಪ ಹೇಳಿದರು. 

click me!