ಹಿಡಕಲ್ ಡ್ಯಾಂ ಭರ್ತಿ: ನೀರು ಬರಲಿದೆ ಪೂರ್ತಿ!

By Web DeskFirst Published Aug 8, 2018, 1:54 PM IST
Highlights

ಹಿಡಕಲ್ ಜಲಾಶಯ ಬಹುತೇಕ ಭರ್ತಿ! ಜಲಾಶಯದಿಂದ ನೀರು ಹೊರ ಬಿಡಲು ಸೂಚನೆ! ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ! ಮುಂಜಾಗ್ರತಾ ಕ್ರಮಕ್ಕೆ ನೀರಾವರಿ ಇಲಾಖೆ ಮುಂದು

ಬೆಳಗಾವಿ[ಆ.೮]: ಇಲ್ಲಿನ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಹೊರ ಬಿಡಲು ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಅವ್ಯಾಹತವಾಗಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಭರ್ತಿಯಾಗಿರುವ ಡ್ಯಾಮ್ ನಿಂದ ಇಂದು ಸಂಜೆ 4 ಗಂಟೆಗೆ ನೀರು ಹೊರಬಿಡಲು ಸೂಚನೆ ನೀಡಲಾಗಿದೆ.

ಜಲಾಶಯದ ಕ್ರಸ್ಟ್‌ ಗೇಟುಗಳ ಮೂಲಕ ಇಂದು ಸಂಜೆ 4 ಕ್ಕೆ ನೀರು ಹೊರ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳಿಂದ ಘಟಪ್ರಭಾ ನದಿ ಪಾತ್ರದ ಜನರಿಗೆ ಎಚ್ಚರವಹಿಸಲು ಸೂಚನೆ ನೀಡಲಾಗಿದೆ.

ಹಿಡಕಲ್ ಜಲಾಶಯದಿಂದ ಹೆಚ್ಚಿನ ನೀರು ಬಿಡಲಿರುವ ಹಿನ್ನೆಲೆ , ನದಿ ಪಾತ್ರದಲ್ಲಿ ವಾಸಿಸುವ ಜನರು ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ರವಾನಿಸಲಾಗಿದೆ. ಇನ್ನು ಹಿಡಕಲ್ ಡ್ಯಾಂನ ಗರಿಷ್ಠ ಪ್ರಮಾಣ : 2175 ಅಡಿ ಇದ್ದು, ಇಂದು 2174 ಅಡಿ ಗರಿಷ್ಠ ಮಟ್ಟ ತಲುಪಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಡ್ಯಾಂನಿಂದ ನೀರು ಓವರ ಪ್ಲೋ ಆಗಿ ಹೊರಗಡೆ ಚಿಮ್ಮುತ್ತಿದೆ.

click me!