* ಯುವಕನ ಸಾಹಸಕ್ಕೆ ಎಲ್ಲರ ಮೆಚ್ಚುಗೆ
* ಕರ್ತವ್ಯಪ್ರಜ್ಞೆ ಮೆರೆದ ಹೆಸ್ಕಾಂ ಸಿಬ್ಬಂದಿ ಮುಖೇಶ ಪಾಟೀಲ
* ಅಪಾಯವನ್ನೂ ಲೆಕ್ಕಿಸದೇ ಲೈನ್ ದುರಸ್ತಿ ಮಾಡಿದ ಮುಖೇಶ
ಹಾವೇರಿ(ಜು.25): ನಿರಂತರವಾಗಿ ಬಿದ್ದ ಮಳೆಯಿಂದ ಆಳೆತ್ತರಕ್ಕೆ ನಿಂತಿದ್ದ ನೀರಿನಲ್ಲಿ ಅಪಾಯ ಲೆಕ್ಕಿಸದೆ ಈಜಿ ಹೋಗಿ ವಿದ್ಯುತ್ ಪರಿವರ್ತಕವೇರಿ ಪವರ್‌ಮನ್ ಒಬ್ಬರು ಕರ್ತವ್ಯಪ್ರಜ್ಞೆ ಮೆರೆದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ನಡೆದಿದೆ.
ಪವರ್‌ಮನ್ ಮುಖೇಶ ಪಾಟೀಲ ಎಂಬುವರು ಮಾಡಿದ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
undefined
ಹಾವೇರಿ: ಎತ್ತುಗಳಂತೆ ಎಡೆಕುಂಟೆಗೆ ಹೆಗಲು ಕೊಟ್ಟ ಬಡ ರೈತ ದಂಪತಿ..!
ನಿರಂತರವಾಗಿ ಬೀಳುತ್ತಿದ್ದ ಯಿಂದ ಚಿಕ್ಕೋಣತಿ ಗ್ರಾಮದ ವಿದ್ಯುತ್ ಪರಿವರ್ತಕ ನೀರಿನಲ್ಲಿ ಅರ್ಧ ಮುಳುಗಿತ್ತು. ಅಲ್ಲಿಗೆ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಿದ್ದರು. ಆದರೆ, ಮುಖೇಶ ಪಾಟೀಲ ಈಜಿ ಹೋಗಿ ಪರಿವರ್ತಕ ಏರಿ ಲೈನ್ ಕಟ್ ಮಾಡಿ ಬೇರೆ ಮಾರ್ಗಕ್ಕೆ ಸಂಪರ್ಕ ನೀಡಿದ್ದಾರೆ. ಇಲ್ಲದಿದ್ದರೆ ಗ್ರಾಮದ ಜನತೆ ಮಳೆ ನೀರು ಕಡಿಮೆಯಾಗುವವರೆಗೂ ಕತ್ತಲೆಯಲ್ಲಿ ಕಾಲ ಕಳೆಯಬೇಕಿತ್ತು. ಅಲ್ಲದೇ ಮಳೆ ಬರುತ್ತಿದ್ದಾಗ ವಿದ್ಯುತ್ ಕಂಬವೇರಿ ಲೈನ್ ಸರಿಪಡಿಸುವ ಕಾರ್ಯ ಅಪಾಯದ್ದಾಗಿತ್ತು. ಆದರೂ ಇದನ್ನು ಲೆಕ್ಕಿಸದೇ ಈಜಿ ಹೋಗಿ ಲೈನ್ ದುರಸ್ತಿ ಮಾಡಿದ್ದಾರೆ.