ಕೊರೋನಾ ವೈರಸ್: ಹಾಸನ ಜಿಲ್ಲೆಯ ಸ್ಥಿತಿಗತಿ

By Suvarna NewsFirst Published Apr 20, 2020, 6:54 PM IST
Highlights

ಕೊರೋನಾ ವೈರಸ್ ಸ್ಥಿತಿಗತಿ ಕುರಿತು ಹಾಸನ ಜಿಲ್ಲಾಧಿಕಾರಿಗಳು ಏ.20 ರ ಅಂಕಿ ಆಂಶ ಬಿಡುಗಡೆ ಮಾಡಿದ್ದಾರೆ.

ಹಾಸನ, (ಏ.20)  ಇದುವರೆಗೆ ಹಾಸನದಲ್ಲಿ ಒಂದೂ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೊರೋನಾ ವೈರಸ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಏ.20 ರ ಅಂಕಿ ಆಂಶ ಬಿಡುಗಡೆ ಮಾಡಿದ್ದು, ಇದುವರೆಗೆ ಕೊರೋನಾ ಶಂಕಿತರೆಂದು 617 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 508 ಜನ ಭಾರತೀಯರು ಹಾಗೂ 109 ಜನ ವಿದೇಶಿಯರಾಗಿರುತ್ತಾರೆ. 578 ಜನರ ಗಂಟಲ ಶ್ರಾವವನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರ ವರದಿ ನೆಗೆಟೀವ್ ಬಂದಿರುತ್ತದೆ ಎಂದು ಮಾಹಿತಿ ನೀಡಿದರು.

ಪಾದರಾಯನಪುರ ಪುಂಡರಿಗೆ ತಕ್ಕ ಶಾಸ್ತಿ, ಮಂದಿರಾ ಜೊತೆ ಕೆಜಿಎಫ್ ಬೆಡಗಿ ದೋಸ್ತಿ; ಏ.20ರ ಟಾಪ್ 10 ಸುದ್ದಿ!

ಒಟ್ಟು ಹಾಲಿ 14 ದಿನಗಳ ವರೆಗಿರುವ 10 ಜನರನ್ನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಇದಲ್ಲದೇ 14 ದಿನದಿಂದ 28 ದಿನಗಳ ವರೆಗಿರುವ 82 ಮಂದಿಯ ದೈನಂದಿನ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.        

400 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 27 ಜನ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ಇದ್ದಾರೆ, 273 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!