ಹೀರಾ ಗ್ರೂಪ್ ವಂಚನೆ: ಶಿವಮೊಗ್ಗ ಜೈಲಿಗೆ ನೌಹೆರಾ ಶೇಖ್

Published : Jul 28, 2019, 09:12 PM IST
ಹೀರಾ ಗ್ರೂಪ್ ವಂಚನೆ: ಶಿವಮೊಗ್ಗ ಜೈಲಿಗೆ ನೌಹೆರಾ ಶೇಖ್

ಸಾರಾಂಶ

ಐಎಂಎ ರೀತಿಯದ್ದೇ ಮತ್ತೊಂದು ವಂಚನೆ ಪ್ರಕರಣದ ಹೆಸರು  ಬಹುದಿನಗಳಿಂದ ಕೇಳಿಬಂದಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೆರಾ ಶೇಖ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು.

ಶಿವಮೊಗ್ಗ[ಜು.28]  ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೆರಾ ಶೇಖ್ ಅವರನ್ನು ಶಿವಮೊಗ್ಗ ಸಿಇಎನ್ ಪೊಲೀಸರು ವಶಪಡಿಸಿಕೊಂಡು ಶಿವಮೊಗ್ಗಕ್ಕೆ ಕರೆತಂದಿದ್ದಾರೆ.

ಹೈದರಾಬಾದ್ ಜೈಲಿನಿಂದ ಶಿವಮೊಗ್ಗಕ್ಕೆ ನೌಹೆರಾ ಶೇಖ್ಳನ್ನು ಕರೆತರಲಾಗಿದ್ದು, ಆನ್ ಲೈನ್ ನಲ್ಲಿ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನ ಬಂಧಿಸಲಾಗಿದೆ.ಶಿವಮೊಗ್ಗದ ಮಂಜುನಾಥ ಬಡಾವಣೆಯ ಮಹಮ್ಮದ್ ಅತೀಕ್ ಎಂಬುವವರು ತಲಾ 5 ಲಕ್ಷ ರೂಪಾಯಿ ಮೌಲ್ಯದ 5 ಬಾಂಡ್ ಗಳನ್ನು ಹೀರಾ ಗ್ರೂಪ್ ನಲ್ಲಿ ಇಟ್ಟಿದ್ದರು. ಶೇ 3 ರ ಬಡ್ಡಿಯಂತೆ ಪ್ರತಿ ತಿಂಗಳು ನೀಡಲಾಗುತ್ತಿತ್ತು.

ಆದರೆ ಕಳೆದ ಮೇ ತಿಂಗಳಿನಿಂದ ಬಡ್ಡಿ ಬರುವುದು ನಿಂತ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೈಬರ್ ಕ್ರೈಮ್ ಪೋಲಿಸ್ ಠಾಣೆಯಲ್ಲಿ ಅತೀಕ್ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಹೈದರಾಬಾದ್ ಜೈಲಿನಿಂದ ಕರೆತಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!