ಮೈಸೂರು ಜಿಲ್ಲೆಯಾದ್ಯಂತ ವಿಪರೀತ ಮಳೆ ಹಿನ್ನೆಲೆ ಜಿಲ್ಲೆಯ ಹೆಚ್‌ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿಯಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
ನಂಜನಗೂಡು (ಜು.19): ಮೈಸೂರು ಜಿಲ್ಲೆಯಾದ್ಯಂತ ವಿಪರೀತ ಮಳೆ ಹಿನ್ನೆಲೆ ಜಿಲ್ಲೆಯ ಹೆಚ್‌ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿಯಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಇದರ ಜೊತೆಗೆ ನುಗು ಡ್ಯಾಮ್ ನಿಂದಲೂ ನೀರನ್ನು ಹೊರ ಬಿಡಲಾಗುತ್ತಿದ್ದು, ಪ್ರವಾಹ ಉಂಟಾಗಿದೆ. ತಮಿಳುನಾಡು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ನಂಜನಗೂಡು ರಾಷ್ಟ್ರೀಯ ಹೆದ್ದಾರಿ 766 ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆದ ಕಾರಣ ವಾಹನ ಸವಾರರು ಪರದಾಡಿದ್ದಾರೆ. ಕಡಕೋಳ ಕೈಗಾರಿಕಾ ಪ್ರದೇಶದ ಮಾರ್ಗವಾಗಿ ನಂಜನಗೂಡು ತಲುಪಿ ಮುಂದುವರಿಯಲು ವ್ಯವಸ್ಥೆ ಮಾಡಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದ ಸಮೀಪದ ಸ್ನಾನಘಟ್ಟ, 16 ಕಾಲು ಮಂಟಪ ಮತ್ತು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಪಟ್ಟಣದ ಹಳ್ಳದಕೇರಿ ಬಡಾವಣೆಯಲ್ಲಿ ನಾಲ್ಕು ಮನೆಗಳು ಜಲಾವೃತಗೊಂಡಿವೆ. ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇನ್ನು ಪ್ರವಾಹದಲ್ಲಿ ಹಸುವಿನ ಮೃತದೇಹ ತೇಲಿಬಂದ ಘಟನೆ ನಡೆದಿದೆ.
undefined
ಅತಿಯಾದ ಮಳೆಯಿಂದ ಹಾನಿ ಉಂಟಾಗಿ ಯಾವುದೇ ಅಚಾತುರ್ಯ ಹಾಗೂ ಪ್ರಾಣ ಹಾನಿಗಳು ಸಂಭವಿಸದಂತೆ ಕಾಳಜಿ ಕೇಂದ್ರ ತೆರೆದು ಉತ್ತಮ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕುಡಿಯುವ ನೀರನ್ನು ಸರಬರಾಜು ಮಾಡುವ ಮೊದಲು ಅದರ ಗುಣಮಟ್ಟವನ್ನು ಪ್ರತಿದಿನವೂ ಪರೀಕ್ಷಿಸಬೇಕು. ಈ ವಿಷಯವಾಗಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೆ, ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ತಡೆಯಲು ಶಿಥಿಲಗೊಂಡ ಶಾಲೆ ಹಾಗೂ ಅಂಗನವಾಡಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸಭೆ ನಡೆಸಿ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!
ಇನ್ನು ಕೇರಳದಲ್ಲಿ ಮಳೆ ತಗ್ಗಿದ ಹಿನ್ನೆಲೆ, ಕಪಿಲಾ ನದಿ ಪ್ರವಾಹದಲ್ಲಿ ಇಳಿಕೆ ಕಂಡಿದೆ. ಕಬಿನಿ ಜಲಾಶಯದ ಒಳ ಹರಿವು ಸದ್ಯ 49,334 ಕ್ಯೂಸೆಕ್ ಇದ್ದು, ಜಲಾಶಯದದಿಂದ ಕಪಲಾ ನದಿಗೆ ಬಿಡುವ ನೀರನ್ನು 70 ಸಾವಿರದಿಂದ 61 ಸಾವಿರ ಕ್ಯೂಸೆಕ್ ಗೆ ಅಧಿಕಾರಿಗಳು ಇಳಿಸಿದ್ದಾರೆ.
ಜಲಾಶಯದ ಗರಿಷ್ಠ ಮಟ್ಟ 2284 ಅಡಿ.
ಇಂದಿನ ನೀರಿನ ಮಟ್ಟ 2280.01 ಅಡಿ.