ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಬೆಳಗಾವಿ ಟಿಳಕವಾಡಿಯಲ್ಲಿರುವ ಡಿಮಾರ್ಟ್ ಮಳಿಗೆ, ಪೋರ್ಟ್ ರಸ್ತೆ, ಖಾನಾಪುರ ರಸ್ತೆಗಳು ಜಾಲವೃತವಾಗಿವೆ. ವಿಜಯಪುರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜುಮನಾಳ, ಕೊಂಡಗೂಳಿ, ಸಿಂದಗಿ, ಬಸವನಬಾಗೆವಾಡಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.
ಬೆಳಗಾವಿ/ವಿಜಯಪುರ(ಜೂ.08): ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಇಂದು(ಶನಿವಾರ) ಭಾರೀ ಮಳೆಯಾಗಿದೆ. ವರುಣನ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಬೆಳಗಾವಿ ಟಿಳಕವಾಡಿಯಲ್ಲಿರುವ ಡಿಮಾರ್ಟ್ ಮಳಿಗೆ, ಪೋರ್ಟ್ ರಸ್ತೆ, ಖಾನಾಪುರ ರಸ್ತೆಗಳು ಜಾಲವೃತವಾಗಿವೆ. ರಸ್ತೆಗಳು ಜಲಾವೃತ ಹಿನ್ನೆಲೆ ವಾಹನ ಸವಾರರ ಪರದಾಟ ನಡೆಸಿದ್ದಾರೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ.
undefined
ಕಲಬುರಗಿ: ಸೇಡಂನಲ್ಲಿ ಭಾರೀ ಮಳೆ, ಪೊಲೀಸ್ ಠಾಣೆಗೆ ಮಳೆ ನೀರು ದಿಗ್ಬಂಧನ..!
ವಿಜಯಪುರ ಜಿಲ್ಲೆಯ ಹಲವೆಡೆ ವರುಣನ ಆರ್ಭಟ
ಇನ್ನು ವಿಜಯಪುರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜುಮನಾಳ, ಕೊಂಡಗೂಳಿ, ಸಿಂದಗಿ, ಬಸವನಬಾಗೆವಾಡಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ನದಿಯಂತಾಗಿವೆ. ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಮಳೆಯಿಂದಾಗಿ ವಾಹನ ಸವಾರರ ಪರದಾಡಿದ್ದಾರೆ