ಮೊಮ್ಮಗಳ ಬೆತ್ತಲೆ ವಿಡಿಯೋ ತೋರಿಸಿ ಬೆದರಿಕೆ; ಮರ್ಯಾದೆಗೆ ಹೆದರಿ ವಿಷ ಸೇವಿಸಿದ ಕುಟುಂಬ

By Sathish Kumar KH  |  First Published Jun 8, 2024, 2:55 PM IST

ಮೊಮ್ಮಗಳನ್ನು ಪ್ರೀತಿ ಮಾಡುತ್ತಿದ್ದ ಯುವಕ ಆಕೆಯ ಬೆತ್ತಲೆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರಿಂದ ಇಡೀ ಕುಟುಂಬದ 4 ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.


ಚಾಮರಾಜನಗರ (ಜೂ.08): ಮೊಮ್ಮಗಳನ್ನು ಪ್ರೀತಿ ಮಾಡುತ್ತಿದ್ದ ಯುವಕ ಆಕೆಯ ಬೆತ್ತಲೆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರಿಂದ ಇಡೀ ಕುಟುಂಬದ 4 ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಮನೆಯಲ್ಲಿ ವಯಸ್ಸಿಗೆ ಬಂದಿದ್ದ ಮೊಮ್ಮಗಳ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದ ಯುವಕನೊಬ್ಬ, ಹರೆಯದ ಯುವತಿಯ ನಗ್ನ ವಿಡಿಯೋವನ್ನು ಮನೆಯವರ ಮೊಬೈಲ್‌ಗೆ ಹರಿಬಿಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ತಮ್ಮ ಕುಟುಂಬದ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಇಡೀ ಕುಟುಂಬದ ನಾಲ್ಕು ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ಮಹದೇಶ್ವರ ಬೆಟ್ಟ ಬಳಿಯ ತಾಳಬೆಟ್ಟದಲ್ಲಿ ನಡೆದಿದೆ. ಈ ಪೈಕಿ ಒಬ್ಬರು ಸಾವನ್ನಪ್ಪಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ.

Tap to resize

Latest Videos

undefined

ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ದೇವಾಲಯದಲ್ಲಿ ದರ್ಶನ ಪಡೆದು ನಂತರ ತಾಳಬೆಟ್ಟಕ್ಕೆ ಹೋದ ಒಂದೇ ಕುಟುಂಬದ ನಾಲ್ವರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ದೇವರ ಸನ್ನಿಧಿಯಲ್ಲಿ ನಡೆದಿದೆ. ವಿಷ ಸೇವನೆ ಮಾಡಿದವರನ್ನು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಚಂದಗಾಲು ಗ್ರಾಮದ ಕುಟುಂಬದ ಸದಸ್ಯರು ಎಂದು ಗುರುತಿಸಲಾಗಿದೆ. ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತ ವ್ಯಕ್ತಿಯಾಗಿದ್ದಾನೆ. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ((60), ಕುಟುಂಬ ಸದಸ್ಯರಾದ ಲೀಲಾವತಿ(45) ಹಾಗೂ ರಿಷಿತಾ (21) ಸ್ಥಿತಿ ಗಂಭೀರವಾಗಿದ್ದು, ಹತ್ತಿರದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಕುರಿತಂತೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಚಂದನ್‌ಶೆಟ್ಟಿಗೆ ಪ್ರಥಮ್ ಪ್ರೇಮಪಾಠ; ಲವ್ ಮ್ಯಾರೇಜ್ ಆದ್ರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರಣವನ್ನು ಕೇಳಿದಾಗ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ದುಷ್ಕರ್ಮಿ ಯುವಕನೊಬ್ಬ ಈ ಕುಟುಂಬದ ಯುವತಿ ರಿಷಿತಾಳ ಖಾಸಗಿ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ನಂತರ, ಅದನ್ನು ಎಡಿಟ್ ಮಾಡಿ ಫೋಟೋ ಮತ್ತು ವಿಡಿಯೋಗಳನ್ನು ಮನೆಯವರ ಮೊಬೈಲ್‌ಗೆ ಕಳಿಸಿ ಬೆದರಿಕೆ ಹಾಕಿದ್ದಾನೆ. ಯುವತಿಯ ನಗ್ನ ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಯುವಕ ಮೈಸೂರು ಜಿಲ್ಲೆ ಕೆ.ಆರ್ ‌ನಗರ ತಾಲೂಕು  ಚೀರನಹಳ್ಳಿಯವನು ಎಂದು ತಿಳಿದುಬಂದಿದೆ. 

ಮೈಸೂರು ಜಿಲ್ಲೆ ಕೆ.ಆರ್ ‌ನಗರ ತಾಲೂಕು  ಚೀರನಹಳ್ಳಿಯ ಯುವಕ, ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಇಬ್ಬರೂ ಸಲುಗೆಯಿಂದ ಇದ್ದಾಗ ಯುವತಿ ಖಾಸಗಿ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡಿದ್ದಾನೆ. ನಂತರ, ಯುವತಿಗೆ ವಿಡಿಯೋ ತೋರಿಸಿ ಆಗಿಂದಾಗ್ಗೆ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಹಣವನ್ನೂ ಕಿತ್ತುಕೊಂಡಿದ್ದಾನೆ. ನಂತರ ಯುವತಿ ತನ್ನ ಮಾತನ್ನು ಕೇಳದಿದ್ದಾಗ ಆಕೆಯ ಕುಟುಂಬ ಸದಸ್ಯರಿಗೆ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಬಗ್ಗೆ ಬೇಸತ್ತ ಕುಟುಂಬ ಸದಸ್ಯರು ಸ್ಥಳೀಯ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆದರೂ, ಪೊಲೀಸರಿಂದ ಯಾವುದೇ ನ್ಯಾಯ ಕೂಡ ಸಿಕ್ಕಿಲ್ಲ.

ಮುಂದುವರಿದ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಅಪಘಾತ; ಸಿನಿಮಾ ಸ್ಟೈಲ್‌ನಲ್ಲಿ ಕೆರೆಗೆ ಹಾರಿದ ಕಾರು!

ತಮ್ಮ ಮೊಮ್ಮಗಳ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಯುವಕನಿಂದ ಬೇಸತ್ತ ಕುಟುಂಬ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದಲೇ ಬದುಕುತ್ತಿತ್ತು. ಆದರೆ, ಇಡೀ ಕುಟುಂಬದ ಸದಸ್ಯರು ಜರ್ಝರಿತವಾಗಿದ್ದರೂ, ಯುವಕನ ಬೆದರಿಕೆಯ ಅಟ್ಟಹಾಸ ಮಾತ್ರ ನಿಂತಿರಲಿಲ್ಲ. ಇದರಿಂದ ತೀವ್ರ ಬೇಸತ್ತ ಇಡೀ ಕುಟುಂಬ ಸದಸ್ಯರು ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರ ದೇವರ ದರ್ಶನ ಮಾಡಿದ್ದಾರೆ. ನಂತರ ತಾಳ ಬೆಟ್ಟಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಪಡೆದು ನಂತರ ಕುಟುಂಬದ 4 ಜನರು ವಿಷ ಸೇವನೆ ಮಾಡಿದ್ದಾರೆ. ಮಹದೇವನಾಯಕ ಸಾವನ್ನಪ್ಪಿದ್ದು, ಉಳಿದ ಮೂವರು ವಿಷ ಸೇವಿಸಿ ಒದ್ದಾಡುತ್ತಿದ್ದುದನ್ನು ನೋಡಿದ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಮಾಡಿ, ಪೊಲೀಸರ ಸಹಾಯದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

click me!