ವಿಜಯಪುರ ಜಿಲ್ಲೆಯಲ್ಲಿ ವರುಣನ ಆರ್ಭಟ: ಬೈಕ್ ಹೊತ್ತು ಹಳ್ಳ ದಾಟಿದ ಗ್ರಾಮಸ್ಥರು..!

By Girish Goudar  |  First Published Jun 7, 2024, 10:28 PM IST

ವಿಜಯಪುರ ಜಿಲ್ಲೆಯ ತೊನಶ್ಯಾಳ ಗ್ರಾಮದ ಹಳ್ಳ ಉಕ್ಕಿ ಹರಿದಿದ್ದು ಜನರು ರಸ್ತೆ ದಾಟಲು ಪರದಾಡಿದ್ದಾರೆ. ಇನ್ನು ಬೈಕ್ ಸವಾರರು ಹಳ್ಳ ದಾಟಲು ಬೈಕ್‌ಗಳನ್ನೇ ಹೊತ್ತು ಹಳ್ಳ ದಾಟಿದ್ದಾರೆ. ಬೈಕ್ ಮೇಲೆ ಹಳ್ಳ ದಾಟಲು ಹೋದ ಯುವಕನೊಬ್ಬ ಮುಗ್ಗರಿಸಿ ಹಳ್ಳದಲ್ಲಿ ಬಿದ್ದ ಘಟನೆಯೂ ನಡೆದಿದೆ. 


ವಿಜಯಪುರ(ಜೂ.07): ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ಇಂದು(ಶುಕ್ರವಾರ) ಏಕಾಏಕಿ ಸುರಿದ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳು ಉಕ್ಕಿ ಹರಿದಿವೆ. 

ಜಿಲ್ಲೆಯ ತೊನಶ್ಯಾಳ ಗ್ರಾಮದ ಹಳ್ಳ ಉಕ್ಕಿ ಹರಿದಿದ್ದು ಜನರು ರಸ್ತೆ ದಾಟಲು ಪರದಾಡಿದ್ದಾರೆ. ಇನ್ನು ಬೈಕ್ ಸವಾರರು ಹಳ್ಳ ದಾಟಲು ಬೈಕ್‌ಗಳನ್ನೇ ಹೊತ್ತು ಹಳ್ಳ ದಾಟಿದ್ದಾರೆ. ಬೈಕ್ ಮೇಲೆ ಹಳ್ಳ ದಾಟಲು ಹೋದ ಯುವಕನೊಬ್ಬ ಮುಗ್ಗರಿಸಿ ಹಳ್ಳದಲ್ಲಿ ಬಿದ್ದ ಘಟನೆಯೂ ನಡೆದಿದೆ. 

Tap to resize

Latest Videos

undefined

ಕಲಬುರಗಿ: ಸೇಡಂನಲ್ಲಿ ಭಾರೀ ಮಳೆ, ಪೊಲೀಸ್‌ ಠಾಣೆಗೆ ಮಳೆ ನೀರು ದಿಗ್ಬಂಧನ..!

ಇನ್ನು ಕೆಲಸಕ್ಕೆ ಹೋಗುವವರು ಸಾಮಾನುಗಳನ್ನ ಹೊತ್ತುಕೊಂಡು ಹಳ್ಳ ದಾಟಿದ್ದಾರೆ. ಕೂಡಗಿ ಗ್ರಾಮದಲ್ಲೂ ಕೂಡ ಹಳ್ಳ ಉಕ್ಕಿ ಹರಿದಿದ್ದು, ಜನರು ಹಳ್ಳ ದಾಟಲು ಪರದಾಡಿದ್ದಾರೆ. ತಿಕೋಟ ಭಾಗದಲ್ಲಿ ಭಾರೀ ಮಳೆಯಾಗಿದ್ದು ಸೇತುವೆ ಕೊಚ್ಚಿ ಹೋದ ಘಟನೆ ನಡೆದಿದೆ.

ಮನೆಗಳಿಗೆ ನುಗ್ಗಿದ ನೀರು

ಸತತವಾಗಿ 1 ಗಂಟೆ ಕಾಲ ಸುರಿದ ಮಳೆಯಿಂದ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. 15ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಮನೆಯಿಂದ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. 

click me!