* ತಡರಾತ್ರಿ ಸುರಿದ ಮಳೆ
* ಮಲೆನಾಡಿನಲ್ಲಿ ಮಳೆಗಾಲದ ವಾತಾವರಣ ಸೃಷ್ಟಿ
* ಮಳೆ ರೈತಾಪಿ, ಕಾಫಿ ಬೆಳೆಗಾರರಲ್ಲಿ ಹರ್ಷ
ವರದಿ:ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಏ.03): ಕಾಫಿನಾಡು ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಸುರಿದ ವರ್ಷಧಾರೆ ಕೆಲವೊಂದು ಅನಾಹುತಗಳನ್ನೇ ಸೃಷ್ಟಿ ಮಾಡಿದ್ರೆ ರೈತಾಪಿ(Farmers) ವರ್ಗದಲ್ಲಿ ಸಂತಸ ಮೂಡಿಸಿದೆ. ಕಳೆದ ಹಲವು ದಿನಗಳಿಂದ ಸಂಜೆ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ಕಾಫಿ ಬೆಳೆಗಾರರು, ರೈತಾಪಿ ವರ್ಗಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ಆದ್ರೆ ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆ, ಗಾಳಿ ಮಲೆನಾಡಿನ ಕೆಲ ಭಾಗಗಳಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ.
ಭಾರೀ ಮಳೆ ಗಾಳಿಗೆ ಹಾರಿ ಹೋದ ಛಾವಣಿ
ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ವರ್ಷಧಾರೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ನಿನ್ನೆ ಸುರಿದ ಮಳೆ, ಗಾಳಿಗೆ ಹಲವು ಮನೆಗಳ ಛಾವಣಿ ಹಾರಿ ಹೋಗಿದೆ. ಗೋಣಿಬೀಡು ಗ್ರಾಮದ ಗಿರಿಜನ ಕಾಲೋನಿಯ ಹರೀಶ್ ಎಂಬುವರ ಮನೆಯ ಛಾವಣಿ ಹಾರಿ ಹೋಗಿದ್ದು ಲಕ್ಷಾಂತರ ಮೌಲ್ಯದ ಸಿಮೆಂಟ್ ಶೀಟ್, ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿದೆ. ಗಿರಿಜನ ಕಾಲೋನಿಯ ಹರೀಶ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಝಟ್ಕಾ ವರ್ಸಸ್ ಹಲಾಲ್, ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಖರೀದಿಗೆ ಕ್ಯೂ!
ಸಾಲಸೋಲ ಮಾಡಿ ಪುಟ್ಟದೊಂದು ಮನೆಯನ್ನು ಕೂಡ ಕಟ್ಟಿಕೊಂಡಿದ್ದರು. ಮನೆಯ ಮೇಲ್ಬಾಗದಲ್ಲಿ ಸಿಮೆಂಟ್ ಶೀಟ್ ಗಳನ್ನು ಹಾಕಿದ್ದರು. ನಿನ್ನೆ ಸುರಿದ ಮಳೆ, ಗಾಳಿಯಿಂದ ಸಿಮೆಂಟ್ ನ ಸೀಟುಗಳು ಹಾರಿ ಹೋಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ಕೂಡ ಮಳೆಗೆ ಆಹುತಿಯಾಗಿವೆ ಮೊದಲೇ ಸಾಲಸೋಲ ಮಾಡಿ ಮನೆಕಟ್ಟಿದ ಹರೀಶ್ ಗೆ ಮಳೆ ಆಘಾತವನ್ನೇ ನೀಡಿ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.ನಿನ್ನೆ ಸುರಿದ ಭಾರೀ ಮಳೆಯಿಂದ ಜಿಲ್ಲಾದ್ಯಂತ ಅಲ್ಲಲ್ಲೆ ಸಣ್ಣ-ಪುಟ್ಟ ಅವಾಂತರ ಸೃಷ್ಠಿ ಯಾಗಿದೆ. ಶೃಂಗೇರಿ, ಕೊಪ್ಪ, ಎನ್ ಆರ್ ಪುರ ತಾಲ್ಲೂಕಿನಲ್ಲೂ ಮಳೆಯಾಗಿದೆ. ಬಾಳೆಹೊನ್ನೂರಿನ ಬಸ್ರಿಕಟ್ಟೆಯ ಬಳಿ ಮನೆಗಳ ಮೇಲೆ ಮರಬಿದ್ದು ಮನೆ ಜಖಂಯಾಗಿದೆ. ಇನ್ನು ಆಲ್ದೂರು, ಚಿಕ್ಕಮಗಳೂರು ನಗರದಲ್ಲೂ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಚರಂಡಿಯ ನೀರು ನುಗ್ಗಿದೆ. ನಗರದ ಶಂಕರಪುರ, ಬೈಪಾಸ್ ರಸ್ತೆಯಲ್ಲಿಚರಂಡಿ ನೀರು ಕೆಲ ಮನೆಗಳಿಗೆ ನುಗ್ಗಿದ ಪರಿಣಾಮ ನಗರಸಭೆಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ಮಳೆ ರೈತಾಪಿ, ಕಾಫಿ ಬೆಳೆಗಾರರಲ್ಲಿ ಹರ್ಷ
ನೂತನ ವರ್ಷದಾರೆ ಕೆಲವೊಂದು ಅನಾಹುತವನ್ನು ಸೃಷ್ಟಿ ಮಾಡಿದ್ರೆ ರೈತಾಪಿ ವರ್ಗ, ಕಾಫಿ ಬೆಳಗಾರಲ್ಲಿ ಮಳೆ(Rain) ಹರ್ಷಮೂಡಿಸಿದೆ. ಏಪ್ರಿಲ್ ತಿಂಗಳಿನಲ್ಲಿ ಅಧಿಕ ಬಿಸಿಲಿನಿಂದ ಕಾಫಿ ತೋಟಗಳು ಒಣಗುವ ಸ್ಥಿತಿಗೆ ಹೋಗುತ್ತೆ ಆದರೆ ಮಾರ್ಚ್ ಕೊನೆಯ ಭಾಗ, ಹಾಗೇನೆ ಏಪ್ರಿಲ್‌ನ ಆರಂಭದಲ್ಲಿ ಬಿದ್ದ ಮಳೆ ಕಾಫಿ ಬೆಳೆಗಾರರಿಗೆ ವರದಾನವಾಗಿ ಪರಿಣಾಮಿಸಿದೆ. ಮುಂದಿನ ವರ್ಷದ ಬೆಳೆಯ ಲೆಕ್ಕಾಚಾರವನ್ನು ಬೆಳಗಾರರು ಹಾಕುವಂತೆ ಮಾಡಿದೆ. ಉತ್ತನ ಫಸಲಿನ ನಿರೀಕ್ಷೆಯಲ್ಲಿ ಬೆಳಗಾರ ಇರುವಂತೆ ಈ ಮಳೆಮಾಡಿದೆ.ಇನ್ನು ಬಯಲು ಸೀಮೆ ಭಾಗದಲ್ಲೂಮಳೆ ಆಗಿರುವ ಪರಿಣಾಮ ತರಿಕಾರಿ ಬೆಳೆಗಗಳಿಗೆ ಮಳೆಯಿಂದ ಪ್ರಯೋಜನವಾಗಲಿದೆ. ಒಟ್ಟಾರೆ ಕಳೆದ ನಾಲ್ಕೈದು ದಿನದಿಂದ ಸಂಜೆ ವೇಳೆ ಸುರಿಯುತ್ತಿರೋ ಮಳೆಯಿಂದ ಮಲೆನಾಡಿನಲ್ಲಿ ಮಳೆಗಾಲದ ವಾತಾವರಣ ಸೃಷ್ಟಿ ಮಾಡಿದೆ.