ರಾಜ್ಯದಲ್ಲಿ ಭಾರೀ ಮಳೆ : ಉಕ್ಕೇರುತ್ತಿದ್ದಾಳೆ ಕಾವೇರಿ

By Kannadaprabha News  |  First Published Sep 21, 2020, 1:02 PM IST

ರಾಜ್ಯದಲ್ಲಿ ಕುಂಭದ್ರೋಣ ಮಳೆ ಅಬ್ಬರಿಸುತ್ತಿದೆ. ಭಾರೀ ಮಳೆ ಅಬ್ಬರಕ್ಕೆ ಜನಜೀವನ ತತ್ತರಿಸುತ್ತಿದೆ. ಕೆಆರ್‌ಎಸ್‌ನಲ್ಲಿ ಒಳಹರಿವು ಹೆಚ್ಚಾಗಿದೆ. 


ಶ್ರೀರಂಗಪಟ್ಟಣ (ಸೆ.21) : ಕೊಡಗು ಸೇರಿದಂತೆ ಕಾವೇರಿ ಕಣಿವೆಯ ಮೇಲ್ಭಾಗದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಆರ್‌ ಎಸ್‌ ಅಣೆಕಟ್ಟೆಗೆ 17 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 

ಈಗಾಗಲೇ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿವುರುದರಿಂದ ಮುಂಜಾಗೃತ ಕ್ರಮವಾಗಿ 30 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಕಾವೇರಿ ನದಿ ಮೂಲಕ ಹರಿಯಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 124.69 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ 17,085 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಣೆಕಟ್ಟೆಗೆ ಮತ್ತಷ್ಟುಹೆಚ್ಚಿನ ನೀರು ಬರುವ ಸಾಧ್ಯತೆ ಇದೆ. ಅಣೆಕಟ್ಟೆಯ ಭದ್ರತಾ ದೃಷ್ಠಿಯಿಂದ ಸುಮಾರು 30,337 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

Tap to resize

Latest Videos

38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ!

ಕಳೆದ 15 ದಿನಗಳ ಹಿಂದೆ ಅಣೆಕಟ್ಟೆಯಲ್ಲಿ 123.74 ಅಡಿ ಸಂಗ್ರಹವಿತ್ತು. 9682 ಕ್ಯುಸೆಕ್‌ ಒಳ ಹಾಗೂ 4114 ಕ್ಯೂಸೆಕ್‌ ಹೊರ ಹರಿವಿನ ಪ್ರಮಾಣ

ದಾಖಲಾಗಿತ್ತು. ಆದರೆ ಪ್ರಸ್ತುತ ಕೊಡಗಿನ ಭಾಗಮಂಡಲ, ಮಡಿಕೇರಿ ಸೇರಿದಂತೆ ಕಾವೇರಿ ತೀರ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಅಣೆಕಟ್ಟೆಗರಿಷ್ಠ ಪ್ರಮಾಣ ತಲುಪಿದೆ.

ದೋಣಿ ವಿಹಾರ ಸ್ಥಗಿತ: ಕಾವೇರಿ ನದಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಟ್ಟಹಿನ್ನಲೆಯಲ್ಲಿ ರಂಗನತಿಟ್ಟು ಪಕ್ಷಿದಾಮದಲ್ಲಿ ಬೋಟಿಂಗ್‌ ಸ್ಥಗಿತಗೊಳಿಸಲಾಗಿದೆ. ಕಳೆದ

ಒಂದು ವಾರದಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಠಿಯಿಂದ ಬೊಟಿಂಗ್ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

click me!