ತಾಲೂಕಿನ ಹೊಸಪಟ್ಟಣ ನಡುಗೆಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿ ಹೇಮಾವತಿ ನದಿ ಪ್ರವಾಹಕ್ಕೆ ಸಿಲುಕಿ ನಡುಗೆಡ್ಡೆಯಿಂದ ಹೊರಬರಲು ಸಾಧ್ಯವಾಗದೇ ಕಳೆದ ಎರಡು ದಿನಗಳಿಂದ ಆಹಾರವಿಲ್ಲದೆ ಪರದಾಟ ನಡೆಸುತ್ತಿದ್ದ 10 ಕುರಿಗಾಹಿಗಳಿಗೆ ತಾಲೂಕು ಆಡಳಿತ ಆಹಾರ ಪದಾರ್ಥಗಳನ್ನು ವಿತರಿಸಿದ ಘಟನೆ ನಡೆದಿದೆ.
ಕೆ.ಆರ್.ಪೇಟೆ (ಅ.21): ತಾಲೂಕಿನ ಹೊಸಪಟ್ಟಣ ನಡುಗೆಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿ ಹೇಮಾವತಿ ನದಿ ಪ್ರವಾಹಕ್ಕೆ ಸಿಲುಕಿ ನಡುಗೆಡ್ಡೆಯಿಂದ ಹೊರಬರಲು ಸಾಧ್ಯವಾಗದೇ ಕಳೆದ ಎರಡು ದಿನಗಳಿಂದ ಆಹಾರವಿಲ್ಲದೆ ಪರದಾಟ ನಡೆಸುತ್ತಿದ್ದ 10 ಕುರಿಗಾಹಿಗಳಿಗೆ ತಾಲೂಕು ಆಡಳಿತ ಆಹಾರ ಪದಾರ್ಥಗಳನ್ನು ವಿತರಿಸಿದ ಘಟನೆ ನಡೆದಿದೆ.
(Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆರೆಬಲಯ್ಯನಹಟ್ಟಿಗ್ರಾಮದ ನಿವಾಸಿಗಳಾದ ತಿಮ್ಮಯ್ಯ ಮತ್ತು ಚಿತ್ರದೇವರಹಟ್ಟಿಗ್ರಾಮದ ಗಂಗಣ್ಣ ಕುರಿಗಾಹಿಗಳ ಎರಡು (Family) ಪ್ರತಿ ವರ್ಷ ತಮ್ಮ ಕುರಿಗಳೊಡನೆ ತಿಂಗಳಾನುಗಟ್ಟಲೆ ಇಲ್ಲಿಗೆ ಬಂದು ಕುರಿಗಳನ್ನು ಮೇಯಿಸಿಕೊಂಡು ಬರುತ್ತಿದ್ದರು.
ಈ ವರ್ಷವೂ ಅದೇ ರೀತಿ ನಡುಗೆಡ್ಡೆಯಲ್ಲಿ ತಮ್ಮ 800 ಕುರಿಗಳೊಡನೆ ಕಳೆದ 8-10 ದಿನಗಳ ಹಿಂದೆ ದ್ವೀಪದಲ್ಲಿ ವಾಸವಿದ್ದರು. ಕಳೆದ ಕೆಲವು ದಿನಗಳಿಂದ ಹೇಮಾವತಿ ನದಿಪಾತ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೊಸಪಟ್ಟಣದ ದ್ವೀಪದ ಸುತ್ತಲೂ ನೀರಿನ ಪ್ರವಾಹ ಹೆಚ್ಚಾದ ಕಾರಣ ಕುರಿಗಾಹಿಗಳು ಅಲ್ಲಿಂದ ಹೊರಬರಲಾಗದೇ ತಮ್ಮಲ್ಲಿದ್ದ ಆಹಾರ ಪದಾರ್ಥಗಳನ್ನು ಸೇವಿಸಿ ದಿನಕಳೆಯುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ಅವರಲ್ಲಿದ್ದ ಆಹಾರ ಪದಾರ್ಥಗಳ ಶೇಖರಣೆ ಮುಗಿದು ಹೋದ ಪರಿಣಾಮ ಆಹಾರವಿಲ್ಲದೆ ಪರಿತಪಿಸುತ್ತಿದ್ದರು. ಆಹಾರವೂ ಇಲ್ಲದೇ ನದಿ ಪ್ರವಾಹದಿಂದ ಹೊರಗೆ ಬರಲೂ ಆಗದೇ ಸಂಕಷ್ಟದಲ್ಲಿದ್ದ ಕುರಿಗಾಹಿಗಳ ಸ್ಥಳೀಯರಿಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಸ್ಥಳೀಯರು ಈ ವಿಷಯವನ್ನು ತಾಲೂಕು ಆಡಳಿತಕ್ಕೆ ಮಾಹಿತಿ ಮುಟ್ಟಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡ ತಹಸೀಲ್ದಾರ್ ಎಂ.ವಿ.ರೂಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕುರಿಗಾಹಿಗಳನ್ನು ಹೊರತರುವ ಪ್ರಯತ್ನ ನಡೆಸಿದೆ. ಆದರೆ, ಆಹಾರ ಸಾಮಗ್ರಿಗಳನ್ನು ಮಾತ್ರ ಸ್ವೀಕರಿಸಿದ ಕುರಿಗಾಹಿಗಳ ದ್ವೀಪದಿಂದ ಹೊರಬರಲು ನಿರಾಕರಿಸಿದೆ.
ಕುರಿಗಾಹಿಗಳಿಗೆ ಆಹಾರ ತಲುಪಿಸುವ ಕೆಲಸ ಮಾಡಿದ್ದು ಅವರನ್ನು ಮತ್ತು 800 ಕುರಿಗಳನ್ನು ಹೊರಗಡೆ ಸಾಗಿಸಲು ಮನವೊಲಿಸಿದರೂ ಇದಕ್ಕೆ ಒಪ್ಪದ ಕುರಿಗಾಹಿಗಳು ನಾವು ಇಲ್ಲಿಯೇ ಎತ್ತರವಾದ ಸುರಕ್ಷಿತ ಸ್ಥಳದಲ್ಲಿ ಇರುತ್ತೇವೆ. ನಮಗೆ ಆಹಾರ ಪದಾರ್ಥಗಳು ಸಾಕು ಎಂದು ತಿಳಿಸಿದ್ದಾರೆ.
ಹೊಸಪಟ್ಟಣದ ದ್ವೀಪ ಎತ್ತರವಾಗಿದೆ. ಇಲ್ಲಿ ಟಿಪ್ಪು ಕಾಲದ ಕೋಟೆ ಮತ್ತು ಅರಮನೆ ನಿರ್ಮಿಸಲು ಉದ್ದೇಶಿಸಿದ್ದ ತಳಪಾಯದ ಕುರುಗಳಿವೆ. ಎಷ್ಟೇ ಪ್ರವಾಹ ಬಂದರೂ ನೀರು ದ್ವೀಪಕ್ಕೆ ನುಗ್ಗುವುದಿಲ್ಲ. ಕುರಿಗಾಹಿಗಳ ಮನವೊಲಿಸಿ ಅವರನ್ನು ಕುರಿಗಳ ಸಮೇತ ಹೊರತರುವ ತಾಲೂಕು ಆಡಳಿತದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ವಿ.ರೂಪ ಕುರಿಗಾಹಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯವಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ.
ಕಾರ್ಯಾಚರಣೆಯ ತಾಲೂಕು ಅಗ್ನಿ ಸಾಮಕ ಪಡೆಯ ಅಧಿಕಾರಿ ಶಿವಣ್ಣ ನೇತೃತ್ವದ ಸಿಬ್ಬಂದಿಗಳ ತಂಡ, ಅಕ್ಕಿಹೆಬ್ಬಾಳು ರಾಜಸ್ವ ನಿರೀಕ್ಷಕ ನರೇಂದ್ರ, ಅಕ್ಕಿಹೆಬ್ಬಾಳು ಪಿಡಿಒ ರವಿಕುಮಾರ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
2 ದಿನ ಆಹಾರ ಇಲ್ಲದೆ ಪರದಾಡಿದ ಕುರಿಗಾಯಿಗಳು
- ಕುರಿ ಮೇಯಿಸಲು ಹೋಗಿ ಹೇಮಾವತಿ ನದಿ ಪ್ರವಾಹಕ್ಕೆ ಸಿಲುಕಿದ ಕುರಿಗಾಯಿ ಕುಟುಂಬ
- ತಾಲೂಕು ಆಡಳಿತದಿಂದ ಆಹಾರ ಪದಾರ್ಥ ವಿತರಣೆ
ಕಾರ್ಯಾಚರಣೆಯ ತಾಲೂಕು ಅಗ್ನಿ ಸಾಮಕ ಪಡೆಯ ಅಧಿಕಾರಿ ಶಿವಣ್ಣ ನೇತೃತ್ವದ ಸಿಬ್ಬಂದಿಗಳ ತಂಡ,
ವಿಷಯ ತಿಳಿದ ಕೂಡಲೇ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡ ತಹಸೀಲ್ದಾರ್ ಎಂ.ವಿ.ರೂಪ ನೇತೃತ್ವದಲ್ಲಿ ಕಾರ್ಯಾಚರಣೆ
ಅಕ್ಕಿಹೆಬ್ಬಾಳು ರಾಜಸ್ವ ನಿರೀಕ್ಷಕ ನರೇಂದ್ರ, ಅಕ್ಕಿಹೆಬ್ಬಾಳು ಪಿಡಿಒ ರವಿಕುಮಾರ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು