ತುಮಕೂರು: ತುಮಕೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ

By Kannadaprabha NewsFirst Published Sep 24, 2019, 3:03 PM IST
Highlights

ತುಮಕೂರು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಇನ್ನು ತುಮಕೂರಿನ ಶೆಟ್ಟಿಹಳ್ಳಿ ಕೆಳಸೇತುವೆಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಕುಣಿಗಲ್‌ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್‌ ಕೆಳಗೆ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ತುಮಕೂರಿನ ಜೂನಿಯರ್‌ ಕಾಲೇಜು ಮೈದಾನ, ಮಹಾತ್ಮಗಾಂಧಿ ಕ್ರೀಡಾಂಗಣ ಸೇರಿದಂತೆ ಬಹಳಷ್ಟುಮೈದಾನಗಳು ಅಕ್ಷರಶಃ ಕೆಸರುಗದ್ದೆಯಾಗಿದೆ.

ತುಮಕೂರು(ಸೆ.24): ಜಿಲ್ಲೆಯಾದ್ಯಂತ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕೊರಟಗೆರೆ ಸೇರಿದಂತೆ ಬಹಳಷ್ಟುಕಡೆ ಭರ್ಜರಿ ವರ್ಷಧಾರೆಯಾಗಿದೆ.

ಸಂಜೆ ಸುಮಾರು 5 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಎಡಬಿಡದೆ ಸುರಿಯಿತು. ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಇನ್ನು ತುಮಕೂರಿನ ಶೆಟ್ಟಿಹಳ್ಳಿ ಕೆಳಸೇತುವೆಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಕುಣಿಗಲ್‌ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್‌ ಕೆಳಗೆ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಶಾಂತಿನಗರ ಮತ್ತು ಸದಾಶಿವನಗರದ ಬಳಿ ಮಳೆಗೆ ವಿದ್ಯುತ್‌ ಕಂಬವೊಂದು ಧರೆಗೆ ಉರುಳಿತು. ಇನ್ನು ತುಮಕೂರಿನ ಜೂನಿಯರ್‌ ಕಾಲೇಜು ಮೈದಾನ, ಮಹಾತ್ಮಗಾಂಧಿ ಕ್ರೀಡಾಂಗಣ ಸೇರಿದಂತೆ ಬಹಳಷ್ಟುಮೈದಾನಗಳು ಅಕ್ಷರಶಃ ಕೆಸರುಗದ್ದೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಚಾರಕ್ಕೆ ತೊಂದರೆ:

ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲೆಲ್ಲೆ ನೀರು ಹರಿಯುತ್ತಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಅದರಲ್ಲೂ ಸಂಜೆ ವೇಳೆ ಬಿರು ಮಳೆ ಬಿದ್ದಿದ್ದರಿಂದ ಶಾಲಾ ಕಾಲೇಜು, ಕಚೇರಿಯಿಂದ ಮನೆಗೆ ತೆರಳುವವರು ತೀವ್ರ ತೊಂದರೆ ಅನುಭವಿಸುವಂತಾಯಿತು. ಇನ್ನು ಕುಣಿಗಲ್‌ ರಸ್ತೆಯಲ್ಲಂತೂ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಮಳೆ ನೀರು ಸಂಗ್ರಹವಾಗಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿ ವಾಹನಗಳು ಸಾಲು ಗಟ್ಟಿನಿಂತಿದ್ದವು.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:

ತುಮಕೂರಿನ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಹಳಷ್ಟುಕಡೆ ಜಲಾವೃತವಾಗಿದೆ. ಕೆಲವು ಕಡೆ ಮನೆಯೊಳಗೂ ನೀರು ನುಗ್ಗಿದ ಪರಿಣಾಮ ನೀರನ್ನು ಹೊರ ಹಾಕುವುದರಲ್ಲಿ ಮನೆಯವರು ಮಗ್ನರಾಗಿದ್ದರು. ತುಮಕೂರಿನ ಕಾಲ್‌ ಟೆಕ್ಸ್‌ ಬಳಿ, ರಿಂಗ್‌ ರಸ್ತೆ ಮುಂತಾದ ಕಡೆಯಲ್ಲೂ ಮಳೆಯಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಸುಮಾರು ಒಂದು ಗಂಟೆಗಳ ಬಳಿಕ ಮಳೆ ಕಡಿಮೆಯಾಯಿತು. ಆದರೆ ಪುನಃ ರಾತ್ರಿ 8.30ಕ್ಕೆ ಮಳೆ ಆರಂಭವಾಯಿತು.

ಕಡೆಗೂ ಗೊಲ್ಲರಹಟ್ಟಿಗೆ ದಲಿತ ಸಂಸದ ಪ್ರವೇಶ

click me!