ತುಮಕೂರಿನ ಪಾವಗಡ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಕೋಳಿ ಫಾರಂ ಜಲಾವೃತವಾಗಿದೆ. 7 ಟನ್ ಕೋಳಿಗಳು ಜಲಾವೃತ್ತವಾಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು, 8 ಲಕ್ಷ ರುಪಾಯಿಯಷ್ಟು ನಷ್ಟವಾಗಿದೆ.
ತುಮಕೂರು(ಅ.05): ರಾತ್ರಿಯಿಡಿ ಸತತವಾಗಿ ಸುರಿದ ಭಾರೀ ಪ್ರಮಾಣದ ಮಳೆಯಿಂದ ಫಾರಂಗೆ ನೀರು ನುಗ್ಗಿ 8 ಲಕ್ಷ ರು. ಮೌಲ್ಯದ ಸುಮಾರು 7 ಟನ್ ಕೋಳಿಗಳು ಜಲಾವೃತ್ತವಾಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ರಾತ್ರಿ ಪಾವಗಡ ತಾಲೂಕಿನ ವೀರ್ಲಗೊಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗ್ರಾಮದ ವಾಸಿ ನಿವೃತ್ತ ಕಂದಾಯ ಅಧಿಕಾರಿ ರೈತ ನರಸಿಂಹಪ್ಪ ಗ್ರಾಮದ ತಮ್ಮ ಜಮೀನಿನಲ್ಲಿ ಬೃಹತ್ ಮಟ್ಟದ ಫಾರಂ ಕೋಳಿ ಸಾಗಾಣಿಕೆಯಲ್ಲಿ ನಿರತವಾಗಿದ್ದರು. ರಾತ್ರಿಯಿಡಿ ಸತತವಾಗಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ನೀರು ಶೆಡ್‌ಗೆ ನುಗ್ಗಿದೆ.
ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನತೆ
ಈ ವೇಳೆ ಶೆಡ್‌ನಲ್ಲಿದ್ದ 8 ಲಕ್ಷ ರು. ಬೆಲೆಬಾಳುವ ಸುಮಾರು 7 ಟನ್ ಕೋಳಿಗಳು ಜಲಾವೃತವಾಗಿ ಸಾವನ್ನಪ್ಪಿದ್ದು ಅಪಾರ ಪ್ರಮಾಣದ ಕೋಳಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಭಾರಿ ಪ್ರಮಾಣದಲ್ಲಿ ನಷ್ಟಉಂಟಾಗಿದೆ. ಇದರಿಂದ ರೈತ ನರಸಿಂಹಪ್ಪ ತೀವ್ರ ಕಂಗಾಲಾಗಿದ್ದು, ದಿಕ್ಕು ಕಾಣದೆ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಹುಳಿಯಾರುವಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು
ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ವರದರಾಜ್, ತಾಲೂಕು ಕಂದಾಯ ಇಲಾಖೆ ನಿರೀಕ್ಷಕ ಗಿರೀಶ್, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಧನುಂಜಯ, ತಾಪಂ ಸದಸ್ಯ ತಮ್ಮಣ್ಣ ಹಾಗೂ ಸಂಬಂಧಪಟ್ಟಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ತೆರಳಿ ಪರಿಶೀಲಿಸಿ ವರದಿ ಪಡೆದಿದ್ದು ಈ ಸಂಬಂಧ ಕೂಡಲೇ ಪರಿಹಾರ ಕಲ್ಪಿಸುವ ಮೂಲಕ ರೈತನ ನೆರವಿಗೆ ಬರುವಂತೆ ಇಲ್ಲಿನ ಹಸಿರು ಸೇನೆ ಹಾಗೂ ಇತರೆ ರೈತ ಸಂಘಟನೆಗಳ ಪದಾಧಿಕಾರಿಗಳು ಸಕಾರ್ರಕ್ಕೆ ಒತ್ತಾಯಿಸಿದ್ದಾರೆ.
ಕಸಬಾ, ನಿಡಗಲ್ ವ್ಯಾಪ್ತಿಯಲ್ಲಿ ಭಾರಿ ಮಳೆ:
ಗುರುವಾರ ರಾತ್ರಿಯಿಡಿ ಸುರಿದ ವರುಣನ ಅಭರ್ಟಕ್ಕೆ ಕಸಬಾ ಹಾಗೂ ನಿಡಗಲ್ ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಅಪಾರ ಪ್ರಮಾಣದ ನಷ್ಟಸಂಭವಿಸಿದ್ದು, ಅಡಿಕೆ ವಿಲ್ಯದೆಲೆ ಪಪ್ಪಾಯಿ, ದಾಳಿಂಬೆ, ಬಾಳೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳು ನಷ್ಟಕ್ಕಿಡಾಗಿವೆ.
'ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟುತ್ತೆ'
ಕಸಬಾ ವ್ಯಾಪ್ತಿಯ ನೆಲಗಾನಹಳ್ಳಿ, ವೀರ್ಲಗೊಂದಿ, ಕನ್ನಮೇಡಿ, ಬ್ಯಾಡನೂರು ಕೃಷ್ಣಗಿರಿ, ಆರ್ಲಹಳ್ಳಿ ದೇವರಹಟ್ಟಿಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಶೇಂಗಾ, ರಾಗಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಜಲಾವೃತ್ತವಾಗಿದ್ದು, ಅಲ್ಲಲಿ ನೀರು ನುಗ್ಗಿದ ಪರಿÜಣಾಮ ಮನೆಗಳು ಕುಸಿತಗೊಂಡಿರುವ ಬಗ್ಗೆ ವರದಿಗಳಾಗಿವೆ.
ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹ:
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಬಹುತೇಕ ಕೆರೆಕುಂಟೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ. ತಾಲೂಕಿನ ನಿಡಗಲ್ ಹೋಬಳಿ ವ್ಯಾಪ್ತಿಯ ನ್ಯಾಯದಗುಂಟೆ, ಕೋಡಿಗೆನಹಳ್ಳಿ, ಸಿ.ಕೆ.ಪುರ, ಮಂಗಳವಾಡ ಗುಜ್ಜಾರಹಳ್ಳಿ, ಲಿಂಗದಹಳ್ಳಿ ಶೈಲಾಪುರ, ರಂಗಸಮುದ್ರ, ಓಬಳಾಪುರ, ಗೊಲ್ಲನಕುಂಟೆ ಹರಿಹರಪುರ ಕೆ.ಟಿಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಭಾರೀ ಪ್ರಮಾಣದ ಮಳೆ ಬಿದ್ದ ಪರಿಣಾಮ ಕರೆಕುಂಟೆಗಳಿಗೆ ಅಪಾರ ನೀರು ಸಂಗ್ರವಾಗಿದ್ದು, ಜೀವನೋಪಾಯ ಬೆಳೆಗಳಾದ ಹೂವಿನಗಿಡ, ಅಡಿಕೆ ವಿಳ್ಯದೆಲೆ ಶೇಂಗಾ ದಾಳಿಂಬೆ ತೋಟಗಳು ಜಲಾವೃತ್ತವಾಗಿ ರೈತರು ಹಾಗೂ ಕೃಷಿ ಕಾಮಿರ್ಕರು ತೀವೃ ಆತಂಕಕ್ಕಿಡಾಗಿದ್ದಾರೆ.