ಬಿರುಗಾಳಿಯ ಆರ್ಭಟಕ್ಕೆ ನಲುಗಿದ ಕೊರಟಗೆರೆ ರೈತ

By Kannadaprabha News  |  First Published May 25, 2023, 5:56 AM IST

ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಬಡವರ ಮನೆಗಳ ಮೇಲ್ಛಾವಣೆಗಳು ಕಿಮೀಗಟ್ಟಲೇ ದೂರಕ್ಕೆ ಹಾರಿಹೋಗಿವೆ. ರೈತರು ಬೆಳೆದಂತಹ ಹತ್ತಾರು ಎಕರೆ ಬಾಳೆತೋಟವು ಬಿರುಗಾಳಿಯ ಆರ್ಭಟಕ್ಕೆ ನೆಲಕ್ಕೆ ಉರುಳಿದ್ದು, ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಕೂಲಿಕಾರ್ಮಿಕನ ಮನೆಯು ಮಂಗಳವಾರ ತಡರಾತ್ರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.


 ಹೊಳವನಹಳ್ಳಿ :  ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಬಡವರ ಮನೆಗಳ ಮೇಲ್ಛಾವಣೆಗಳು ಕಿಮೀಗಟ್ಟಲೇ ದೂರಕ್ಕೆ ಹಾರಿಹೋಗಿವೆ. ರೈತರು ಬೆಳೆದಂತಹ ಹತ್ತಾರು ಎಕರೆ ಬಾಳೆತೋಟವು ಬಿರುಗಾಳಿಯ ಆರ್ಭಟಕ್ಕೆ ನೆಲಕ್ಕೆ ಉರುಳಿದ್ದು, ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಕೂಲಿಕಾರ್ಮಿಕನ ಮನೆಯು ಮಂಗಳವಾರ ತಡರಾತ್ರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಅರಸಾಪುರ ಗ್ರಾಪಂಯ ಸಿದ್ದಲಿಂಗಯ್ಯನಪಾಳ್ಯ, ಕಾಶಾಪುರ, ಹಕ್ಕಿಪಿಕ್ಕಿ ಕಾಲೋನಿ ಗ್ರಾಮದ 8ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಸಿದ್ದಲಿಂಗಯ್ಯನಪಾಳ್ಯದ ರೈತ ಮಲ್ಲಿಕಾರ್ಜುನ, ಸಿದ್ದರಾಜು ಮತ್ತು ಉಗ್ರಪ್ಪ ಎಂಬಾತನಿಗೆ 5 ಎಕರೆಗೂ ಅಧಿಕ ಬಾಳೆತೋಟವು ನೆಲಕ್ಕೆ ಉರುಳಿದೆ. ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್‌ ಮುನಿಸ್ವಾಮಿರೆಡ್ಡಿ ಸೇರಿದಂತೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದಾರೆ.

Tap to resize

Latest Videos

10 ಲಕ್ಷ ಮೌಲ್ಯದ ದಸವಧಾನ್ಯ ಭಸ್ಮ:

ಬಿರುಗಾಳಿಯ ಆರ್ಭಟಕ್ಕೆ ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ ಆಗಿ ಹೊಳವನಹಳ್ಳಿ ಗ್ರಾಮದ ಮೊಹಮ್ಮದ್‌ ಅಲಿ ಎಂಬಾತನ ಮನೆಯು ಸುಟ್ಟುಭಸ್ಮವಾಗಿದೆ. ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ 5 ಲಕ್ಷ ಮೌಲ್ಯದ ಹೊಸಬಟ್ಟೆಮತ್ತು ಬಂಗಾರದ ಒಡವೆಗಳು ಹಾಳಾಗಿವೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ದಸವಧಾನ್ಯ, ಪಿಠೋಪಕರಣ ಸೇರಿದಂತೆ ಮಕ್ಕಳ ಅಂಕಪಟ್ಟಿಸೇರಿದಂತೆ ಪುಸ್ತಕಗಳು ಹಾಳಾಗಿವೆ. ಮೊಹಮ್ಮದ್‌ ಅಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಬೀದಿ ಪಾಲಾಗಿದ್ದಾರೆ.

ಕಂದಾಯ ಕಚೇರಿಯಲ್ಲಿ ತುರ್ತುಸಭೆ:

ಬಿರುಗಾಳಿಯ ಆರ್ಭಟಕ್ಕೆ ಹಲವು ಸಮಸ್ಯೆಗಳು ಉದ್ಭವಿಸಿದ ತಕ್ಷಣವೇ ತಹಸೀಲ್ದಾರ್‌ ಮುನಿಸ್ವಾಮಿರೆಡ್ಡಿ ನೇತೃತ್ವದಲ್ಲಿ ತಾಪಂ ಇಓ, ಬೆಸ್ಕಾಂ ಇಲಾಖೆ, ತೋಟಗಾರಿಕೆ, ಅರಣ್ಯ, ಕೃಷಿ ಇಲಾಖೆ ಸೇರಿದಂತೆ ಅಧಿಕಾರಿಗಳ ತುರ್ತುಸಭೆ ನಡೆದಿದೆ. ಕೊರಟಗೆರೆ ಕ್ಷೇತ್ರದಲ್ಲಿ ಏನಾದರೂ ಅನಾಹುತ ಸೃಷ್ಟಿಯಾದರೆ ಅಧಿಕಾರಿವರ್ಗ ತಕ್ಷಣವೇ ಕಾರ್ಯಪ್ರವೃತ್ತ ಆಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್‌ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿರುಗಾಳಿ ಆರ್ಭಟದಿಂದ ಹಾನಿಯಾದ ಬಡವರ ಮನೆ ಮತ್ತು ರೈತರ ಜಮೀನಿಗೆ ಕಂದಾಯ ಹಾಗೂ ತೋಟಗಾರಿಕೆ ಅಧಿಕಾರಿಗಳ ತಂಡ ಬೇಟಿನೀಡಿ ಪರಿಶೀಲನೆ ನಡೆಸಿದೆ. ವಿದ್ಯುತ್‌ನಿಂದ ಸುಟ್ಟಿರುವ ಮನೆಗೆ ನಾನೇ ಖುದ್ದಾಗಿ ಭೇಟಿ ನೀಡಿದ್ದೇನೆ. ತ್ವರಿತವಾಗಿ ಕುಟುಂಬಕ್ಕೆ ಅವಶ್ಯಕತೆ ಇರುವ ಸೌಲಭ್ಯವನ್ನು ಕಲ್ಪಿಸಲು ಗ್ರಾಪಂಗೆ ಸೂಚಿಸಲಾಗಿದೆ. ನಷ್ಟದ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ.

ಮುನಿಸ್ವಾಮಿರೆಡ್ಡಿ ತಹಸೀಲ್ದಾರ್‌, ಕೊರಟಗೆರೆ

ಬಿರುಗಾಳಿಯ ಆರ್ಭಟಕ್ಕೆ ಬಡವರ ಮನೆ ಮತ್ತು ಬಾಳೆತೋಟಕ್ಕೆ ಹಾನಿಯಾದ ಮಾಹಿತಿ ಪಡೆದಿದ್ದೇನೆ. ಹಾನಿಯಾದ ಸ್ಥಳಕ್ಕೆ ತಕ್ಷಣ ಭೇಟಿನೀಡಿ ಸರ್ಕಾರಕ್ಕೆ ವರದಿ ನೀಡುವಂತೆ ಕೊರಟಗೆರೆ ತಹಸೀಲ್ದಾರ್‌ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಾನಿಯಿಂದ ನಷ್ಟವಾದ ರೈತಾಪಿವರ್ಗ ಮತ್ತು ಕೂಲಿಕಾರ್ಮಿಕನ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೂಡಿಸುತ್ತೇನೆ.

ಡಾ.ಜಿ.ಪರಮೇಶ್ವರ ಸಚಿವ, ಕೊರಟಗೆರೆ

click me!