ಮುಳಬಾಗಿಲಿನಲ್ಲಿ ಭಾರೀ ಮಳೆ: ನೀರಿನಲ್ಲಿ ಮುಳುಗಿದ ವಾಹನಗಳು

By Kannadaprabha NewsFirst Published Sep 21, 2021, 10:55 AM IST
Highlights
  • ಜಿಲ್ಲೆಯ ಮುಳಬಾಗಿಲಿನಲ್ಲಿ ಸೋಮವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ
  • ಪಟ್ಟಣದ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರ ಪರದಾಟ

ಕೋಲಾರ (ಸೆ.21): ಜಿಲ್ಲೆಯ ಮುಳಬಾಗಿಲಿನಲ್ಲಿ ಸೋಮವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಪಟ್ಟಣದ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಬೇಕಾಯಿತು.

ಅಂಬೇಡ್ಕರ್‌ ಸರ್ಕಲ್‌ ನಿಂದ ಸೋಮೇಶ್ವರ ಪಾಳ್ಯದ ಮುಖ್ಯ ರಸ್ತೆ ಉದ್ದಕ್ಕೂ ನೀರು ತುಂಬಿಕೊಂಡು ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಜನಜೀವನ ಅಸ್ತವ್ಯಸ್ತ, ರಸ್ತೆಯ ಅಕ್ಕ ಪಕ್ಕದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.

ರಾಜ್ಯದಲ್ಲಿ ಬಹುತೇಕ ಕಡೆ ದಿಢೀರ್‌ ತಾಪಮಾನ ಏರಿಕೆ

ಕೆಲವು ಕಡೆ ನೀರು ಹೆಚ್ಚಾಗಿ ಆಟೋ ಹಾಗೂ ಒಂದು ಸ್ವಿಫ್ಟ್‌ ಕಾರು ಹಾಗೂ ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಿದ್ದವು. ಪಟ್ಟಣದಲ್ಲೂ ನೀರು ಕೆರೆಯಂತೆ ನಿಂತಿತ್ತು. ಸೋಮೇಶ್ವರಪಾಳ್ಯ ದಿಂದ ಪಟ್ಟಣಕ್ಕೆ ಪ್ರವೇಶಿಸಲು ಹರಸಾಹಸ ಪಡುವಂತಾಗಿತ್ತು. ಬೆಂಗಳೂರು ರಸ್ತೆಯ ಮೇಲೆ ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸತತ ಎರಡು ಗಂಟೆಗಳ ಕಾಲ ಮಳೆ ಸುರಿದ್ದಿದ್ದರಿಂದ ನೀರು ಎಲ್ಲಂದರಲ್ಲಿ ಹರಿದು ಪರದಾಡುವಂತಾಗಿತ್ತು.ಮಳೆಯಲ್ಲಿ ವಾಹನ ಸಾವರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ.

ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲೂ ಮಳೆ ಬಿದ್ದಿದೆ. ಕೆಲವು ಕಡೆ ಆದ ಸಾಧಾರಣ ಮಳೆಯಿಂದ ಸಣ್ಣ ಪುಟ್ಟಹಳ್ಳ ಕೊಳ್ಳಗಳಿಗೆ ನೀರು ಬಂದಿದೆ. ಪರಿಣಾಮ ಮಳೆಯಿಲ್ಲದೆ ಸಂಕಷ್ಟದಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ಕಳೆದ 10 ದಿನಗಳಿಂದ ಮಳೆ ಇಲ್ಲದೆ ಒಣಗಲಾರಂಭಿಸಿದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಗುಡುಗು ಸಿಡಿಲಿನ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

click me!