ರಾಯಚೂರಲ್ಲಿ ಎರಡು ತಾಸು ಸುರಿದ ಮಳೆ: ನೀರು ಪಾಲಾದ ಈರುಳ್ಳಿ

By Web Desk  |  First Published Oct 5, 2019, 11:24 AM IST

ನಗರ ಸೇರಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸಿದರು| ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದಿಟ್ಟ ಈರುಳ್ಳಿ ಬೆಳೆಗೆ ನೀರು ನುಗ್ಗಿದ ಪರಿಣಾಮ ರೈತರಿಗೆ ನಷ್ಟವಾಗಿದೆ| ಸುಮಾರು ಎರಡು ಗಂಟೆಗಳ ಕಾಲ ಆಗಮಿಸಿದ ವರುಣನಿಂದ ಜನರು ಸಮಸ್ಯೆ ಅನುಭವಿಸಿದರು| ಭಾರಿ ಮಳೆಯಿಂದಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಹರಿದು ಸಂಚಾರಕ್ಕೆ ಸಮಸ್ಯೆ ಉಂಟು ಮಾಡಿತ್ತು|


ರಾಯಚೂರು(ಅ.5): ನಗರ ಸೇರಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸಿದರು. ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದಿಟ್ಟ ಈರುಳ್ಳಿ ಬೆಳೆಗೆ ನೀರು ನುಗ್ಗಿದ ಪರಿಣಾಮ ರೈತರಿಗೆ ನಷ್ಟವಾಗಿದೆ.

ಶುಕ್ರವಾರ ಬೆಳಗ್ಗೆ ಸಹಜವಾಗಿಯೇ ಬಿಸಿಲಿನ ತಾಪ ಜಾಸ್ತಿಯಾಗಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಆವರಿಸಿದ ದಟ್ಟವಾದ ಮೋಡ ಮಳೆಯಾಗಿ ಸುರಿಯತೊಡಗಿತು. ಸುಮಾರು ಎರಡು ಗಂಟೆಗಳ ಕಾಲ ಆಗಮಿಸಿದ ವರುಣನಿಂದ ಜನರು ಸಮಸ್ಯೆ ಅನುಭವಿಸಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರಿ ಮಳೆಯಿಂದಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಹರಿದು ಸಂಚಾರಕ್ಕೆ ಸಮಸ್ಯೆ ಉಂಟು ಮಾಡಿತ್ತು. ರಾಜಾಕಾಲುವೆ ಸೇರಿ ಬಡಾವಣೆಗಳನ ಚರಂಡಿಗಳ ತುಂಬೆಲ್ಲಾ ಮಳೆ ನೀರು ಹರಿಯಿತು. ನಗರದ ರಾಜೇಂದ್ರ ಗಂಜ್‌ ಆವರಣದಲ್ಲಿ ಮಾರಾಟ-ಖರೀದಿಗೆ ಈರುಳ್ಳಿ ಬೆಳೆಯನ್ನಿಡಲಾಗಿತ್ತು. ದಿಢೀರ್ ಆಗಿ ಆಗಮಿಸಿದ ಮಳೆಯಿಂದಾಗಿ ಈರುಳ್ಳಿ ಮೆನೆ ನೀರಿನ ಪಾಲಾಯಿತು.

ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತದ ಆತಂಕ ಎದುರಿಸುತ್ತಿರುವ ರೈತರಿಗೆ ಮಳೆಯನ್ನು ತೊಯ್ದ ಈರುಳ್ಳಿ ಗುಣಮಟ್ಟಕಡಿಮೆಗೊಳಿಸಿ ಇನ್ನಷ್ಟುಅತಂಕವನ್ನು ಸೃಷ್ಠಿಸುವಂತೆ ಮಾಡಿದೆ.

click me!