ಬೆಂಗಳೂರಿನ ಮಳೆಗೆ ವಿಮಾನ ನಿಲ್ದಾಣ ತುಂಬಾ ನೀರು, ವಿನ್ಯಾಸ ಮಾಡಿದ ಎಂಜಿನಿಯರ್‌ ಮೇಲೆ ಪ್ರಯಾಣಿಕರ ಹಿಡಿಶಾಪ

By Gowthami K  |  First Published May 11, 2024, 12:24 PM IST

ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ  ಪರಿಣಾಮ ಉಂಟಾಗಿದ್ದು, ಕೆಐಎ ಅಧಿಕಾರಿಗಳಿಗೆ ತಲೆಬಿಸಿಯಾದ್ರೆ ಪ್ರೆಯಾಣಿಕರು ಪರದಾಡಿದ್ರು


ಬೆಂಗಳೂರು (ಮೇ.11): ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆಯಾಗಿ ತಂಪೆರೆದಿದೆ. ಸಂಜೆ ವೇಳೆಗೆ ಆರಂಭವಾದ ಮಳೆ ತಡರಾತ್ರಿ ರವರೆಗೂ ಮುಂದುವರಿಯುತ್ತಿದೆ.  ಸತತವಾಗಿ 4 ಗಂಟೆಗೂ ಹೆಚ್ಚಿನ ಕಾಲ ಮಳೆ ಸುರಿದ ಪರಿಣಾಮ ನಗರದ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು.

ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ಕೂಡ ಹಾನಿಯುಂಟಾಗಿದ್ದು, ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಅಧಿಕಾರಿಗಳು ಗುರುವಾರ, ಶುಕ್ರವಾರ ಕೂಡ ಗಮನಾರ್ಹವಾದ ತೊಂದರೆಯನ್ನು ಎದುರಿಸಿದರು. ನಿರಂತರ ಮಳೆಯಿಂದಾಗಿ ವಿಮಾನ ನಿಲ್ದಾಣದ  ಟರ್ಮಿನಲ್ 2 ನಲ್ಲಿ ಸೋರಿಕೆ ಕಂಡುಬಂತು. ಪರಿಣಾಮ ನೀರು ನಿಂತು ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನೀರು ಸರಾಗವಾಗಿ ಹರಿದು ಹೋಗಲು ಸಮರ್ಕವಾದ ಚರಂಡಿ ವ್ಯವಸ್ಥೆಯೇ ಇದಕ್ಕ ಕಾರಣ ಎಂದು ದೂರಿದ್ದಾರೆ.

Latest Videos

undefined

ಏರ್‌ ಇಂಡಿಯಾ ಸಂಚಾರ ನಾಳೆ ಸಂಪೂರ್ಣ ಸಹಜ: ಆದರೂ 75 ವಿಮಾನ ಹಾರಾಟ ರದ್ದು

ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆಯು ರಾತ್ರಿ 9:35 ರಿಂದ 10:29 ರವರೆಗೆ ಸುರಿದ ಪರಿಣಾಮ ವಿಮಾನಗಳು ಲ್ಯಾಂಡಿಂಗ್ ಆಗಲು ತೀವ್ರ ಕಷ್ಟವಾಯ್ತು. ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ ಹಲವಾರು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಯ್ತು ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಅಧಿಕೃತ ಹೇಳಿಕೆ ತಿಳಿಸಿದೆ.  

ಶುಕ್ರವಾರದ ಪ್ರತಿಕೂಲ ಹವಾಮಾನದ ಕಾರಣ 13 ದೇಶೀಯ ವಿಮಾನಗಳು, ಮೂರು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಮತ್ತು ಒಂದು ಅಂತರರಾಷ್ಟ್ರೀಯ ಸರಕು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಯ್ತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2,  2023ರ ಆಗಸ್ಟ್ 31 ರಿಂದ ಕಾರ್ಯಾಚರಣೆ ನಡೆಸುತ್ತಿದೆ.  ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ  ಮೋದಿ ಅವರು 2022 ರ ನವೆಂಬರ್​​ನಲ್ಲಿ ಉದ್ಘಾಟನೆ ಮಾಡಿದ್ದರು.  ದೇಶೀಯ ವಿಮಾನ ಕಾರ್ಯಾಚರಣೆಗಳು 2023 ರ ಜನವರಿ 15 ರಂದು ಆರಂಭಿಸಲಾಗಿತ್ತು. ಇದೀಗ ನಿಲ್ದಾಣ ಉದ್ಘಾಟನೆಯಾಗಿ ಎರಡು ವರ್ಷದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿದೆ.

ಶುಕ್ರವಾರ ಸಂಜೆ ವೇಳೆಗೆ ಮತ್ತೆ ಬೆಂಗಳೂರಿನಲ್ಲಿ ಮಳೆ ಆರಂಭವಾಗಿ ತಡರಾತ್ರಿವರೆಗೂ ಸುರಿಯಿತು. ಪರಿಣಾಮ ಯಲಹಂಕ, ಜಕ್ಕೂರು, ಯಶವಂತಪುರ, ಕೆಂಗೇರಿ, ವಿಜಯನಗರ, ಜಯನಗರ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿ ಸಮಸ್ಯೆಯಾಯ್ತು. ರಾಜಕಾಲ;ುವೆಗಳಲ್ಲಿ ಅತೋ ಹೆಚ್ಚು ನೀರು ಹರಿದು ಕೆಲವು ತಗ್ಗು ಪ್ರದೇಶಗಳಿಗೆ ನೀರು ತುಂಬಿತು.

ವಿಮಾನದಲ್ಲಿ ಲಗೇಜ್ ಇಡೋ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದ ಮಹಿಳೆ, ಪ್ರಯಾಣಿಕರಿಗೆ ಶಾಕ್!

ಬಿರುಗಾಳಿಯ ವಾತಾವರಣವು ಜಯನಗರ, ನೃಪತುಂಗ ನಗರ ಮತ್ತು ಆರ್‌ಆರ್ ನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಲವಾರು ಮರಗಳು ಉರುಳಿವೆ ಎಂದು ಸಂಸ್ಥೆ ವರದಿ ಮಾಡಿದೆ. ಆದಾಗ್ಯೂ, ಅವ್ಯವಸ್ಥೆಯ ನಡುವೆ, ಮಳೆಯು ಬೇಸಿಗೆಯ ಬಿಸಿಲಿನ ತಾಪಮಾನದಿಂದ ಬೆಂಗಳೂರಿನ ನಿವಾಸಿಗಳಿಗೆ ಹೆಚ್ಚು ಅಗತ್ಯವಾದ ವಿಶ್ರಾಂತಿಯನ್ನು ಒದಗಿಸಿತು, ಇದು ಹಲವು ದಶಕಗಳ ನಂತರ ಅಪರೂಪದ ಅನುಭವವಾಗಿದೆ.

click me!