ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುತ್ತಿದೆ. ತುಂಗಭದ್ರಾ ಜಲಾಶಯ ತುಂಬಲು ಕ್ಷಣಗಣನೆ ಆರಂಭವಾಗಿದೆ.
ಮುನಿರಾಬಾದ್ (ಆ.15): ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದಿದೆ.
ಜಲಾಶಯ ಇನ್ನು 2ರಿಂದ 3 ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ. 1633 ಅಡಿ ಗರಿಷ್ಠಮಟ್ಟಇರುವ ಜಲಾಶಯದಲ್ಲಿ ಶುಕ್ರವಾರದಂದು ನೀರಿನ ಮಟ್ಟ1630.63 ಅಡಿಗೇರಿದೆ.
ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ...
ಪ್ರಸ್ತುತ 51177 ಕ್ಯು.ಒಳಹರಿವು ಇದ್ದು ಸಂಪೂರ್ಣ ಭರ್ತಿಯಾಗಲು ಕೇವಲ 2 ಅಡಿ ನೀರಿನ ಅವಶ್ಯಕತೆ ಇದೆ. ಪ್ರತಿವರ್ಷ ಅಗಸ್ಟ್ 2ನೇ ವಾರದಲ್ಲಿ ತುಂಗಭದ್ರಾ ಜಲಾಶಯವು ಭರ್ತಿಯಾಗುತ್ತದೆ.
ಹಾಗೂ ಅಗಸ್ಟ್ 15 ರಂದು ಜಲಾಶಯದ ಎಲ್ಲ 33 ಗೇಟುಗಳ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ಇನ್ನೂ 2 ಅಡಿಗಳಷ್ಟುನೀರು ಬರಬೇಕು. ಹಾಗೂ ಇನ್ನೂ 9 ಟಿಎಂಸಿ ಯಷ್ಟುನೀರು ಸಂಗ್ರಹವಾಗಬೇಕಿದೆ.