ದಕ್ಷಿಣ ಕನ್ನಡದಲ್ಲಿ ಮತ್ತೆ ಭಾರೀ ಮಳೆ

By Suvarna News  |  First Published Aug 17, 2020, 4:20 PM IST

ದಕ್ಷಿಣ ಕನ್ನಡದಲ್ಲಿ ಮತ್ತೆಮಳೆ ಚುರುಕುಗೊಂಡಿದೆ. ಕೆಲದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದೆ.


ಮಂಗಳೂರು (ಆ.17):  ದ.ಕ. ಜಿಲ್ಲೆಯಲ್ಲಿ ಭಾನುವಾರ ಸಂಜೆ ಬಳಿಕ ಮಳೆ ಆರಂಭವಾಗಿದ್ದು, ಮತ್ತೆ ಮಳೆಯ ಮುನ್ಸೂಚನೆ ಲಭಿಸಿದೆ.

ಭಾನುವಾರ ಬೆಳಗ್ಗಿನಿಂದ ಸಂಜೆವರೆಗೆ ಅಲ್ಪ ಮಳೆ ಸುರಿದದ್ದು ಬಿಟ್ಟರೆ, ಆಗಾಗ ಬಿಸಿಲೂ ಕಾಣಿಸಿಕೊಂಡಿತ್ತು. ಸಂಜೆಯಾದ ಬಳಿಕ ದಟ್ಟಮೋಡ ಕವಿದು ರಾತ್ರಿಯವರೆಗೂ ಮಳೆ ಸುರಿಯತೊಡಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.

Latest Videos

undefined

ಮಳೆ ವಿವರ: ಶನಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 11 ಮಿ.ಮೀ., ಬಂಟ್ವಾಳದಲ್ಲಿ 7 ಮಿ.ಮೀ., ಮಂಗಳೂರಿನಲ್ಲಿ 6 ಮಿ.ಮೀ., ಪುತ್ತೂರಿನಲ್ಲಿ 13 ಮಿ.ಮೀ., ಸುಳ್ಯದಲ್ಲಿ 13 ಮಿ.ಮೀ., ಮೂಡುಬಿದಿರೆಯಲ್ಲಿ 19 ಮಿ.ಮೀ., ಕಡಬದಲ್ಲಿ 9 ಮಿ.ಮೀ. ಮಳೆ ದಾಖಲಾಗಿದೆ.

ಅಲ್ಲದೇ ರಾಜ್ಯದ ಹಲವು ಪ್ರದೇಶಗಳಲ್ಲಿಯೂ ಮಳೆ ಅಬ್ಬರಿಸುತ್ತಿದ್ದು,ಮಲೆನಾಡು ಸೇರಿದಂತೆ ಹಲವು ಪ್ರದೇಗಳಲ್ಲಿ ಮಳೆ ಹೆಚ್ಚಾಗುತ್ತಿದೆ.

click me!