ನೆಲಕ್ಕೆ ಬಿದ್ದ ಕೆಜಿಗಟ್ಟಲೇ ತೂಕದ ಆಲಿಕಲ್ಲು!

By Kannadaprabha NewsFirst Published Apr 23, 2021, 1:43 PM IST
Highlights

ಗುರುವಾರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು ಕೆಜಿಗೂ ಅಧಿಕ ತೂಕದ ಆಲಿಕಲ್ಲುಗಳು ಬಿದ್ದಿವೆ. ಆಲಿಕಲ್ಲು ಮಳೆ ಅನೇಕ ಬೆಳೆಗಳಿಗೆ ಹಾನಿಯುಂಟು ಮಾಡಿದೆ. 

ಚಿಕ್ಕಬಳ್ಳಾಪುರ (ಏ.23):  ದ್ರಾಕ್ಷಿ, ಟೋಮೇಟೋ ಬೆಳಗಳ ಮೇಲೆ ಕೆಜಿಗಟ್ಟಲೇ ನೆಲಕ್ಕುರುಳಿದ ಆಲಿಕಲ್ಲು, ಬಿರುಗಾಳಿ ಮಳೆಯ ಅರ್ಭಟಕ್ಕೆ ಗಾಳಿಗೆ ಹಾರಿದ ಪಾಲಿಹೌಸ್‌. ಮಳೆ ರಭಸಕ್ಕೆ ವಾಣಿಜ್ಯ ಬೆಳೆಗಳು ಮಣ್ಣುಪಾಲು

ಹೌದು, ಗುರುವಾರ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆ ಸಾಕಷ್ಟುಅವಾಂತರ ಸೃಷ್ಠಿಸಿದೆ. ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲು ಬಡಿದು ಮನೆಯ ಗೋಡೆ ಕುಸಿದ ಪರಿಣಾಮ 7 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದು ಒಂದಡೆಯಾದರೆ ಮತ್ತೊಂದಡೆ ಮಳೆಯ ಸಿಂಚನಕ್ಕೆ ಅಪಾರ ಪ್ರಮಾಣದ ರೈತರ ಬೆಳೆಗಳು ನೆಲಕಚ್ಚಿವೆ.

ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟಹಾಗೂ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸುರಿದ ಮಳೆ ಸಾಕಷ್ಟುಹಾನಿ ಮಾಡಿದ್ದು ವಿಶೇಷವಾಗಿ ರೈತರು ಲಕ್ಷಾಂತರ ರು, ಬಂಡವಾಳ ಹಾಕಿ ಬೆಳೆದ ಟೊಮೇಟೋ, ದ್ರಾಕ್ಷಿ, ಹೂವು, ಪಪ್ಪಾಯಿ ಬೆಳೆಗಳು ನಾಶವಾಗಿದ್ದು ತೋಟಗಾರಿಕೆ ಇಲಾಖೆ ಪ್ರೋತ್ಸಾಹ ಧನದಿಂದ ಲಕ್ಷಾಂತರ ರೂ, ಬಂಡವಾಳ ಹೂಡಿ ನಿರ್ಮಿಸಿದ್ದ ಪಾಲಿಹೌಸ್‌ಗಳು ಬಿರುಗಾಳಿ ಮಳೆಗೆ ಹಾರಿ ಹೋಗಿ ರೈತರಿಗೆ ಲಕ್ಷಾಂತರ ರು, ಆರ್ಥಿಕ ನಷ್ಟುಉಂಟು ಮಾಡಿದೆ.

ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆ: ದಕ್ಷಿಣ ಕಾಶ್ಮೀರದಲ್ಲಿ ಸ್ನೋ ಫಾಲ್ ರೀತಿ .

ಈಗಾಗಲೇ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಅಪಾರ ಪ್ರಮಾಣದ ಮಾವು, ದ್ರಾಕ್ಷಿ, ಟೊಮೇಟೋ ನಾಶವಾಗಿ ರೈತರು ತೊಂದರೆಗೆ ಸಿಲುಕಿರುವ ಸಂದರ್ಭದಲ್ಲಿ ಮತ್ತೊಂದಡೆ ಕೊರೋನಾ ಸಂಕಷ್ಟದಿಂದ ಸೂಕ್ತ ಮಾರುಕಟ್ಟೆಸಿಗದೇ ಜಿಲ್ಲೆಯ ಹೂವು, ಹಣ್ಣು, ತರಕಾರಿ ಬೆಳೆಗಾರರು ದಿಕ್ಕು ತೋಚದಂತೆ ಚಿಂತೆಗೀಡಾಗಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯು ಸಾಕಷ್ಟುರೈತರು ಬೆಳೆಗಳಿಗೆ ಹಾನಿ ಉಂಟು ಮಾಡಿ ರೈತರು ಬೀದಿಗೆ ಬರುವಂತಾಗಿದೆ.

click me!